ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ಸುಸ್ಥಿರ ತೂಕ ನಷ್ಟಕ್ಕೆ 8 ಗೋಲ್ಡನ್ ರೂಲ್ಸ್: 12 ಕೆಜಿ ಇಳಿಸಿದ ಪ್ರಭಾವಿಯ ಸಕ್ಸಸ್ ಸ್ಟೋರಿ ಈಗ ವೈರಲ್! Weight Loss Journey

Weight Loss Journey: ಇತ್ತೀಚಿನ ದಿನಗಳಲ್ಲಿ ತೂಕ ಕಳೆದುಕೊಳ್ಳಲು ಅನೇಕರು ಹರಸಾಹಸ ಒಡುತ್ತಾರೆ. ಅದಕ್ಕಾಗಿಯೇ ಅನೇಕ ತ್ವರಿತ ಪರಿಹಾರಗಳನ್ನು ಅಬಲಂಬಿಸುತ್ತಾರೆ. ಆದಾಗ್ಯೂ, ಆರೋಗ್ಯ ತಜ್ಞರ ಪ್ರಕಾರ ತೂಕ ಇಳಿಸಿಕೊಳ್ಳುವ ಸೂಕ್ತ ಮಾರ್ಗವೆಂದರೆ,ಸಮತೋಲಿತ ದಿನಚರಿ, ಜಾಗರೂಕ ಆಹಾರ, ಶಕ್ತಿ ತರಬೇತಿ, ಜಲಸಂಚಯನ ಮತ್ತು ಗುಣಮಟ್ಟದ ನಿದ್ರೆಯ ಮೇಲೆ ಕೇಂದ್ರೀಕರಿಸುವುದು ಎಂದು ವಿವರಿಸುತ್ತಾರೆ.
ಫಿಟ್‌ನೆಸ್ ಪ್ರಭಾವಿಯೊಬ್ಬರು 67 ಕೆಜಿಯಿಂದ 53 ಕೆಜಿಗೆ ಬದಲಾಗಲು ಸಹಾಯ ಮಾಡಿದ 8 ಅಭ್ಯಾಸಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಸರಳವಾದ ಜೀವನಶೈಲಿಯನ್ನು ಅನುಸರಿಸಿಕೊಳ್ಳುವ ಮೂಲಕ 14 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸೃಷ್ಟಿ ಕೃಷ್ಣನ್ ಬಹಿರಂಗಪಡಿಸಿದ್ದಾರೆ. ನೀವೇನಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ,

1. ಜಂಕ್ ಫುಡ್‌ ಸಂಪೂರ್ಣವಾಗಿ ತಪ್ಪಿಸಬೇಡಿ

ನಿಮಗೆ ಯಾವುದೇ ಆಹಾರವನ್ನು ಇಷ್ಟಪಟ್ಟು ಸೇವಿಸುತ್ತಿದ್ದರೆ ಆ ಆಹಾರವನ್ನು ತಿನ್ನುವುದನ್ನು ನಿಲ್ಲಿಸಬೇಡಿ. ಆದಾಗ್ಯೂ, ನಿಮ್ಮ ಹಂಬಲವನ್ನು ಸಂಪೂರ್ಣವಾಗಿ ಕೊಲ್ಲುವುದರಿಂದ ಇದು ನಿಮ್ಮಲ್ಲಿ ನಿರಾಸೆ ಹೆಚ್ಚಾಗಲು ಪ್ರಾರಂಭವಾಗುತ್ತದೆ ಎಂದು ಸೃಷ್ಟಿ ಹೇಳಿದ್ದಾರೆ.

2. ಪ್ರತಿದಿನ ನಡೆಯಿರಿ

ದೇಹದ ಕೊಬ್ಬು ಸುಡಬೇಕೆಂದರೆ, ಆದಷ್ಟು ನಡೆಯುವ ಅಭ್ಯಾಸ ಮಾಡಬೇಕೆಂದು ಅವರು ಹೇಳುತ್ತಾರೆ. ಆದಾಗ್ಯೂ, ದಿನಕ್ಕೆ 30 ನಿಮಿಷಗಳ ಕಾಲ ನಡೆಯುವ ಅಭ್ಯಾಸದಿಂದ ದೇಹದಲ್ಲಿರುವ ಅತಿಯಾದ ಕೊಬ್ಬು ಸುಡುವುದರ ಜೊತೆಗ ಹೃದಯನಾಳಗಳದ ಆರೋಗ್ಯವನ್ನು ಸುಧಾರಿಸುತ್ತದೆ.

3. ರಾತ್ರಿಯಲ್ಲಿ ಕಾರ್ಬೋಹೈಡ್ರೇಟ್‌ಗಳಿಲ್ಲದ ಆಹಾರ ಸೇವಿಸಿ

ರಾತ್ರಿ ಊಟದಲ್ಲಿ ಅನ್ನ ಮತ್ತು ರೊಟ್ಟಿಯನ್ನು ಮೊಟ್ಟೆ, ಪನೀರ್, ದಾಲ್ ಮತ್ತು ಚಿಕನ್‌ಗೆ ಬದಲಾಗಿ ತಿನ್ನಲು ಪ್ರೇರೇಪಿಸುತ್ತಾರೆ. ಪ್ರಮಾಣಿಕವಾಗಿ ಈ ಆಹಾರಗಳು ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ ಇದು ದೇಹದಲ್ಲಿ ಅತಿಯಾದ ಕಾರ್ಬೋಹೈಡ್ರೇಟ್​ಗಳು ಸೇರದಂತೆ ತಡೆದುಕೊಳ್ಳುತ್ತವೆ.

4. ನಿಧಾನವಾಗಿ ತಿನ್ನಿರಿ

ಅವರು ಸೂಚಿಸುವಂತೆ, ನಿಧಾನವಾಗಿ ಆಹಾರ ಸೇವಿಸುವುದರಿಂದ ಮೆದುಳಿಗೆ ಕರುಳಿನಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಆದಾಗ್ಯೂ, 20-30 ನಿಮಿಷ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ಹಸಿವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

5. ಪ್ರತಿ ಊಟಕ್ಕೂ ಮೊದಲು ನೀರು ಕುಡಿಯಿರಿ

ಊಟಕ್ಕೆ ಸುಮಾರು 30 ನಿಮಿಷಗಳ ಮುನ್ನ ನೀರು ಕುಡಿಯುವ ಅಭ್ಯಾಸವನ್ನು ಅಳವಡಿಕೊಳ್ಳುವುದರಿಂದ ಹೊಟ್ಟೆ ತುಂಬಿದ ಭಾವನೆ ಹೆಚ್ಚಾಗುತ್ತದೆ. ಜೊತೆಗೆ ಈ ಅಭ್ಯಾಸವು ನಿಮಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ಅತಿಯಾಗಿ ಆಹಾರ ಸೇವಿಸುವುದು ಕೂಡಾ ತಡೆಯಬಹುದು.

6. ಪ್ರತಿದಿನ ನಿಮ್ಮನ್ನು ತೂಕ ಮಾಡುವುದನ್ನು ನಿಲ್ಲಿಸಿ

ದಿನನಿತ್ಯ ತೂಕ ಮಾಡುವುದರಿಂದ ತೂಕ ಇಳಿಕೆ ಕಂಡಿಲ್ಲ ಎಂದು ಗಾಬರಿ ಪಡೆಯುವುದು ಸಹಜ. ಹಾಗಾಗಿ ವಾರಕ್ಕೊಮ್ಮೆ ತೂಕ ಪರೀಕ್ಷೆ ಮಾಡಿಕೊಳ್ಳಿ. ಇದು ಉಪಾಯಕಾರಿ ಹಂತವಾಗಿದೆ ಎಂದು ಹೇಳಿದ್ದಾರೆ.

7. ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಸರಿಪಡಿಸಿ

ನಿದ್ರೆಯ ಕೊರತೆ ಕೇವಲ ಆಯಾಸವನ್ನಷ್ಟೇ ಅಲ್ಲ, ನಮ್ಮ ಮೆದುಳಿನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ಕುಂದಿಸುತ್ತದೆ. ಹಾಗಾಗಿ ಪ್ರತಿದಿನ 7-8 ತಾಸು ಮಲಗುವ ಅಭ್ಯಾಸ ಮಾಡಿಕೊಂಡೆ ಇದರಿಂದ ಕೆಟ್ಟ ನಿದ್ರೆ, ಹೆಚ್ಚಿನ ಕಡುಬಯಕೆಗಳು ಮತ್ತು ಶೂನ್ಯ ಇಚ್ಛಾಶಕ್ತಿ ಕಡಿಮೆಯಾಗಲಿದೆ.

8. ಸೋಮವಾರ ಮರುಪ್ರಾರಂಭಿಸಲು ಕಾಯುವುದನ್ನು ನಿಲ್ಲಿಸಿ

ಒಂದು ಹೊತ್ತು ಅತಿಯಾಗಿ ತಿಂದ ತಕ್ಷಣ ಅಥವಾ ಒಂದು ದಿನ ಜಿಮ್ ತಪ್ಪಿದ ತಕ್ಷಣ "ನನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತು ಎಂದು ಭಾವಿಸಿ ಇಡೀ ವಾರವನ್ನು ಹಾಳು ಮಾಡಿಕೊಳ್ಳುವವರೇ ಹೆಚ್ಚು. ಆದರೆ, ಒಂದು ಕೆಟ್ಟ ಊಟ ಕೇವಲ ಒಂದು ತಪ್ಪು, ಇಡೀ ವಾರದ ಸೋಲಲ್ಲ ಎಂದು ಭಾವಿಸಿದಾಗ ನಾವು ತಕ್ಷಣವೇ ಹಳಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.