- ಗ್ರೀನ್ ಟೀ ಎಂಬುದು ಎಲ್ಲರ ಬಾಯಲ್ಲಿ ಕೇಳಿಬರುವಂತಹ ಸಾಮಾನ್ಯ ಪಾನೀಯವಾಗಿದೆ
- ಒಂದು ತಿಂಗಳ ಕಾಲ ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ನಮ್ಮ ಜೀವನಶೈಲಿಯಲ್ಲಿ ಬದಲಾವಣೆ
- ಗ್ರೀನ್ ಟೀ ಚರ್ಮದ ಸ್ಪಷ್ಟತೆಯನ್ನು ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ
GreenTea : ಇಂದಿನ ದಿನಗಳಲ್ಲಿ ಗ್ರೀನ್ ಟೀ ಎಂಬುದು ಎಲ್ಲರ ಬಾಯಲ್ಲಿ ಕೇಳಿಬರುವಂತಹ ಸಾಮಾನ್ಯ ಪಾನೀಯವಾಗಿದೆ. ಈ ಟೀಯನ್ನು ಹಲವಾರು ಜನರು ಪ್ರತಿನಿತ್ಯ ಕುಡಿಯುತ್ತಾರೆ. ಅದೇ ರೀತಿ ಒಂದು ತಿಂಗಳ ಕಾಲ ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ನಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಯನ್ನು ಕಾಣಬಹುದು. ಆದರೆ, ಫಲಿತಾಂಶಗಳು ಆಶ್ಚರ್ಯಕರವಾಗಿ ಕಂಡು ಬರಬಹುದು.
ಗ್ರೀನ್ ಟೀ ಸೇವಿಸುವುದರಿಂದ ಇದು ಚರ್ಮದ ಸ್ಪಷ್ಟತೆಯನ್ನು ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ ಎಂದು ಕೆಲವೊಂದು ಅಧ್ಯಯನಗಳು ಮಾಹಿತಿ ನೀಡಿವೆ. ಈ ಪಾನೀಯದ ಸ್ಥಿರವಾದ ಬಳಕೆಯು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹಾಗಿದ್ದರೆ, 1 ತಿಂಗಳ ಕಾಲ ಗ್ರೀನ್ ಟೀ ಸೇವಿಸುವುದರಿಂದಾಗುವ ಪ್ರಯೋಜನಗಳೇನು ಎಂದು ತಿಳಿಯೋಣ ಬನ್ನಿ..
1. ತೂಕ ನಿಯಂತ್ರಣ ಮತ್ತು ಮೆಟಬಾಲಿಸಂ ಸುಧಾರಿಸುತ್ತದೆ
ಗ್ರೀನ್ ಟೀ ಕುಡಿಯುವುದರಿಂದ ಇದು ಕ್ಯಾಫೀನ್ ಮತ್ತು ಕ್ಯಾಟೆಕಿನ್‌ಗಳು ಫ್ಯಾಟ್ ಆಕ್ಸಿಡೇಶನ್ ಅನ್ನು ಹೆಚ್ಚಿಸುತ್ತವೆ. ಒಂದು ದಿನದಲ್ಲಿ 4 ಕಪ್ ಗ್ರೀನ್ ಟೀ ಸೇವಿಸುವುದರಿಂದ ಇದು ಹೊಟ್ಟೆಯ ಫ್ಯಾಟ್ ಶೇ. 44 ರಷ್ಟು ಕಡಿಮೆ ಮಾಡುತ್ತದೆ. 1 ತಿಂಗಳಲ್ಲಿ ಸುಮಾರು 2 ಕೆ.ಜಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವವರು ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಇನ್ನಷ್ಟು ಪ್ರಯೋಜನಗಳನ್ನು ಪಡೆಯಬಹುದು.
2. ಮನಸ್ಸಿನ ಆರೋಗ್ಯದಲ್ಲಿ ಉತ್ತೇಜನ
ಗ್ರೀನ್ ಟೀಯಲ್ಲಿರುವ ಎಲ್-ಥಿಯಾನೈನ್ ಮತ್ತು ಕ್ಯಾಫೀನ್‌ನ ಸಂಯೋಜನೆಯು ಮನಸ್ಸಿನಲ್ಲಿ ಯಾವುದೇ ಆತಂಕವಿಲ್ಲದೇ, ಶಾಂತಿ ಮತ್ತು ಜಾಗೃತಿ ನೀಡುತ್ತದೆ. ಒಂದು ತಿಂಗಳ ಕಾಲ ಇದನ್ನು ಸೇವಿಸುವುದರಿಂದ ಮೆದುಳಿನ ಮಂಜುನ್ನ ಕರಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ನೆನಪಿನ ಶಕ್ತಿ ಕಳೆದುಕೊಳ್ಳುವಂತಹ ರೋಗಗಳ ವಿರುದ್ಧ ಹೋರಾಟ ನಡೆಸುತ್ತದೆ.
3. ಹೃದಯ ಆರೋಗ್ಯಕ್ಕೆ ರಕ್ಷಣೆ
ಗ್ರೀನ್ ಟೀ ಸೇವನೆಯಿಂದ ಅಧಿಕ ರಕ್ತದೊತ್ತಡ, ರಕ್ತದಲ್ಲಿರುವ ಕೊಬ್ಬುಗಳು ಕಡಿಮೆಯಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗೆಯೇ ಒಂದು ತಿಂಗಳ ಕಾಲ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಇದು ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡಿ, ದೀರ್ಘಕಾಲದ ಹೃದಯ ಸಮಸ್ಯೆಯನ್ನು ತಡೆಯುತ್ತದೆ.
4. ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ
ಗ್ರೀನ್ ಟೀ ಪಾಲಿಫೆನಾಲ್ಗಳು ಕೋಶಗಳ ಹಾನಿಯನ್ನು ತಡೆಯುತ್ತದೆ. ಒಂದು ತಿಂಗಳ ಕಾಲ ಗ್ರೀನ್ ಟೀ ಸೇವಿಸುವುದರಿಂದ ಇದು ಫೆಫ್ಫುಸು ಮತ್ತು ಗ್ರಂಥಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗೆಯೇ ಚರ್ಮದ ಆರೋಗ್ಯಕ್ಕೂ ಸಹಾಯ ಮಾಡುತ್ತದೆ.
5. ಜೀರ್ಣಕ್ರಿಯೆ ಸುಧಾರಿಸುತ್ತದೆ
ಗ್ರೀನ್ ಟೀ ಕುಡಿಯುವುದರಿಂದ ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ, ಮಲಬದ್ಧತೆಯಂತಹ ಆರೋಗ್ಯ ಸಮಸ್ಯೆಯನ್ನು ತಡೆದು ನಿಲ್ಲಿಸುತ್ತದೆ. ಇದು ರಕ್ತವನ್ನು ಶುದ್ಧೀಗೊಳಿಸಿ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.