Health tips: ಆಧುನಿಕ ಜೀವನಶೈಲಿಯಲ್ಲಿ ಹೆಚ್ಚುತ್ತಿರುವಂತ ಕ್ಯಾನ್ಸರ್ ಮತ್ತು ಹೃದಯ ರೋಗಗಳು ಜನರಲ್ಲಿ ದೊಡ್ಡ ಸವಾಲುಗಳಾಗಿ ಬಿಂಬಿಸಿವೆ. ಇದೆಲ್ಲದಕ್ಕೂ ಕಾರಣ ಹೆಚ್ಚುತ್ತಿರುವ ಒತ್ತಡ, ಸೇವಿಸುವ ಆಹಾರ ಇನ್ನಿತರ ಸಮಸ್ಯೆಗಳೇ ನೇರ ಕಾರಣವಾಗಿದೆ. ಈ ಸಮಸ್ಯೆಗಳು ನಿಮ್ಮ ಬಳಿ ಸುಳಿಯದಂತೆ ನೋಡಿಕೊಳ್ಳಲು ನೀವು ಪೌಷ್ಟಿಕಾಂಶ ಇರುವಂತಹ ಈ 4 ಬೀಜಗಳನ್ನು ಸೇವಿಸಿ ಇವು ನಿಮ್ಮನ್ನು ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ತಪ್ಪಿಸುತ್ತವೆ.
ಅಗಸೆ ಬೀಜಗಳಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ಗಳು, ಫೈಬರ್, ಲಿಗ್ನಾನ್‌ಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳಂಹತ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಮೆಗಾ-3 ಮತ್ತು ಫೈಬರ್ ಕೊಬ್ಬುಣಿಕೆಯನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಹಾಗೆಯೇ, ಹೃದಯ ರೋಗ ಅಪಾಯವನ್ನು ಶೇ. 30 ರಷ್ಟು ಕಡಿಮೆ ಮಾಡುತ್ತದೆ. ಅಂದಹಾಗೇ, ಈ ಬೀಜಗಳು ಆಂಟಿ-ಕ್ಯಾನ್ಸರ್ ಗುಣಗಳನ್ನು ಹೊಂದಿದ್ದರಿಂದ ಕ್ಯಾನ್ಸರ್ ತಡೆಗಟ್ಟಲು ಹೆಚ್ಚಿನ ಸಹಾಯ ಮಾಡುತ್ತದೆ. ಹಾಗೆಯೇ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸೆಲ್ ಬೆಳವಣಿಗೆಯನ್ನು ತಡೆಯುತ್ತವೆ.
ಚಿಯಾ ಬೀಜಗಳು ಒಮೆಗಾ-3, ಫೈಬರ್, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಪಾಲಿಫೆನಾಲ್‌ಗಳನ್ನು ಸಮೃದ್ಧವಾಗಿ ಹೊಂದಿರುತ್ತವೆ. ಇವು ಹೃದಯಕ್ಕೆ ರಕ್ತದೊತ್ತಡ, ಕೊಬ್ಬುಣಿಕೆ ಮತ್ತು ಆಕ್ಸಿಡೇಶನ್‌ನ್ನು ಕಡಿಮೆ ಮಾಡಿ, ಹೃದಯ ರೋಗ ಅಪಾಯವನ್ನು ಶೇ. 30 ರಷ್ಟು ಇಳಿಕೆ ಮಾಡುತ್ತವೆ. ಅಂದಹಾಗೇ ಈ ಬೀಜಗಳು ಆಂಟಿಇನ್ಫ್ಲಮೇಟರಿ ಗುಣಗಳನ್ನು ಹೊಂದಿದ್ದು, ಇವು ಕ್ಯಾನ್ಸರ್ನ ಸೆಲ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತವೆ.
ಕುಂಬಳಕಾಯಿ ಬೀಜಗಳು ಮ್ಯಾಗ್ನೀಷಿಯಂ, ಆಂಟಿಆಕ್ಸಿಡೆಂಟ್, ಆರೋಗ್ಯಕರ ಫ್ಯಾಟ್‌ಗಳು ಮತ್ತು ಲಿಗ್ನಾನ್‌ಗಳನ್ನು ಸಮೃದ್ಧವಾಗಿ ಹೊಂದಿದೆ. ಇದು ದೇಹದಲ್ಲಿ ರಕ್ತದೊತ್ತಡ ಮತ್ತು ಕೊಬ್ಬುಣಿಕೆಯನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುವಂತೆ ಮಾಡುತ್ತದೆ. ಹಾಗೆಯೇ ಇದು ಸ್ತನ ಕ್ಯಾನ್ಸರ್ ಸೆಲ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.
ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ E, ಸೆಲೇನಿಯಂ, ಆರೋಗ್ಯಕರ ಫ್ಯಾಟ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಹಾಗಾಗಿ ಇದು ಹೃದಯದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯ ಆರೋಗ್ಯವನ್ನು ಶೇ. 30 ರಷ್ಟು ಕಾಪಾಡುತ್ತದೆ. ಇನ್ನು ಇದರಲ್ಲಿರುವ ವಿಟಮಿನ್ E ಗುಣಗಳು ಸ್ತನ ಕ್ಯಾನ್ಸರ್ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)