Tomato Chutney: ಕಾಯಿ ಚಟ್ನಿ, ಹುರಿಗಡಲೇ ಚಟ್ನಿ, ಕಡಲೇ ಬೀಜದ ಚಟ್ನಿ, ಹೀರೆಕಾಯಿ ಹೊಟ್ಟಿನ ಚಟ್ನಿ, ಪುದೀನಾ, ಹೀಗೇ ನಾನಾ ರೀತಿಯಲ್ಲಿ ಭಾರತದಲ್ಲಿ ತಯಾರಿ ಮಾಡಲಾಗುತ್ತದೆ, ಇದು ಅನ್ನಕ್ಕೆ ಸಾರು ಎನ್ನುವಂತೆಯೂ ಹೌದು, ದೋಸೆ, ಇಡ್ಲಿ, ಚಪಾತಿ ಪರೋಟಕ್ಕೆ ಸೈಡ್ ಡಿಶ್ ಹೌದು.
ಇಂದು ನಾವು ದೇಹಕ್ಕೆ ಪ್ರೋಟೀನ್ ನೀಡುವ ಟೊಮ್ಯಾಟೋ ಚಟ್ನಿ ಬಗ್ಗೆ ತಿಳಿದುಜೊಲ್ಳೋಣ. ಯಾವುದೇ ಎಣ್ಣೆಯ ಸಹಾಯವಿಲ್ಲದೆ, ಗ್ಯಾಸ್ನ ಹಬೆಯ ಮೂಲಕ ಹಸಿರು ಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ, ಪುದೀನಾ, ಮತ್ತು ಸಾಕಷ್ಟು ಪದಾರ್ಥ ಹಾಕಿ ಮಾಡುವ ಚಟ್ನಿಗಳು ಎಂದಿಗೂ ದೇಹಕ್ಕೆ ಒಳ್ಳೆಯದರು ಅದರಂತೆ ಟೊಮ್ಯಾಟೋ ಚಟ್ನಿಯು ಹೌದು.
ಟೊಮ್ಯಾಟೋ ಚಟ್ನಿ ಯಾಕೆ ಬೆಸ್ಟ್?
ಸಾಮಾನ್ಯವಾಗಿ ಬ್ಯಾಚುಲರ್ಸ್ ಅಡುಗೆ ಮಾಡಿಕೊಳ್ಳಲು ಒದ್ದಾಡುತ್ತಾರೆ. ಹೀಗಾಗಿ, ಹೆಚ್ಚು ಸಮಯವೂ ತೆಗೆದುಕೊಳ್ಳದೆ, ಶ್ರಮವೂ ಹಾಕದೇ ಟೊಮ್ಯಾಟೋ ಚಟ್ನಿಯನ್ನು ತಯಾರಿಸಬಹುದು. ಇದು ಕೊತ್ತಂಬರಿ, ಅರಿಶಿನ, ಮೆಣಸು, ಕಡಲೆಯಂತಹ ಪ್ರೋಟೀನ್ ಅಂಶವಿರುವ ಚಟ್ನಿಯಾಗಿದೆ. ಹೊರಗಡೆ ಹೋಟೆಲ್ಗಳಲ್ಲಿ ದುಬಾರಿ ಊಟ ಮತ್ತು ಆರೋಗ್ಯಕರವಲ್ಲದ ಆಹಾರ ಸೇವಿಸುವ ಬದಲು ಇದು ಬೆಸ್ಟ್.
ಪ್ರೋಟೀನ್ ಭರಿತ ಟೊಮ್ಯಾಟೋ ಚಟ್ನಿ ತಯಾರಿ ಮಾಡೋದು ಹೇಗೆ?
ಬೇಕಾಗುವ ಪದಾರ್ಥಗಳು
- 4-5 ಟೊಮ್ಯಾಟೋಗಳು
- 3-4 ಕತ್ತರಿಸಿದ ಹಸಿ ಮೆಣಸು
- 2 ಚಮಚ ಕಡಲೆ ಬೇಳೆ
- 1/2 ಕಪ್ ಕಡಲೆಕಾಯಿ
- 2 ಕೆಂಪು ಮೆಣಸಿನಕಾಯಿಗಳು
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಕೊತ್ತಂಬರಿ ಬೀಜ
- 4-5 ಕರಿಬೇವು ಎಲೆ
- 1 ಚಮಚ ಬೆಳ್ಳುಳ್ಳಿ
- ತುರಿದ1/2 ಟೀಸ್ಪೂನ್ ಶುಂಠಿ
- 1 ಚಮಚ ಕೊತ್ತಂಬರಿ ಸೊಪ್ಪು
- ಕತ್ತರಿಸಿದ್ದು1 ಚಮಚ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ಕೊತ್ತಂಬರಿ ಹಾಕಿ ಉರಿದುಕೊಳ್ಳಿ ನಂತರ ಕಡಲೆ ಕಾಯಿ, ಬೇಳೆ ಸೇರಿಸಿ. ಅದನ್ನು ಪಕ್ಕಕ್ಕೆ ಇಟ್ಟು ಬಿಸಿ ಆರಲು ಬಿಡಿ. ಇತ್ತ ಟೊಮ್ಯಾಟೋ ಮತ್ತು ಬೇಕಾದರೆ ಈರುಳ್ಳಿ, ಮೆಣಸಿನಕಾಯಿಯನ್ನು ಉರಿದುಕೊಳ್ಳಿ. ಅದಕ್ಕೆ ಕೊಂಚ ಮೆಣಸಿನ ಪುಡಿ ಹಾಕಿ ಉರಿಯಲು ಬಿಡಿ. 2-3 ನಿಮಿಷ ಉರಿದ ನಂತರ ಪದಾರ್ಥಗಳು ತಣ್ಣಗಾಗಲು ಬಿಡಿ. ಉರಿದು ಕೊಂಡ ಎಲ್ಲ ಆಹಾರ ಪದಾರ್ಥ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ, ಜೊತೆಗೆ ಬೆಳ್ಳುಳ್ಳಿಯನ್ನು ಹಾಕಿ ಉಪ್ಪು ಹಾಕಿ.
ರುಬ್ಬಿದ ಚಟ್ನಿಯನ್ನು ಒಂದು ಪಾತ್ರೆಯಲ್ಲಿ ಹಾಕಿ...ನಿಮ್ಮ ಪೌಷ್ಠಿಕಾಂಶವುಳ್ಳ ಚಟ್ನಿ ರೆಡಿ ಹೆಚ್ಚು ದೈಹಿಕ ಶ್ರಮ ಹಾಕದೇ ರುಚಿಯಾಗಿ ಅನ್ನ, ಚಪಾತಿ, ಪರೋಟ ದೋಸೆಯೊಂದಿಗೆ ಈ ಚಟ್ನಿ ಸೇವನೆ ಮಾಡಬಹುದು, (ಏಜೆನ್ಸೀಸ್).