Heatwave 
ಆಹಾರ

ಬೇಸಿಗೆ ಶಾಖಕ್ಕೆ ನಿರ್ಜಲೀಕರಣ, ಚರ್ಮದ ಸಮಸ್ಯೆ ಕಾಡ್ತಿದ್ಯಾ?; ದೇಹ ತಂಪಾಗಿಸಲು ಮಜ್ಜಿಗೆ ಜೊತೆಗೆ ಈ 6 ಜ್ಯೂಸ್​ ಕುಡಿಯಿರಿ ..Heatwave

ಪ್ರಮುಖ ಮುಖ್ಯಾಂಶಗಳು

  • ನಿರ್ಜಲೀಕರಣ ಮತ್ತು ಚರ್ಮದ ಸಮಸ್ಯೆ ಈ ಬೇಸಿಗೆಯಲ್ಲಿ ಕಾಡೋದು ಸಾಮಾನ್ಯ
  • ಬೇಸಿಗೆಯಲ್ಲಿ ದೇಹದ ಶಾಖ ಮತ್ತು ಚರ್ಮದ ಕಾಂತಿ ಕಾಪಾಡಿಕೊಳ್ಳಲು ಹೀಗೆ ಮಾಡಿ
  • ಮೊಸರು, ಸೌತೆಕಾಯಿ ಸೋರೆಕಾಯಿ ಎಳನೀರು, ನಿಂಬೆ, ಪುದೀನ ಇವು ಬಳಕೆ ಮಾಡಿ
Heatwave: ಫೆಬ್ರವರಿಯಿಂದಲೇ ಸೂರ್ಯನ ಪ್ರಖರತೆ ಜೋರಾಗಿತ್ತು..ಸದ್ಯ ದೇಶದ ಹಲವು ಜನರು ಬಿಸಿಲಿನ ಬೇಗೆಯಿಂದ ಬೆಂಡಾಗಿದ್ದಾರೆ. ನಿರ್ಜಲೀಕರಣದಿಂದಾಗಿ ಜೀರ್ಣಾಂಗ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ವಿಪರೀತ ಶಾಖದಿಂದಾಗಿ ಮೂಗಿನಲ್ಲಿ ರಕ್ತ ಸೋರುವುದು, ಮೂಲವ್ಯಾಧಿ ಕಾಣಿಸಿಕೊಳ್ಳೋದು ಸಾಮಾನ್ಯ. ಈ ಹೊತ್ತಲ್ಲಿ ನಿಮ್ಮ ದೇಹವನ್ನು ತಂಪಾಗಿ ಇಡಲು ಕೆಲವು ಸಲಹೆಗಳನ್ನು ಪಾಲಿಸಿ ಎನ್ನುತ್ತಾರೆ ವೈದ್ಯರು.
ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯಲು ಬೋರು ಎನಿಸಿದರೆ, ಕಲ್ಲಂಗಡಿ ಹಣ್ಣು, ಮಜ್ಜಿಗೆ ಹಾಗೂ ಎಳನೀರು ಸೇರಿದಂತೆ ಈ ಐದು ಪದಾರ್ಥಗಳನ್ನು ನೀರಿನಂತೆ ಸೇವಿಸಿದರೆ ಖಂಡಿತವಾಗಿಯೂ ಈ ಬೇಸಿಗೆಯಲ್ಲಿ ನೀವು ನಿಮ್ಮ ಹೊಟ್ಟೆಗೆ ಕಾಡುವ ಸಮಸ್ಯೆಯಿಂದ ದೂರವಾಗಿ ಆರಾಮಾದಾಯಕವಾಗಿ ದಿನ ಕಳೆಯಬಹುದಾಗಿದೆ. ಹಾಗಾದರೆ, ಎಳನೀರು, ಮೊಸರು, ಕಲ್ಲಂಗಡಿ ಜೊತೆಗೆ ಇನ್ಯಾವ ಪದಾರ್ಥಗಳು ದೇಹದಲ್ಲಿ ನೀರಿನ ಮಟ್ಟ ಹೆಚ್ಚಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ

ಸೋರೆಕಾಯಿ ಎಂದು ಮೂಗು ಮುರಿಬೇಡಿ

ಸೋರೆಕಾಯಿ ಸಾಮಾನ್ಯವಾಗಿ ಸಾಂಬಾರಿಗೋ ಪಲ್ಯಕ್ಕೋ ಬಳಕೆ ಮಾಡಿಕೊಳ್ಳೋದು ಅಷ್ಟೆ ತಿಳಿದಿರೋದು ಆದರೆ, ಇದರಲ್ಲಿ ವಿಟಮಿನ್ ಸಿ, ಬಿ, ಇದೆ. ಶೇ.94ರಷ್ಟು ನೀರನ್ನೇ ಹೊಂದಿರುವ ಈ ಕಾಯಿ ಜೀರ್ಣಕ್ರಿಯೆಗೆ ಮತ್ತು ದೇಹ ತಂಪಾಗುವಿಕೆಗೆ ಭಾರಿ ಸಹಾಯವನ್ನು ಮಾಡುತ್ತದೆ. ದೇಹದ ಆಂತರಿಕ ಶಾಖವನ್ನು ಕಡಿಮೆ ಮಾಡುತ್ತದೆ. ಸೋರೆಕಾಯಿಯನ್ನು ಜ್ಯೂಸ್ ಆಗಿ ಅಥವಾ ಲಘು ಪಲ್ಯದ ರೂಪದಲ್ಲಿ ಸೇವಿಸಬಹುದು.

ವಾಕರಿಕೆಯನ್ನು ಕಡಿಮೆ ಮಾಡುವ ಪುದೀನ

ಪುದೀನದಲ್ಲಿ ಮೆಂಥಾಲ್ ಇದ್ದು, ಇದು ದೇಹವನ್ನು ತಂಪಾಗಿರಿಸಲು ಪ್ರಚೋದಿಸುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನದಿಂದ ತಯಾರಿಸಿದ ಪೇಯ ಅಥವಾ ಚಟ್ನಿ ಹಾಗೂ ಸಲಾಡ್​ಗಳನ್ನು ತಿನ್ನುವುದರಿಂದ ರುಚಿ ಮತ್ತು ಆರೋಗ್ಯಕ್ಕೆ ಸಹಾಕಾರಿಯಾಗುತ್ತದೆ, ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ವಾಕರಿಕೆಯನ್ನು ಕಡಿಮೆ ಮಾಡುತ್ತದೆ.

ಕಲ್ಲಂಗಡಿ

ಕಲ್ಲಂಗಡಿಯಲ್ಲಿ ಶೇ90ರಷ್ಟು ನೀರಿದೆ. ಇದು ಶಾಖದ ಅಲೆಯ ಸಮಯದಲ್ಲಿ ತಿನಲ್ಲೇ ಬೇಕಾದ ಒಮದು ಆಹಾರ ಪದಾರ್ಥ. ದೇಹಕ್ಕೆ ದ್ರವ್ಯ ಒದಗಿಸುವ ಜೊತೆಗೆ ಚರ್ಮದ ಕಾಂತಿ ಮತ್ತು ಒಣಗುವುದನ್ನು ತಡೆ ಹಿಡಿಯುತ್ತದೆ. ತಿಂದ ಆಹಾರವನ್ನು ನಿಧಾನವಾಗಿ ಅರಗಿಸಲು ಸಹಾಯ ಮಾಡುತ್ತದೆ. ಊಟವಾದ ತಕ್ಷಣ ಹೊಟ್ಟೆ ಭಾರವಾಗುವುದನ್ನು ತಪ್ಪಿಸುತ್ತದೆ. ಇದರಲ್ಲಿ ವಿಟಮಿನ್ ಸಿ, ಲೈಕೋಪೀನ್, ಮತ್ತು ಸಿಟ್ರುಲಿನ್, ಪೊಟ್ಯಾಶಿಯಂ ಸಮೃದ್ಧವಾಗಿದೆ.

ಸೌತೆಕಾಯಿ

ಸೌತೆ ಕಾಯಿಯು ಸೌಮ್ಯವಾದ ನೀರಿನಾಂಶವನ್ನು ಹೊಂದಿರುತ್ತದೆ. ಇದು ದಏಹವನ್ನು ನೈಸರ್ಗಿಕವಾಗಿ ತಂಪಾಗಿಡುತ್ತದೆ,, ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು ಮತ್ತು ಸಿಲಿಕಾದಂತಹ ಅಂಶವನ್ನು ಹೊಂದಿರುವ ಇದು ಬಿಸಿಲಿನಲ್ಲಿ ಮುಖದ ಚರ್ಮವನ್ನು ಕಾಪಾಡುತ್ತದೆ.

ಎಳನೀರು

ಎಳನೀರಿನಲ್ಲಿರು ಪೊಡ್ತಾಶಿಯಂ ಮತ್ತು ಮೆಗ್ನೀಶಿಯಮ್​ ಹಾಗೂ ಎಲೆಕ್ಟ್ರೋಲೈಟ್​ ಸಮೃದ್ಧವಾಗಿದೆ. ಇದು ನಿಮ್ಮ ದೇಹವು ಅತಿಯಾಗಿ ಬೆವರುವುದನ್ನು ತಡೆಹಿಡಿಯುತ್ತದೆ. ದೇಹದಲ್ಲಿ ಶಕ್ತಿಯ ಏರಿಳಿತ ಉಂಟು ಮಾಡುವುದನ್ನು ತಡೆಯುತ್ತದೆ. ಹೊಟ್ಟೆ ಉಬ್ಬುವಿಕೆಯನ್ನು ತಡೆಯುತ್ತದೆ.

ನಿತ್ಯ ಮಜ್ಜಿಗೆ ಕುಡಿಯಿರಿ

ಮೊಸರಲ್ಲಿ ಪ್ರೊಬಯೋಟಿಕ್​ ಅಂಶ ಸಮೃದ್ಧವಾಗಿದ್ದು, ಇದು ದೇಹವನ್ನು ಒಳಗಿನಿಂದ ತಂಪಾಗಿ ಇರಿಸುತ್ತದೆ. ಶಾಖದ ಸಮಯದಲ್ಲಿ ಜೀರ್ಣ ಕ್ರಿಯೆಗೆ ಸಮಸ್ಯೆ ಉಂಟಾಗುವ ಕಾರಣ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಮಜ್ಜಿಗೆಯನ್ನು ಲಘು ಊಟದ ಜೊತೆಗೆ ನಿತ್ಯ ಕುಡಿಯುವುದರಿಂದ ನಿರ್ಜಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಬಹುದಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಕಾರಣ ತಿಂದ ತಕ್ಷಣ ಹೊಟ್ಟೆ ಭಾರ ಎನ್ನಿಸುವುದನ್ನು ಕಡಿಮೆ ಮಾಡುತ್ತದೆ.

ನಿಂಬೆ ಜ್ಯೂಸ್​​ ಕುಡಿಯುವುದು ಬಳಕೆಯಲ್ಲಿರಲಿ

ನಿಂಬೆ ಹಣ್ಣು ನಾವು ಸಾಮಾನ್ಯವಾಗಿ ಬಳಕೆ ಮಾಡುವ ಪದಾರ್ಥವಾದರು. ಬೇಸಿಗೆಯಲ್ಲಿ ಇದು ತುಂಬಾನೆ ಆರೋಗ್ಯ ಸ್ನೇಹಿ, ಇದರಲ್ಲಿ ಸಮೃದ್ಧವಾಗಿರುವ ವಿಟಮಿನ್​ ಸಿ ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ನಿಂಬೆ ನೀರಿನ ಜೊತೆಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಹೆಚ್ಚಿನ ತಾಪಮಾನದಲ್ಲಿ ನಿರ್ಜಲೀಕರಣ ಮತ್ತು ಶಾಖದ ಬಳಲಿಕೆಯಿಂದ ಕಾಪಾಡಿಕೊಳ್ಳುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.