ಲೈಫ್‌ಸ್ಟೈಲ್

ಈ 7 ಆಹಾರಗಳನ್ನು ಸೇವಿಸಿದರೆ ಡೆಂಗ್ಯೂ ಜ್ವರ ಕಡಿಮೆಯಾಗುತ್ತಂತೆ! | Health tips

Health tips: ಮಳೆಗಾಲ ಬಂತೆಂದರೆ ಸಾಕು ಜ್ವರ, ಶೀತ, ಕೆಮ್ಮು, ಮಲೇರಿಯಾ, ಡೆಂಗಿ ಈ ರೀತಿಯ ಹಲವಾರು ಕಾಯಿಲೆಗಳು ಪ್ರಾರಂಭವಾಗುತ್ತವೆ. ಸಾಮಾನ್ಯವಾಗಿ ವೈರಲ್​ ಜ್ವರವು ಸೌಮ್ಯ ಸ್ವಭಾವವನ್ನು ಹೊಂದಿರುತ್ತದೆ. ಹಾಗೇ ಡೆಂಗ್ಯೂ ಇದು ಮೊದ ಮೊದಲು ಜ್ವರದಂತಹ ಲಕ್ಷಣಗಳಲ್ಲಿ ಪ್ರಾರಂಭವಾಗಿ ನಂತರ, ರೋಗಿಗಳಲ್ಲಿ ತೀವ್ರವಾಗಿ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.

ಡೆಂಗ್ಯೂ ಹೇಗೆ ಬರುತ್ತದೆ?

ಡೆಂಗ್ಯೂ ಜ್ವರವು ವೈರಸ್​ ಸೋಕಿತ ಸೊಳ್ಳೆ ಕಡಿಯುವುದರಿಂದ ಬರುತ್ತದೆ. ಇದು ಮೊದಲು ಅಧಿಕ ಜ್ವರ, ಆಯಾಸ, ಹೊಟ್ಟೆನೋವು, ತಲೆನೋವು, ವಾಂತಿ, ವಾಕರಿಕೆ, ಜ್ವರ ಬಂದ 2 ದಿನಗಳ ನಂತರ ಚರ್ಮದ ಮೇಲೆ ಕಾಣುವ ದದ್ದುಗಳು ಈ ರೀತಿಯ ಸಮಸ್ಯೆಗಳಿಂದ ಡೆಂಗ್ಯೂ ಹರಡುತ್ತದೆ.

ಡೆಂಗ್ಯೂ ಜ್ವರದ ಲಕ್ಷಣಗಳು ಕಂಡುಬಂದರೆ, ಈ ಆಹಾರಗಳನ್ನು ಸೇವಿಸಿ...

1. ಪಪಾಯಿ ಎಲೆಗಳ ರಸ

ಪಪಾಯಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಕಿಣ್ವವನ್ನು ಹೊಂದಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಇದು ಪ್ಲೇಟ್​ಲೇಟ್ಸ್​ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಸವನ್ನು ದಿನಕ್ಕೊಮ್ಮೆ ಸೇವಿಸುವುದರಿಂದ ದೇಹದಲ್ಲಿ ಪ್ಲೇಟ್​ಲೇಟ್​ಗಳ ಸಂಖ್ಯೆ ಕ್ಷೀಣಿಸುವುದಿಲ್ಲ.

2. ದಾಳಿಂಬೆ

ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣ, ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿ ಪ್ಲೇಟ್‌ಲೆಟ್ ಎಣಿಕೆಯನ್ನು ಹೆಚ್ಚಿಸಲು ಮತ್ತು ದೇಹದ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ರಸವನ್ನು ಕುಡಿಯುವುದರಿಂದ ರಕ್ತದಲ್ಲಿನ ಪ್ಲೇಟ್‌ಲೆಟ್ ಕಡಿಮೆಯಾಗಿವುದಿಲ್ಲ. ಜ್ವರದಿಂದ ಬೇಗನೆ ಗುಣಮುಖವಾಗಲು ಇದು ಸಹಾಯ ಮಾಡುತ್ತದೆ.

3. ಎಳನೀರು

ಎಳನೀರು ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದು ಡೆಂಗ್ಯೂ ಸಮಯದಲ್ಲಿ ದೇಹದ ನಿರ್ಜಲೀಕರಣವನ್ನು ತಡೆಗಟ್ಟಿ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಒದಗಿಸುವುದರಿಂದ ಡೆಂಗ್ಯೂವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

4. ವಿಟಮಿನ್​ ಸಿ ಇರುವಂತಹ ಆಹಾರ

ಕಿತ್ತಳೆ, ನಿಂಬೆ, ಮೂಸಂಬಿ, ನೆಲ್ಲಿಕಾಯಿ ಮತ್ತು ಕಿವಿ ಹಣ್ಣುಗಳಲ್ಲಿ ವಿಟಮಿನ್ ಸಿ ಇದ್ದು, ಇವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದೀರ್ಘಕಾಲಿಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಈ ಹಣ್ಣುಗಳು ಡೆಂಗ್ಯೂ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

5. ಗ್ರೀನ್​ ಟೀ

ಈ ಟೀಯಲ್ಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ದೇಹವನ್ನು ಜೀವಕೋಶದ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೃದಯ,ಮೂಳೆ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸಿ ಜೀರ್ಣಾಂಗ ಕಾರ್ಯವಾಗಲು ಸಹಾಯ ಮಾಡುತ್ತದೆ.

6. ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ರೋಗ ನೀರೋಧಕ ಶಕ್ತಿ ಹೆಚ್ಚಿರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.ಹಾಗೆಯೇ ಈ ಬೆಳ್ಳುಳ್ಳಿ ಸೇವನೆಯು ಡೆಂಗ್ಯೂ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

7. ಸೊಪ್ಪುಗಳು

ಹಸಿರು ತರಕಾರಿಗಳಲ್ಲಿ ವಿಟಮಿನ್​ ಎ,ಸಿ,ಕೆ, ಕಬ್ಬಿಣ, ಮೆಗ್ನೀಶಿಯಂನಂತಹ ಅನೇಕ ಪೌಷ್ಟಿಕಾಂಶಗಳಿರುವುದರಿಂದ ಇದು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ