Coconut Milk Peda (ಸಾಂದರ್ಭಿಕ ಚಿತ್ರ) 
ಆಹಾರ

ಕೇವಲ 15 ನಿಮಿಷದಲ್ಲಿ ತಯಾರಿಸಿ 'ತೆಂಗಿನ ಹಾಲಿನ ಪೇಡ': ಇಲ್ಲಿದೆ ಬಾಯಲ್ಲಿ ನೀರೂರಿಸುವ ರೆಸಿಪಿ! Coconut Milk Peda

Coconut Milk Peda: ತೆಂಗಿನ ಹಾಲಿನ ಪೇಡ ಒಂದು ವಿಶಿಷ್ಟ ಮತ್ತು ಸ್ವಾದಿಷ್ಟವಾದ ಸಿಹಿ ತಿಂಡಿ. ಸಾಮಾನ್ಯವಾಗಿ ನಾವು ಹಾಲಿನಿಂದ ಮಾಡಿದ ಪೇಡಗಳನ್ನು ಸವಿದಿರುತ್ತೇವೆ, ಆದರೆ ತೆಂಗಿನ ಹಾಲಿನಿಂದ ಮಾಡುವ ಈ ಪೇಡವು ತನ್ನದೇ ಆದ ವಿಶಿಷ್ಟ ರುಚಿ ಮತ್ತು ಪರಿಮಳವನ್ನು ಹೊಂದಿದೆ.

ಬೇಕಾಗುವ ಪದಾರ್ಥಗಳು

* 2 ಕಪ್ ಗಟ್ಟಿ ತೆಂಗಿನ ಹಾಲು
* 1/2 ಕಪ್ ಹಾಲಿನ ಪುಡಿ
* 1/2 ಕಪ್ ಸಕ್ಕರೆ
* 1/2 ಚಮಚ ಏಲಕ್ಕಿ ಪುಡಿ
* 1-2 ಚಮಚ ತುಪ್ಪ
* ಗೋಡಂಬಿ ಅಥವಾ ಪಿಸ್ತಾ

ಮಾಡುವ ವಿಧಾನ

ಒಂದು ದಪ್ಪ ತಳದ ಬಾಣಲೆಗೆ ತೆಂಗಿನ ಹಾಲು ಮತ್ತು ಹಾಲಿನ ಪುಡಿಯನ್ನು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಈಗ ಬಾಣಲೆಯನ್ನು ಸಣ್ಣ ಉರಿಯಲ್ಲಿಟ್ಟು ಸತತವಾಗಿ ಕೈಯಾಡಿಸುತ್ತಾ ಬಿಸಿ ಮಾಡಿ. ಮಿಶ್ರಣವು ಸ್ವಲ್ಪ ಗಟ್ಟಿಯಾಗಲು ಪ್ರಾರಂಭವಾದಾಗ ಅದಕ್ಕೆ ಸಕ್ಕರೆಯನ್ನು ಸೇರಿಸಿ.
ಮಿಶ್ರಣವು ಬಾಣಲೆಯ ತಳ ಬಿಟ್ಟು ಮುದ್ದೆಯಂತೆ ಗಟ್ಟಿಯಾಗುವವರೆಗೆ ಕೈಯಾಡಿಸುತ್ತಲೇ ಇರಿ. ಈ ವೇಳೆ ಸ್ವಲ್ಪ ತುಪ್ಪವನ್ನು ಸೇರಿಸಿದರೆ ಪೇಡ ಮೆತ್ತಗೆ ಮತ್ತು ಹೊಳೆಯುವಂತೆ ಬರುತ್ತದೆ. ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ, ಉರಿಯನ್ನು ಆರಿಸಿ.
ಮಿಶ್ರಣವು ಸ್ವಲ್ಪ ಉಗುರು ಬೆಚ್ಚಗಿರುವಾಗ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು, ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೇಡದ ಆಕಾರ ನೀಡಿ. ಪೇಡದ ಮಧ್ಯಭಾಗದಲ್ಲಿ ಸ್ವಲ್ಪ ಒತ್ತಿ ಅದರ ಮೇಲೆ ಪಿಸ್ತಾ ಅಥವಾ ಗೋಡಂಬಿ ಚೂರನ್ನು ಇರಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.