ಪ್ರಮುಖ ಮುಖ್ಯಾಂಶಗಳು
Georgina Rodriguez Queen of Kalahari 342 carat diamond:
ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಆಗಸ್ಟ್11ರಂದು ಉದ್ಯಮಿ ಮತ್ತು ಮಾಡೆಲ್ ಆಗಿರುವ ಜಾರ್ಜಿನಾ ರೊಡ್ರಿಗಸ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪೋರ್ಚುಗಲ್ನ ಕಾಸ್ಕೈಸ್ನಲ್ಲಿ ತಮ್ಮ ಮಕ್ಕಳ ಮುಂದೆ ಸರಳವಾಗಿ ಮದುವೆ ಮಾಡಿಕೊಂಡರು. ವಿವಾಹ ಕಾರ್ಯಕ್ರಮ ಮುಗಿದು
ಕೆಲವು ದಿನಗಳು ಕಳೆದಿವೆ. ಇಂದಿಗೂ ಚರ್ಚೆಗೆ ಗ್ರಾಸವಾಗಿರುವ ವಿಚಾರ ಏನೆಂದರೆ, ಅದು ಮದುವೆಗೆ ಜಾರ್ಜಿಯಾ ಧರಿಸಿದ್ದ 478 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್.
50 ಕ್ಯಾರೆಟ್ ಡಿ-ದೋಷರಹಿತ ವಜ್ರದ ನೆಕ್ಲೇಸ್ ಮಾಡೆಲ್ ಬಗ್ಗೆ, ಎಷ್ಟು ತೂಕ ಇದೆ. ಇದರ ವಿನ್ಯಾಸ ಮಾಡಿದ್ಯಾರು ಎನ್ನುವ ಚರ್ಚೆಗಳು ಸಾರ್ವಜನಿಕರ ವಲಯದಲ್ಲಿ, ನೆಟ್ಟಿಗರಲ್ಲಿ ಉಳಿದುಕೊಂಡಿದೆ.
ದೀರ್ಘ ಕಾಲದ ಸಂಗಾತಿ ಜೊತೆ ಮದುವೆ
ವಿನ್ಯಾಸವಾಗಿರುವುದು ಹೀಗೆ
ಹಲವು ವರದಿಗಳ ಪ್ರಕಾರ ಜಾರ್ಜಿಯಾ ಅವರು ಧರಿಸಿದ್ದ 50 ಕ್ಯಾರೆಟ್ ಡಿ-ದೋಷರಹಿತ ವಜ್ರದ ನೆಕ್ಲೇಸ್
ಸಾಮಾನ್ಯವಾದದ್ದಲ್ಲ; ಇವು 'ಕ್ವೀನ್ ಆಫ್ ಕಲಹರಿ' ಎಂಬ ಹೆಸರಿನ ಅಪರೂಪದ 342-ಕ್ಯಾರೆಟ್ ವಜ್ರದಿಂದ ತಯಾರಿಸಲಾಗಿರುವುದು ಎನ್ನಲಾಗಿದೆ.
ವರದಿಯ ಪ್ರಕಾರ, ಈ ಬೃಹತ್ 342-ಕ್ಯಾರೆಟ್ ವಜ್ರವನ್ನು ಅತ್ಯಂತ ಕರಾರುವಾಕ್ಕಾಗಿ ವಿಭಜಿಸಿ, ಒಟ್ಟು 23 ವಿಭಿನ್ನ ಮತ್ತು ಅದ್ಭುತವಾದ ವಜ್ರಗಳಾಗಿ ಪರಿವರ್ತಿಸಲಾಗಿದೆ.
$50 ಮಿಲಿಯನ್, ಭಾರತದ ರೂಪಾಯಿಯಲ್ಲಿ 478 ಕೋಟಿ ಮೌಲ್ಯದ್ದಾಗಿದೆ.
ಈ ಐಷಾರಾಮಿ ಆಭರಣವು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದು, ಪ್ರಪಂಚದಾದ್ಯಂತ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ, (ಏಜೆನ್ಸೀಸ್)