Recipe: ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಎಷ್ಟು ಕಷ್ಟವೋ ಅಷ್ಟೇ ತೂಕ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಯು ಸುಲಭದ ಮಾತೇನಲ್ಲ. ಹಲವಾರು ಜನರು ತೂಕ ಹೆಚ್ಚಿಸಿಕೊಳ್ಳಲು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ, ಫಲಿತಾಂಶದಲ್ಲಿ ನಿರಾಸೆಗೊಳ್ಳುತ್ತಾರೆ. ಹಾಗಾಗಿ ನೀವೇನಾದರೂ, ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಇಂದಿನಿಂದಲೇ ಈ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಕೆಲವೇ ದಿನಗಳಲ್ಲಿ ತೂಕ ಹೆಚ್ಚಳವಾಗಲು ಸಹಾಯ ಮಾಡುತ್ತದೆ.
ಬೇಕಾಗುವ ಪದಾರ್ಥಗಳು
ಮಾಡುವ ವಿಧಾನ
ಖರ್ಜೂರ, ಬಾದಾಮಿ, ಗೋಡಂಬಿಯನ್ನು 10 ನಿಮಿಷ ಬಿಸಿ ಹಾಲಿನಲ್ಲಿ ನೆನಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಎಲ್ಲಾ ಸಾಮಾಗ್ರಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಹಾಕಿ ಕುಡಿಯಿರಿ.
ಯಾವಾಗ ಕುಡಿಯಬೇಕು?
1. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ 1 ಗಂಟೆ ಮುಂಚೆ ಕುಡಿಯಿರಿ
2. ವರ್ಕೌಟ್ ಮುಗಿದ 30 ನಿಮಿಷದೊಳಗೆ ಕುಡಿಯಿರಿ
3. ಬೆಳಗ್ಗೆ ಊಟಕ್ಕೆ ಬದಲಾಗಿ ಅಥವಾ ರಾತ್ರಿ ಊಟದ ಬದಲು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.