ಲೈಫ್‌ಸ್ಟೈಲ್

ಊಟದ ಬಳಿಕ ಐಸ್ ಕ್ರೀಮ್ ತಿನ್ನುವ ಅಭ್ಯಾಸವಿದೆಯಾ? ಇದು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತೆ..!

ಬೇಸಿಗೆಯ ದಿನಗಳಲ್ಲಿ ತಣ್ಣನೆಯ ಐಸ್ ಕ್ರೀಂನ ಮಜವೇ ಬೇರೆ. ಆದರೆ ದಿನದ ಕೊನೆಯಲ್ಲಿ, ಅಂದರೆ ರಾತ್ರಿಯ ಹೊತ್ತು ಊಟ ಮಾಡಿದ ಬಳಿಕ ಐಸ್ ಕ್ರೀಮ್ ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀಳುವಂತಹ ಸಾಧ್ಯತೆಗಳಿವೆ. ಹಾಗಿದ್ರೆ ಇದರಿಂದ ದೇಹಕ್ಕಾಗುವ ತೊಂದರೆ ಏನು ನೋಡೋಣ


ದಂತ ಕ್ಷಯ
ರಾತ್ರಿ ಮಲಗುವ ಮುನ್ನ ಐಸ್ ಕ್ರೀಂ ತಿಂದರೆ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು, ಏಕೆಂದರೆ ರಾತ್ರಿ ಸಮಯದಲ್ಲಿ ಲಾಲಾರಸದ ಉತ್ಪತ್ತಿ ಕಡಿಮೆಯಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಐಸ್ ಕ್ರೀಂನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಇರುತ್ತದೆ, ಇದು ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ ಮತ್ತು ದಂತ ಕ್ಷಯಕ್ಕೆ ಕಾರಣವಾಗುತ್ತದೆ.


ಬೊಜ್ಜು
ಐಸ್ ಕ್ರೀಮ್ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಆದ್ದರಿಂದ ನೀವು ಪ್ರತಿದಿನ ರಾತ್ರಿ ಊಟದ ನಂತರ ಐಸ್ ಕ್ರೀಮ್ ಅನ್ನು ಸೇವಿಸಿದರೆ, ಅದು ದಿನಕ್ಕೆ ನೀವು ಸೇವಿಸುವ ಒಟ್ಟು ಕ್ಯಾಲೊರಿಗಳನ್ನು ಹೆಚ್ಚಿಸಬಹುದು, ಇದು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.


ಜೀರ್ಣಕ್ರಿಯೆಯನ್ನು ತಡೆಯುತ್ತದೆ
ರಾತ್ರಿ ಊಟದ ನಂತರ ಐಸ್ ಕ್ರೀಂ ತಿನ್ನುವುದರಿಂದ ಅಜೀರ್ಣ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ, ವಿಶೇಷವಾಗಿ ದುರ್ಬಲ ಜೀರ್ಣಕ್ರಿಯೆ ಇರುವವರಿಗೆ.


ಹೃದಯರೋಗ
ಐಸ್ ಕ್ರೀಂನಲ್ಲಿ ಕೊಬ್ಬಿನಂಶ ಹೆಚ್ಚಾಗಿರುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ನೀವು ನಿಯಮಿತವಾಗಿ ಐಸ್ ಕ್ರೀಮ್ ತಿನ್ನುತ್ತಿದ್ದರೆ, ಅದು ನಿಮ್ಮ ಹೃದಯಕ್ಕೆ ಹಾನಿ ಮಾಡುತ್ತದೆ.


ನಿದ್ರೆಯ ಸಮಸ್ಯೆ
ಐಸ್ ಕ್ರೀಂನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ ಮತ್ತು ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಸಕ್ಕರೆಯು ಪ್ರಚೋದನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ನಿದ್ರೆಯ ಮಾದರಿಗಳ ಮೇಲೆ ಪರಿಣಾಮ ಬೀರಬಹುದು. ನೀವು ಆರೋಗ್ಯಕರ ಮತ್ತು ಶಾಂತ ನಿದ್ರೆಯನ್ನು ಪಡೆಯಲು ಬಯಸಿದರೆ, ರಾತ್ರಿ ಊಟದ ನಂತರ ಐಸ್ ಕ್ರೀಮ್ ಸೇವನೆಯನ್ನು ಸೀಮಿತಗೊಳಿಸಬೇಕು.


ಚರ್ಮದ ಸಮಸ್ಯೆಗಳು
ನಿಮಗೆ ಆಶ್ಚರ್ಯವಾಗಬಹುದು, ಆದರೆ ಐಸ್ ಕ್ರೀಮ್ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಐಸ್ ಕ್ರೀಂ ಹೆಚ್ಚು ಸಕ್ಕರೆಯನ್ನು ಹೊಂದಿರುತ್ತದೆ ಇದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಚರ್ಮದ ಕಿರಿಕಿರಿ ಮತ್ತು ತುರಿಕೆಗೆ ಕಾರಣವಾಗಬಹುದು.
ಇದಕ್ಕೆಲ್ಲಾ ಉತ್ತಮ ಪರಿಹಾರ ಅಂದ್ರೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಐಸ್ ಕ್ರೀಂನಂತಹ ಸಿಹಿತಿಂಡಿಗಳ ಸೇವನೆಯನ್ನು ಮಿತಿಗೊಳಿಸಬೇಕು.