Recipe: ಸಾಮಾನ್ಯವಾಗಿ ಅನೇಕ ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಈ ಜನರು ಸಿಹಿ ಇಷ್ಟ ಇದ್ದರೂ ಕೆಲವೊಮ್ಮೆ ತಿನ್ನಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ ನೀವೇನಾದರೂ ಮಧುಮೇಹಿಗಳಾಗಿದ್ದರೆ, ಈ ರೀತಿಯ ಆಹಾರವನ್ನು ಬಾಳೆಹಣ್ಣಿನ ಕೇಕನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮಗೆ ಶಕ್ತಿಯನ್ನು ನೀಡುವುದರ ಜೊತೆಗೆ ರುಚಿಯನ್ನು ಕೊಡುತ್ತದೆ.
ಬೇಕಾಗುವ ಪದಾರ್ಥಗಳು
* 1.5 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು
* ವಾಲ್‌ನಟ್ ಅಥವಾ ಒಣದ್ರಾಕ್ಷಿ
ಮಾಡುವ ವಿಧಾನ
ಮೊದಲು ಒಂದು ಬೌಲ್ಗೆ ಬಾಳೆಹಣ್ಣು ಹಾಕಿ ಚೆನ್ನಾಗು ಮ್ಯಾಶ್ ಮಾಡಿಕೊಳ್ಳಿ. ನಂತರ ಅದಕ್ಕೆ ಮೊಟ್ಟೆ, ಕರಗಿದ ತುಪ್ಪ, ಹಾಲು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಾದ ಬಳಿಕ ಮತ್ತೊಂದು ಬೌಲ್ಗೆ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ದಾಲ್ಚಿನ್ನಿ ಪುಡಿ ಮತ್ತು ಉಪ್ಪು ಸ್ವಲ್ಪ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ನೀರು ಸೇರಿಸಿ ಮಿಶ್ರಣ ತಯಾರಿಸಿ. ಇದಕ್ಕೆ ಒಣದ್ರಾಕ್ಷಿ ಅಥವಾ ನಟ್ಸ್ ಸೇರಿಸಿಕೊಳ್ಳಿ.
ಈ ಮಿಶ್ರಣವನ್ನು ಒಂದು ಕೇಕ್ ತಯಾರಿಸುವ ಪಾತ್ರೆಗೆ ಹಾಕಿ 3- -40 ನಿಮಿಷ ಗ್ಯಾಸ್ ಮೇಲೆ ಸಣ್ಣ ಉರಿಯಿಟ್ಟು ಬೇಯಿಸಿಕೊಳ್ಳಿ. ನಂತರ ತೆಗೆಯಿರಿ. ತಣ್ಣಗಾದ ಬಳಿಕ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.