Recipe : ಭಾನುವಾರ ಬಂದೇ ಬಿಡ್ತು, ಅಡುಗೆ ಏನು ಮಾಡಬೇಕು ಅಂತಾ ಯೋಚುಸ್ತಾ ಇದ್ದೀರಾ? ನಾವಿಂದು ಮಾಂಸಹಾರಿಗಳಿಗೆ ಅದರಲ್ಲೂ ಬ್ಯಾಚುಲರ್ಸ್ಗಳಿಗಾಗಿ ಚಿಕನ್ ಸುಕ್ಕಾ ಮಾಡುವುದನ್ನು ಹೇಳಿಕೊಡಲಿದ್ದೇವೆ. ಇನ್ಯಾಕೆ ತಡ ಈಗ್ಲೇ ನೋಡಿ, ಟ್ರೈ ಮಾಡಿ, ಟೇಸ್ಟ್ ಹೆಂಗಿದೆ ಅಂತಾ ಹೇಳಿ!..
ಬೇಕಾಗುವ ಸಾಮಗ್ರಿಗಳು
* 1 ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1-2 ಚಮಚ ರೆಡ್ ಚಿಲಿ ಪೌಡರ್
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಚಿಕನ್ನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, ಚಿಲ್ಲಿ ಪೌಡರ್, ಉಪ್ಪು ಹಾಕಿ 10-15 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ.
ನಂತರ ಒಂದು ಕುಕ್ಕರ್ಗೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದಕ್ಕೆ, ಕರಿಬೇವು, ಈರುಳ್ಳಿ ತುಂಡುಗಳು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಇದಾದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ. ಟೊಮೇಟೋ ಮೃದುವಾಗುವವರೆಗೂ ಬೇಯಿಸಿರಿ. ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಜೋರಾದ ಉರಿಯಲ್ಲಿ ಬೇಯಿಸಿರಿ.
ರೆಡಿಯಾಗಿರುವ ಮಿಶ್ರಣಕ್ಕೆ ಮಸಾಲಾ ಪೌಡರ್‌ಗಳು ಹಾಕಿ ಮಿಕ್ಸ್ ಮಾಡಿ. ಅರ್ಧ ಕಪ್ ನೀರು ಹಾಕಿ, ಮುಚ್ಚಳ ಹಾಕಿ ಮಧ್ಯಮ ಉರಿಯಲ್ಲಿ 20 ನಿಮಿಷಗಳ ಕಾಲ ಕುಕ್ ಮಾಡಿರಿ. ಈ ಮಿಶ್ರಣದಲ್ಲಿ ನೀರು ಒಣಗಿ ಚಿಕನ್ ಬೆಂದ ನಂತರ, ಅರ್ಧ ಕಪ್ ತುರಿದ ತೆಂಗಿನಕಾಯಿ ಹಾಕಿ ಕೊಬ್ಬರಿ ಹಾಕಿ ಮದ್ಯಮ ಉರಿಯಲ್ಲಿ 5 ನಿಮಿಷ ಬೇಯಿಸಿರಿ. ನಂತರ ಚಪಾತಿಯೊಂದಿಗೆ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.