lifestyle; ಆಯುರ್ವೇದದಲ್ಲಿ ಉಸಿರಾಟವನ್ನು ಪ್ರಾಣ ಶಕ್ತಿ ಚಲಿಸುವ ಮಾರ್ಗ ಎಂದು ಹೇಳಲಾಗಿದೆ. ಉಸಿರಾಟವು ದೇಹ, ಮನಸ್ಸು ಮತ್ತು ಆತ್ಮವನ್ನು ಚೈತನ್ಯಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಸರಿಯಾದ ಉಸಿರಾಟವು ಆರೋಗ್ಯದ ಆಧಾರಸ್ತಂಭಗಳಲ್ಲಿ ಒಂದಾಗಿದೆ ಎಂದು ಆಯುರ್ವೇದ ಹೇಳುತ್ತದೆ. ವ್ಯವಸ್ಥಿತ ಉಸಿರಾಟದ ವ್ಯಾಯಾಮಗಳ ಮೂಲಕ ನಾವು ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಬಹುದಾಗಿದೆ. ಪ್ರಾಣಾಯಾಮ ಎಂದು ಕರೆಯಲ್ಪಡುವ ಉಸಿರಾಟದ ವ್ಯಾಯಾಮಗಳು ದೇಹಕ್ಕೆ ನೈಸರ್ಗಿಕ ರಕ್ಷಣೆಯನ್ನು ಒದಗಿಸುತ್ತದೆ.
ಇದನ್ನೂ ಓದಿ: ಕೇಂದ್ರದ ಜಿಎಸ್ಟಿ ಪ್ರಸ್ತಾವನೆಗೆ ಒಪ್ಪಿಗೆ; ಶೇ.12, ಶೇ.28ರ ಜಿಎಸ್ಟಿ ಸ್ಲ್ಯಾಬ್ಗಳನ್ನು ರದ್ದುಗೊಳಿಸಲು ಶಿಫಾರಸು|Gst
ದೇಹದ ಒತ್ತಡವನ್ನು ಕಡಿಮೆ ಮಾಡಿ, ರಕ್ತ ಸಂಚಾರವನ್ನು ಸುಧಾರಿಸಲು ಮತ್ತು ದೇಹದ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವ ಉಸಿರಾಟದ ತಂತ್ರ ಸಹಾಯ ಮಾಡುತ್ತದೆ. ಹಾಗಾಗಿ ಕೆಲವು ಪರಿಣಾಮಕಾರಿ ಉಸಿರಾಟದ ತಂತ್ರಗಳನ್ನು ತಿಳಿಯೋಣ.
ಬಲಗೈಯ ತೋರುಗೈ ಮತ್ತು ಮಧ್ಯದ ಬೆರಳುಗಳಿಂದ ಬಲ ಮೂಗಿನ ರಂಧ್ರವನ್ನು ಮುಚ್ಚಿ, ಎಡ ಮೂಗಿನ ರಂಧ್ರದಿಂದ ಉಸಿರಾಡಿ. ನಂತರ ಎಡ ರಂಧ್ರವನ್ನು ಮುಚ್ಚಿ, ಬಲ ರಂಧ್ರದಿಂದ ಉಸಿರು ಬಿಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
ಆರಾಮವಾಗಿ ಕುಳಿತುಕೊಳ್ಳಿ ಅಥವಾ ಮಲಗಿ, ಒಂದು ಕೈಯನ್ನು ಎದೆಯ ಮೇಲೆ ಮತ್ತು ಇನ್ನೊಂದನ್ನು ಹೊಟ್ಟೆಯ ಮೇಲೆ ಇರಿಸಿ. ಮೂಗಿನ ಮೂಲಕ ಆಳವಾಗಿ ಉಸಿರಾಡಿ, ನಂತರ ಬಾಯಿಯಿಂದ ನಿಧಾನವಾಗಿ ಉಸಿರನ್ನು ಬಿಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
(ಏಜೆನ್ಸೀಸ್)
ಉಸಿರಾಟವು ಜೀವನದ ಅತ್ಯಂತ ನೈಸರ್ಗಿಕ ಕ್ರಿಯೆಯಾಗಿದೆ. ಆದರೆ ಪ್ರಜ್ಞಾಪೂರ್ವಕವಾಗಿ ಅದನ್ನು ಮಾಡಿದಾಗ ಮಾತ್ರ ಅದು ಅತ್ಯಂತ ಶಕ್ತಿಶಾಲಿ ಔಷಧವಾಗುತ್ತದೆ.
ನಾವು ನಿತ್ಯ ಸಾಧ್ಯವಾದಷ್ಟು ಸಮಯ ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿನ ರಕ್ತ ಸಂಚಾರ ಅಧಿಕವಾಗುತ್ತದೆ, ಹೃದಯ ಸಂಬಂಧಿ ಕಾಯಿಲೆ ಬರದಂತೆ ಇದು ತಡೆಯುತ್ತದೆ. ಜೊತೆಗೆ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುವುದಲ್ಲದೆ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ. ಇದರಿಂದ ಅಸ್ತಮಾ, ತಲೆನೋವು, ಮೈಗ್ರೇನ್, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.