Dal fry: ಭಾರತೀಯ ಅಡುಗೆಯ ಅತ್ಯಂತ ಜನಪ್ರಿಯ ಮತ್ತು ಆರಾಮದಾಯಕ ಆಹಾರಗಳಲ್ಲಿ ದಾಲ್ ಫ್ರೈ ಒಂದು. ಇದು ಸಸ್ಯಾಹಾರಿಗಳಿಗೆ ಪ್ರೋಟೀನ್ ಪಡೆಯುವ ಪ್ರಮುಖ ಮೂಲವಾಗಿದ್ದು, ಇದರಿಂದ ಸ್ನಾಯುಗಳ ಬೆಳವಣಿಗೆಗೆ ಮತ್ತು ದೇಹದ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಈ ರೆಸಿಪಿ ಅತಿ ಕಡಿಮೆ ಸಮಯ, ಹಾಗೂ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದು. ಹಾಗಿದ್ದರೆ, ಇನ್ಯಾಕೆ ತಡ ಈಗಲೇ ತಯಾರಿಸಿ ಸೇವಿಸಿ..
ಬೇಕಾಗುವ ಸಾಮಾಗ್ರಿಗಳು
* 1 ಚಮಚ ಬೆಳ್ಳುಳ್ಳಿ,ಶುಂಠಿ ಪೇಸ್ಟ್
ಮಾಡುವ ವಿಧಾನ
ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಪ್ರೆಶರ್ ಕುಕರ್‌ಗೆ ಹಾಕಿ. ಅರಿಶಿನ, ಸ್ವಲ್ಪ ಉಪ್ಪು, 2-2.5 ಕಪ್ ನೀರು ಹಾಕಿ 3-4 ವಿಸಲ್ ಕೂಗಿಸಿಕೊಳ್ಳಿ. ನಂತರ ಕುಕ್ಕರ್ ತೆರೆದ ಮೇಲೆ ಬೇಳೆಯನ್ನು ಸ್ವಲ್ಪ ಸ್ಮಾಶ್ ಮಾಡಿಕೊಳ್ಳಿ. ಇದಾದ ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ/ತುಪ್ಪ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಒಣ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಟೊಮೇಟೊ, ಹಸಿ ಮೆಣಸಿನಕಾಯಿ ಹಾಕಿ ಮೃದುವಾಗುವವರೆಗೆ ಬೇಯಿಸಿರಿ.
ಈ ಮಿಶ್ರಣಕ್ಕೆ ಕೆಂಪು ಮೆಣಸಿನ ಪುಡಿ, ಗರಮ್ ಮಸಾಲಾ/ದಾಲ್ ಮಸಾಲಾ ಹಾಕಿ 30 ಸೆಕೆಂಡ್ ಹುರಿಯಿರಿ. ಈಗ ಬೇಯಿಸಿದ ಬೇಳೆಯನ್ನು ಹಾಕಿ, ಉಪ್ಪು ಚೆಕ್ ಮಾಡಿ, ಸ್ವಲ್ಪ ನೀರು ಸೇರಿಸಿ 5-7 ನಿಮಿಷ ಕುದಿಸಿ ಕೊತ್ತುಂಬರಿ ಸೊಪ್ಪು ಉದುರಿಸಿರಿ. ನಂತರ ಅನ್ನ, ಚಪಾತಿ, ರೊಟ್ಟಿಯೊಂದಿಗೆ ಸವಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.