Recipe : ಭಾನುವಾರ ಬಂದೇ ಬಿಡ್ತು, ಅಡುಗೆ ಏನು ಮಾಡಬೇಕು ಅಂತಾ ಯೋಚಿಸ್ತಾ ಇದ್ದೀರಾ? ನಾವಿಂದು ಮಾಂಸಹಾರಿಗಳಿಗೆ ಅದರಲ್ಲೂ ಬ್ಯಾಚುಲರ್ಸ್ಗಳಿಗಾಗಿ ಚಿಕನ್ ಸುಕ್ಕಾ ಮಾಡುವುದನ್ನು ಹೇಳಿಕೊಡಲಿದ್ದೇವೆ. ಇನ್ಯಾಕೆ ತಡ ಈಗ್ಲೇ ನೋಡಿ, ಟ್ರೈ ಮಾಡಿ, ಟೇಸ್ಟ್ ಹೆಂಗಿದೆ ಅಂತಾ ಹೇಳಿ!..
ಬೇಕಾಗುವ ಸಾಮಗ್ರಿಗಳು
* 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1/2 ಚಮಚ ಕಾಳು ಮೆಣಸು ಪುಡಿ
* ಉಪ್ಪು - ರುಚಿಗೆ ತಕ್ಕಷ್ಟು
* ನೀರು - ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಒಂದು ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಅದಕ್ಕೆ ಈರುಳ್ಳಿ ಹಾಕಿ ಚಿನ್ನದ ಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ತುಂಡುಗಳನ್ನು ಹಾಕಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. ಈ ಮಿಶ್ರಣಕ್ಕೆ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
ಸ್ವಲ್ಪ ನೀರು ಹಾಕಿ ಮಸಾಲೆ ಸುಟ್ಟು ಹೋಗದಂತೆ ನೋಡಿಕೊಳ್ಳಿ. ನಂತರ ಇದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮುಚ್ಚಳ ಹಾಕಿ ಮಧ್ಯಮ ಉರಿಯಲ್ಲಿ 15 ನಿಮಿಷ ಬೇಯಿಸಿರಿ. ಚಿಕನ್ ಮೆತ್ತಗಾದ ನಂತರ ಸ್ವಲ್ಪ ನೀರು ಹಾಕಿ ಗ್ರೇವಿ ತಯಾರಿಸಿ. 5-10 ನಿಮಿಷ ಕುದಿಸಿ ಕೊತ್ತುಂಬರಿ ಸೊಪ್ಪು ಹಾಕಿ ಸ್ವಲ್ಪ ಸಮಯ ಬಿಟ್ಟು ಸೇವಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.