ಓಟ್ಸ್​ 
ಆಹಾರ

ಪ್ರತಿದಿನ ಬೆಳಗ್ಗೆ ಓಟ್ಸ್ ತಿನ್ನುವ ಅಭ್ಯಾಸವಿದ್ಯಾ? ಹಾಗಿದ್ರೆ, ತಪ್ಪದೇ ಈ ವಿಷಯಗಳನ್ನು ನೆನಪಿನಲ್ಲಿಡಿ!

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗಿನ ಉಪಹಾರಕ್ಕೆ ಓಟ್ಸ್ ಮೊರೆ
  • ಓಟ್ಸ್ ಆರೋಗ್ಯಕರ ಮತ್ತು ರುಚಿಕರ ಹೌದು! ಆದ್ರೆ...
Oats: ಜಿಮ್​, ವ್ಯಾಯಾಮ ಮಾಡುವವರು ಪ್ರತಿದಿನ ತಮ್ಮ ತಿಂಡಿಯ ಭಾಗವಾಗಿ ಓಟ್ಸ್ ತಿನ್ನುತ್ತಾರೆ. ಇದು ದೇಹದ ತೂಕವನ್ನು ಸಮತೋಲನವಾಗಿರಿಸಲು ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರಕ್ಕೆ ಓಟ್ಸ್ ತಿನ್ನುವುದರಿಂದ ಒಂದಷ್ಟು ನೆಗಟಿವ್​ ಪರಿಣಾಮಗಳಿವೆ ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.
ಪ್ರಸ್ತುತ, ಕಾಲಘಟ್ಟದಲ್ಲಿ ಓಟ್ಸ್ ಬಹುತೇಕರ ನೆಚ್ಚಿನ ತಿಂಡಿಯಾಗಿದೆ. ಇದು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಪ್ರತಿದಿನ ಓಟ್ಸ್ ಮಾತ್ರ ತಿನ್ನುವ ಬದಲಿಗೆ ಇತರ ಆಹಾರಗಳನ್ನು ಸೇರಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ತಜ್ಞರು. ಓಟ್ಸ್ ಆರೋಗ್ಯಕರ ಮತ್ತು ರುಚಿಕರ ಹೌದು. ವಿಶೇಷವಾಗಿ, ಹಾಲು, ಹಣ್ಣುಗಳು ಮತ್ತು ಬೀಜಗಳೊಂದಿಗೆ ಮಿಕ್ಸ್​ ಮಾಡಿಕೊಂಡು ತಿಂದರೆ ಅದರ ರುಚಿಯೇ ಬೇರೆ.
ನೀವು ಪ್ರತಿದಿನ ಓಟ್ಸ್ ತಿಂತಿದ್ದರೆ, ಖಂಡಿತವಾಗಿಯೂ ಈ ಐದು ವಿಷಯಗಳ ಬಗ್ಗೆ ಗಮನ ಹರಿಸಬೇಕು. ಓಟ್ಸ್ ಗ್ಲುಟನ್ ಮುಕ್ತವಾಗಿದೆ. ಆದರೆ, ಅನೇಕ ಕಾರ್ಖಾನೆಗಳು ಅವುಗಳನ್ನು ಗೋಧಿ, ಬಾರ್ಲಿ ಅಂತಹ ಗ್ಲುಟನ್ ಹೊಂದಿರುವ ಧಾನ್ಯಗಳೊಂದಿಗೆ ಸಂಸ್ಕರಿಸುತ್ತವೆ. ನಿಮಗೆ ಸೆಲಿಯಾಕ್ ಕಾಯಿಲೆ ಅಥವಾ ಗ್ಲುಟನ್ ಅಲರ್ಜಿಯಿದ್ದರೆ, ಪ್ರಮಾಣೀಕೃತ ಗ್ಲುಟನ್-ಮುಕ್ತ ಓಟ್ಸ್ ಅನ್ನು ಮಾತ್ರ ಆಯ್ಕೆ ಮಾಡುವುದು ಒಳಿತು. ನೀವು ಆಯ್ಕೆ ಮಾಡಿದ ಓಟ್ಸ್ ಉತ್ತಮವಾಗಿಲ್ಲದಿದ್ದರೆ, ಹೊಟ್ಟೆ ನೋವು, ಉಬ್ಬುವುದು ಅಥವಾ ಜೀರ್ಣಕಾರಿ ಸಮಸ್ಯೆಗಳು ಕಾಡಲಾರಂಭಿಸುತ್ತದೆ.
ಓಟ್ಸ್ ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದೆ. ಆದರೆ, ನಿಮ್ಮ ದೇಹವು ಫೈಬರ್‌ಗೆ ಒಗ್ಗಿಕೊಳ್ಳದಿದ್ದರೆ, ಹೆಚ್ಚು ಓಟ್ಸ್ ಸೇವನೆ ಗ್ಯಾಸ್​, ಉಬ್ಬುವುದು ಮತ್ತು ಹೊಟ್ಟೆ ಭಾರ ಎಂಬಂತೆ ಭಾಸವಾಗುತ್ತದೆ. ಕಡಿಮೆ ಪ್ರಮಾಣದ ಫೈಬರ್ ಸೇವಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಓಟ್ಸ್ ತೂಕ ನಿಯಂತ್ರಣಕ್ಕೆ ಸಹಾಯ ಮಾಡಿದರೂ, ಅವುಗಳನ್ನು ಹೆಚ್ಚಾಗಿ ತಿನ್ನುವುದರಿಂದ ತೂಕ ಏರಿಕೆಗೆ ಕಾರಣವಾಗಬಹುದು,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.