ಸಾಂದರ್ಭಿಕ ಚಿತ್ರ 
ಆಹಾರ

ಈ ಹತ್ತು ಆಹಾರ ಪದಾರ್ಥಗಳು ನಿಮ್ಮ ಪ್ರಿಜ್​ನಲ್ಲಿದ್ದರೆ ಈ ಕೂಡಲೇ ಹೊರಗಿಡಿ |Refrigerator

ಪ್ರಮುಖ ಮುಖ್ಯಾಂಶಗಳು

  • ಪ್ರಿಜ್​ನ್ನು ವಸ್ತುಗಳ ಧೀರ್ಘಕಾಲಿಕ ಬಳಕೆಗಾಗಿ ಬಳಸಲಾಗುತ್ತದೆ
  • ಕೆಲವು ಆಹಾರ ಪದಾರ್ಥಗಳು ಪ್ರಿಜ್​ನಲ್ಲಿ ಕೆಟ್ಟುಹೋಗುತ್ತವೆ
  • ಕೆಟ್ಟಂತ ಆಹಾರ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯ ಹದಗೆಡುವುದು ಗ್ಯಾರಂಟಿ
Refrigerator : ಪ್ರಿಜ್(Refrigerator) ಎನ್ನುವುದು ಈಗ ಪ್ರತಿಯೊಬ್ಬರ ಮನೆಯಲ್ಲಿರುತ್ತದೆ. ಇದರಲ್ಲಿ ನಾವು ಆಹಾರವು ದೀರ್ಘಕಾಲಿಕ ಬಳಕೆಗೆ ಬರಲಿ ಎಂಬ ಉದ್ದೇಶದಿಂದ ಸಂಗ್ರಹ ಮಾಡುತ್ತೇವೆ. ಆದರೆ ಪ್ರಿಜ್​ನಲ್ಲಿ ಕೆಲವು ಪದಾರ್ಥಗಳನ್ನು ಇಟ್ಟರೆ ಅವು ಬಾಳಿಕೆ ಬರುವ ಬದಲು ಹಾಳಾಗಿ ಹೋಗವ ಸಂಭವವಿರುತ್ತದೆ.
ಈ ಕೆಟ್ಟುಹೋದ ಪದಾರ್ಥಗಳನ್ನು ಬಳಸಿ ಮಾಡಿದ ಖಾದ್ಯವು ಆರೋಗ್ಯದಲ್ಲಿ ಏರು-ಪೇರನ್ನು ಉಂಟುಮಾಡುವ ಮೂಲಕ ನಮ್ಮನ್ನು ಆಸ್ಪತ್ರೆಯ ನಿವಾಸಿಗಳಾಗಿ ಮಾಡುತ್ತದೆ. ಆದ್ದರಿಂದ ಇಲ್ಲಿ ಹೇಳಲಾಗಿರುವ ಹತ್ತು ಆಹಾರ ಪದಾರ್ಥಗಳನ್ನು ಪ್ರಿಜ್ಜಿನಿಂದ ಹೊರಗಿಟ್ಟರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಉತ್ತಮ.
1. ಟೊಮೇಟೋ
ಪ್ರಿಜ್​ನಲ್ಲಿ ಟೊಮೇಟೋವನ್ನು ಇಟ್ಟಾಗ ಟೊಮೇಟೋ ಚರ್ಮದಲ್ಲಿನ ಕೋಶ (ಸೆಲ್) ಗಳು ಹಾನಿಯಾಗುತ್ತವೆ. ಇದರ ಪರಿಣಾಮವಾಗಿ ಟೊಮೇಟೋವಿನ ರುಚಿ ಕಡಿಮೆಯಾಗುತ್ತದೆ.
2. ಆಲೂಗಡ್ಡೆ
ಫ್ರಿಜ್‌ನಲ್ಲಿ ಆಲೂಗಡ್ಡೆಯನ್ನು ಶೇಕರಣೆ ಮಾಡುವುದರಿಂದ ಆಲೂಗಡ್ಡೆಯಲ್ಲಿರುವ ಸ್ಟಾರ್ಚ್ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಇಂತಹ ಆಲೂಗಡ್ಡೆಯ ಬಳಕೆ ಮಧುಮೇಹ ರೋಗಿಗಳಿಗೆ ಹಾನಿಕಾರಕ ವಾಗಿರುತ್ತದೆ.
3. ಈರುಳ್ಳಿ
ಫ್ರಿಜ್‌ನಲ್ಲಿ ಈರುಳ್ಳಿಯನ್ನು ಇಟ್ಟಾಗ ತೇವಾಂಶದಿಂದ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಈರುಳ್ಳಿಯ ಮೇಲೆ ಬೆಳೆಯಲು ಪ್ರಾಂರಂಭಿಸುತ್ತವೆ. ಮತ್ತು ಈರುಳ್ಳಿ ಬಹುಬೇಗ ಕೆಟ್ಟು ಹೋಗುತ್ತವೆ.
4. ಬೆಳ್ಳುಳ್ಳಿ
ಫ್ರಿಜ್‌ನ ತೇವದಿಂದ ಬೆಳ್ಳುಳ್ಳಿ ಮೊಳಕೆ ಒಡೆಯುತ್ತದೆ. ಇದರಿಂದಾಗಿ ಬೆಳ್ಳುಳ್ಳಿಯ ರುಚಿಯು ಜತೆ ಅದರಲ್ಲಿರುವ ಔಷಧೀಯ ಗುಣ ಸಹ ಕಳೆದು ಹೋಗುತ್ತದೆ.
5. ಬಾಳೆಹಣ್ಣು
ಬಾಳೆಹಣ್ಣಿನ್ನು ಪ್ರಿಜ್ಜಿನಲ್ಲಿ ಇಟ್ಟಾಗ ಅದರ ಕೋಶ(ಸೆಲ್) ಗಳು ಹಾನಿಹೊಳಗಾವುದರಿಂದ ಬಾಳೆಹಣ್ಣಿನ ರುಚಿ ಕೆಟ್ಟುಹೋಗುತ್ತದೆ.
6. ಅವಕಾಡೊ
ಪ್ರಿಜ್ಜಿನಲ್ಲಿ ಅವಕಾಡೊ ಹಣ್ಣನ್ನು ಸಂಗ್ರಹಿಸುವುದರಿಂದ ಅದರಲ್ಲಿರುವ ಎನ್ಜೈಮ್‌ಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ಅವಕಾಡೊ ತನ್ನ ರುಚಿ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.
7. ಬ್ರೆಡ್
ಬ್ರೆಡ್​ನ್ನು ಪ್ರಿಜ್ಜಿನಲ್ಲಿಟ್ಟರೆ ಅದರಲ್ಲಿರುವ ಸ್ಟಾರ್ಚ್ ಬೇಗ ಒಣಗಿಹೋಗಿ ರಟ್ಟಿನಂತೆ ಗಟ್ಟಿಯಾಗುತ್ತದೆ. ಇದರಿಂದಾಗಿ ಬ್ರೆಡ್​ನ್ನು ತಿನ್ನಲು ರುಚಿಸುವುದಿಲ್ಲ.
8. ಜೇನುತುಪ್ಪ
ಪ್ರಿಜ್ಜಿನಲ್ಲಿ ಜೇನುತುಪ್ಪನ್ನು ಇಟ್ಟಾಗ ಅದರಲ್ಲಿರುವ ಗ್ಲೂಕೋಸ್ ಕ್ರಿಸ್ಟಲೈಸ್ ಆಗುತ್ತದೆ. ಆಗ ಜೇನುತುಪ್ಪವು ದ್ರವರೂಪವನ್ನು ಕಳೆದುಕೊಂಡು ಕಲ್ಲಿನಂತೆ ಗಟ್ಟಿಯಾಗುತ್ತದೆ. ಆದ್ದರಿಂದ ಜೇನುತುಪ್ಪವನ್ನು ಪ್ರಿಜ್ಜಿಲ್ಲಿಟ್ಟರೆ ಅದರ ಗುಣಮಟ್ಟ ಹಾಳಾಗುತ್ತದೆ.
9. ತೆಂಗಿನೆಣ್ಣೆ
ತೆಂಗಿನೆಣ್ಣೆಯನ್ನು ಪ್ರಿಜ್ಜಿನಲ್ಲಿಟ್ಟರೆ ಎಣ್ಣೆಯಲ್ಲಿರುವ ಕೊಬ್ಬಿನಾಂಶವು ಗಟ್ಟಿಯಾಗಿ ಎಣ್ಣೆಯು ಮೋಡದ ರೀತಿ ಬದಲಾಗುತ್ತದೆ. ಇದು ಯಾವುದೇ ರೀತಿಯ ರಾಸಾಯನಿಕ ಬದಲಾವಣೆ ಅಲ್ಲದಿದ್ದರೂ ಸಹ ಬಳಸಲು ಅನಾನೂಕುಲವಾಗಿರುತ್ತದೆ.
10. ಕಾಫಿ ಬೀಜ / ಪುಡಿ
ಕಾಫಿ ಬೀಜ ಅಥವಾ ಕಾಫಿ ಪುಡಿಯನ್ನು ಪ್ರಿಜ್ಜಿನಲ್ಲಿಟ್ಟರೆ ಅದರಲ್ಲಿರುವ ಅರೋಮಾಟಿಕ್ ಆಯಿಲ್‌ಗಳು (volatile oils) ತನ್ನ ಶಕ್ತಿಯನ್ನು ಕಳೆದುಕೊಂಡು ಸತ್ವರಹಿತವಾಗುತ್ತದೆ. ಮತ್ತು ಧೀರ್ಘಕಾಲದ ವರೆಗೆ ಕಾಫಿ ಪುಡಿಯನ್ನು ಪ್ರಿಜ್ಜಿನಲ್ಲಿ ಇಡುವುದರಿಂದ ಕೆಟ್ಟ ವಾಸನೆ ಸಹ ಬರುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.(ಏಜೆನ್ಸೀಸ್).