- ತೂಕ ಹೆಚ್ಚಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸ ಎಂದು ಬಹಳಷ್ಟು ಜನ ನಂಬಿರುತ್ತಾ
- ಕೆಲವೊಮ್ಮೆ ದೇಹದಲ್ಲಿ ತೂಕ ಹೆಚ್ಚಾಗದೇ ನಿರಾಸೆಗೊಳ್ಳುತ್ತಾರೆ
- ಪ್ರೊಟೀನ್ ಹೊಂದಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿ
Weight gain recipe: ತೂಕ ಹೆಚ್ಚಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸ ಎಂದು ಬಹಳಷ್ಟು ಜನ ನಂಬಿರುತ್ತಾರೆ. ಅದರಂತೆ ಅನೇಕರು ಅನೇಕ ಪದಾರ್ಥಗಳನ್ನು ಸೇವಿಸುತ್ತಾರೆ. ಕೆಲವರು ಜಿಮ್ಗೆ ಹೋಗುತ್ತಾರೆ. ಇನ್ನು ಕೆಲವರು ಔಷಧಿಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಈ ರೀತಿಯಾಗಿ ಮಾಡಿದರೂ ಕೆಲವೊಮ್ಮೆ ದೇಹದಲ್ಲಿ ತೂಕ ಹೆಚ್ಚಾಗದೇ ನಿರಾಸೆಗೊಳ್ಳುತ್ತಾರೆ. ಹಾಗಾಗಿ ಈ ರೀತಿಯ ಪ್ರೊಟೀನ್ ಹೊಂದಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
1. ಬಾಳೆ ಹಣ್ಣು-ಓಟ್ಸ್ ಸ್ಮೂಥಿ
ಬೇಕಾಗುವ ಪದಾರ್ಥಗಳು
* 2-3 ಹನಿ ವೆನಿಲ್ಲಾ ಎಸೆನ್ಸ್
ಮಾಡುವ ವಿಧಾನ
ಮೊದಲಿಗೆ ಒಂದು ಬಟ್ಟಲು ತೆಗೆದುಕೊಳ್ಳಿ ಅದಕ್ಕೆ, ಓಟ್ಸ್ ಹಾಕಿ 5 ನಿಮಿಷಗಳ ಕಾಲ ನೆನಸಿಡಿ. ನಂತರ ಬಾಳೆಹಣ್ಣನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಇದಾದ ಬಳಿಕ ಒಂದು ಮಿಕ್ಸಿ ಜಾರಿಗೆ ಬಾಳೆಹಣ್ಣು, ಓಟ್ಸ್, ಮೊಸರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಹಾಲು, ಜೇನುತುಪ್ಪ, ಏಲಕ್ಕಿ ಪುಡಿ, ಐಸ್ ಕ್ಯೂಬ್ಸ್ ಸೇರಿಸಿ ಮತ್ತೆ ನಯವಾಗಿ ಮಿಕ್ಸಿ ಮಾಡಿಕೊಳ್ಳಿ. ನಂತರ ಸೇವಿಸಿರಿ.
2. ಸಟ್ಟು ಡ್ರಿಂಕ್ (Sattu Drink)
ಬೇಕಾಗುವ ಪದಾರ್ಥಗಳು
* 1/2 ಕಪ್ ಹುರಿದ ಗೋಧಿ ಹಿಟ್ಟು
* ಒಂದು ಚಿಟಿಕೆ ಕಾಳು ಮೆಣಸು ಪುಡಿ
ಮಾಡುವ ವಿಧಾನ
ಮೊದಲು ಒಂದು ಗ್ಲಾಸ್ಗೆ ಹುರಿದ ಗೋಧಿ ಹಿಟ್ಟು ಹಾಕಿರಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ನಿಂಬೆ ರಸ, ಕರಿಮೆಣಸು, ಜೀರಿಗೆ ಪುಡಿ, ಕಾಳು ಮೆಣಸು, ಉಪ್ಪು ಕೊತ್ತುಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಐಸ್ ಕ್ಯೂಬ್ ಹಾಕಿ ಕುಡಿಯಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.