ಸಾಂದರ್ಭಿಕ ಚಿತ್ರ 
ಆಹಾರ

ತೂಕ ಇಳಿಸಿಕೊಳ್ಳಲು ಟ್ರೈ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ರೆಸಿಪಿ ಮಾಡಿ ಪ್ರಯೋಜನ ಪಡೆಯಿರಿ! Recipe

Recipe: ರಾಗಿ ಸ್ಮೂಥಿ ಕುಡಿಯುವುದರಿಂದ ದೇಹಕ್ಕೆ ಅಧಿಕ ಪೌಷ್ಟಿಕಾಂಶಗಳು ದೊರೆಯುತ್ತವೆ. ಇದು ಕ್ಯಾಲ್ಸಿಯಂ, ಐರನ್, ಫೈಬರ್​​ನಿಂದ ತುಂಬಿದ್ದು, ತೂಕ ನಿಯಂತ್ರಣಕ್ಕೆ, ಮಧುಮೇಹ ನಿಯಂತ್ರಣ ಹಾಗೂ ತೂಕ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಈ ಪದಾರ್ಥವನ್ನು ಬ್ರೇಕ್​ಫಾಸ್ಟ್​ ಅಥವಾ ಸಂಜೆಯ ಸ್ನಾಕ್ಸ್​ ಆಗಿಯೂ ಸೇವಿಸಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು

* 3-4 ಚಮಚ ರಾಗಿ ಹಿಟ್ಟು
* 2 ಬಾಳೆಹಣ್ಣು
* 5-6 ನೆನಸಿದ ಬಾದಾಮಿ ಅಥವಾ ವಾಲ್‌ನಟ್
* 4-5 ಬೀಜ ತೆಗೆದ ಖರ್ಜೂರ
* 2 ಕಪ್​ ಬಾದಾಮಿ ಹಾಲು
* 1-2 ಚಮಚ ದಾಲ್ಚಿನ್ನಿ ಪುಡಿ
* ಸ್ವಲ್ಪ ಐಸ್​ ಕ್ಯೂಬ್​
ಮಾಡುವ ವಿಧಾನ
ಮೊದಲು ರಾಗಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿಕೊಳ್ಳಿ. ನಂತರ ಕುದಿಯುವಂತೆ ಬೇಯಿಸಿ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಬಾಳೆಹಣ್ಣು, ನೆನೆಸಿದ ಬಾದಾಮಿ, ಖರ್ಜೂರ, ತಣ್ಣಗಾದ ರಾಗಿ ಮಿಶ್ರಣ, ಹಾಲು ಮತ್ತು ದಾಲ್ಚಿನ್ನಿ ಪುಡಿ ಹಾಕಿ ಸ್ಮೂತ್​ ಆಗುವಂತೆ ರುಬ್ಬಿಕೊಳ್ಳಿ. ಅಗತ್ಯವಿದ್ದರೆ, ಸ್ವಲ್ಪ ಹಾಲು ಅಥವಾ ನೀರನ್ನು ಸೇರಿಸಿ.
ನಂತರ ಒಂದು ಗ್ಲಾಸ್​ಗೆ ಇದನ್ನು ಹಾಕಿ ಅದಕ್ಕೆ ಸ್ವಲ್ಪ ನಟ್ಸ್​, ರಾಗಿ ಸೀಡ್ಸ್​​ ಸೇರಿಸಿ ಕುಡಿಯಿರಿ.

ಪ್ರಯೋಜನಗಳೇನು?

1. ತೂಕ ಇಳಿಸಲು ಸಹಾಯಕ: ರಾಗಿಯಲ್ಲಿ ಹೆಚ್ಚು ಫೈಬರ್ ಇರುವುದರಿಂದ ಹಸಿವು ನಿಯಂತ್ರಣವಾಗಿದ್ದು, ತೂಕ ಕಡಿಮೆಯಾಗುತ್ತದೆ.
2. ಮಧುಮೇಹ ನಿಯಂತ್ರಣ: ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದರಿಂದ ರಕ್ತದ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ.
3.ಮೂಳೆಗಳನ್ನು ಬಲಪಡಿಸುತ್ತದೆ: ರಾಗಿಯಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದ್ದು, ಆಸ್ಟಿಯೊಪೊರೋಸಿಸ್ ತಡೆಗಟ್ಟುತ್ತದೆ ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
4. ರಕ್ತಹೀನತೆ ತಡೆಗಟ್ಟುತ್ತದೆ: ರಾಗಿಯಲ್ಲಿ ಹೆಚ್ಚು ಐರನ್ ಮತ್ತು ವಿಟಮಿನ್ ಸಿ ಇರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.
5. ಜೀರ್ಣಕ್ರಿಯೆ ಸುಧಾರಿಸುತ್ತದೆ: ಫೈಬರ್ ಸಮೃದ್ಧವಾಗಿದ್ದು, ಮಲಬದ್ಧತೆ ದೂರ ಮಾಡಿ ಜೀರ್ಣವ್ಯವಸ್ಥೆ ಒಳ್ಳೆಯದಾಗಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.