Alcohol: ಮದ್ಯದ ಬಾಟಲಿ ನಿಮ್ಮ ಕೈಗೆ ಸಿಕ್ಕಾಗ ಸಾಮಾನ್ಯವಾಗಿ ಬ್ರಾಂಡ್, ಬೆಲೆ, ಮುದ್ರಣ ಸೇರಿ ಇತರ ಅಕ್ಷರಗಳನ್ನು ಗಮನಿಸುತ್ತಿರಾ ಅಲ್ವಾ... ಅದರೆ, ಎಂದಾದರೂ ಎಕ್ಸ್ಪೈರಿ ಡೇಟ್ ಕಡೆ ಕಣ್ಣು ಹಾಯಿಸಿದ್ದೀರಾ? ಆದಾಗ್ಯೂ, ಈ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಆಹಾರ, ಔಷಧಿ ಎಲ್ಲಕ್ಕೂ ಎಕ್ಸ್ಪೈರಿ ಡೇಟ್ ಇದ್ದಂತೆ ಇದಕ್ಕೂ ಅವಧಿ(ಎಕ್ಸ್ಪೈರಿ) ಇರಬಹುದೇ..? ಇಲ್ಲವಾದ್ರೆ ಇದು ಎಂದಿಗೂ ಹಾಳಾಗುವುದಿಲ್ಲವೇ..? ಈ ಪ್ರಶ್ನೆ ಕಾಡುವುದು ಸಹಜ, ಹಾಗಾದರೆ ಈ ಬಗ್ಗೆ ತಿಳಿಯೋಣ..
ತಜ್ಞರು ಹೇಳುವ ಪ್ರಕಾರ, ಬಿಯರ್, ವೈನ್, ರಮ್, ವೊಡ್ಕಾ ಸೇರಿದಂತೆ ಇನ್ನಿತರ ಎಲ್ಲ ತರಹದ ಮದ್ಯಕ್ಕೂ ಒಂದು ನಿಗೂಢ ಅವಧಿಯ ಗಡಿಯಾರ(ಎಕ್ಸ್ಪೈರಿ) ಓಡುತ್ತಿದೆ. ಅದನ್ನು ಯಾರೂ ನೋಡಲು ಸಾಧ್ಯವಿಲ್ಲ. ಆದರೆ, ತಪ್ಪಾಗಿ ಅತ್ಯಧಿಕ ದಿನಗಳು ಉಳಿಸಿಕೊಂಡರೆ ಅದು ನಿಮ್ಮ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರಬಹುದು.
1. ಬಿಯರ್
ಹೌದು, ಬಿಯರ್ ಕೇವಲ ಆರು ಅಥವಾ ಎಂಟು ತಿಂಗಳು ಮಾತ್ರ ಬಳಸಬಹುದು. ಫ್ರಿಜ್ನಲ್ಲಿ ಇಟ್ಟರೆ ಸ್ವಲ್ಪ ಹೆಚ್ಚು ಬಾಳಿಕೆ (ಬಳಸಬಹುದು) ಬರತ್ತೆ. ಆದರೆ, ಬಾಟಲಿ ತೆರೆಯುತ್ತಿದ್ದಂತೆಯೇ 24 ಗಂಟೆಗಳೊಳಗೆ ಕುಡಿಯದೆ ಹೋದಲ್ಲಿ ಅದರ ರುಚಿ ಮಾಯವಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
2.ವೈನ್
ವೈನ್ದೂ ಬಿಯರ್ಗಿಂತ ಇನ್ನೂ ವಿಚಿತ್ರ? ಹೌದು.. ವೈನ್ ಬಾಟಲಿ ತೆರೆದಾಗ ಆಮ್ಲಜನಕವೇ ಅದರ ಶತ್ರು. ಮೂರು-ಏಳು ದಿನಗಳಲ್ಲಿ ಅದನ್ನು ಬಳಸಬೇಕು ಇಲ್ಲವಾದರೆ ಅದು ತನ್ನ ವಾಸನೆ ಮತ್ತು ರುಚಿ ಕಳೆದುಕೊಳ್ಳುತ್ತದೆ.
ಇದನ್ನೂ ಓದಿ:ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಆಹಾರ ಸೇವಿಸಿ! | weight loss dessert3.ವಿಸ್ಕಿ
ವಿಸ್ಕಿದು ಮತ್ತೊಂದು ಮರ್ಮ, ಅದು ತನ್ನ ಅವಧಿಯನ್ನು ಬದಲಾಯಿಸುವುದಿಲ್ಲ. ಆದರೆ, ಬಾಟಲಿ ತೆರೆದ ಕೂಡಲೇ ಆಕ್ಸಿಡೇಶನ್(ವಿಸ್ಕಿ ತಯಾರಿಸುವ ಕ್ರಿಯೆ) ಪ್ರಕ್ರಿಯೆ ಆರಂಭವಾಗುತ್ತದೆ. ಇದರಿಂದ ನಿಧಾನವಾಗಿ ರುಚಿ ಮತ್ತು ವಾಸನೆಯನ್ನು ಹೆಚ್ಚಿಸುತ್ತದೆ.
6 ತಿಂಗಳೊಳಗೆ ಸೇವಿಸಬೇಕು!
ಇದೀಗ ಮದ್ಯದ ಉತ್ತಮ ರುಚಿ ಸಿಗಬೇಕಾದರೆ ಮದ್ಯವನ್ನು ಕತ್ತಲು ಮತ್ತು ತಂಪಾದ ಸ್ಥಳದಲ್ಲಿ ಇಡಬೇಕು. ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಅವುಗಳ ಶೆಲ್ಫ್ ಲೈಫ್ ಹೆಚ್ಚಾಗುತ್ತದೆ. ಸಲ್ಫೇಟ್ ಗಳಂತಹ ಸಂರಕ್ಷಕಗಳನ್ನು ಬಳಕೆ ಮಾಡದೆ ತಯಾರಿಸಲಾದ ಆರ್ಗಾನಿಕ್ ವೈನ್ಗಳನ್ನು ಮೂರು ರಿಂದ ಆರು ತಿಂಗಳೊಳಗೆ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಹೀಗಾಗಿ, ಮುಂದೇನಾದರೂ ಬಾಟಲಿಯ ಮುಚ್ಚಳ ತಿರುಗಿಸುವಾಗ ನೆನಪಿರಲಿ... ಅದು ಶಾಶ್ವತವಲ್ಲ. ಸಮಯದೊಳಗೆ ಸೇವಿಸದಿದ್ದರೆ, ನಿಮ್ಮ ಹಬ್ಬದ ಪಾನೀಯವೇ ಅದು ವಿಷಮಯ ಅನುಭವವಾಗಬಹುದು.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.