health tips: ಮಧುಮೇಹ ಎಂಬುದು ಇಂದಿನ ದಿನಗಳಲ್ಲಿ ಎಥೇಚ್ಛವಾಗಿ ಕಂಡುಬರುತ್ತಿರುವಂತಹ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಯುವಕರಿಂದ ಹಿಡಿದು ವಯಸ್ಸಾದವರೂ ಸಹ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಕಾಯಿಲೆಯ ನಿರ್ಮೂಲನೆಗೆ ಆಸ್ಪತ್ರೆಗೆ ಹೋಗುವುದಲ್ಲದೇ, ಪ್ರತಿದಿನ ಔಷಧಿಗಳನ್ನು ಸೇವಿಸುತ್ತಿದ್ದಾರೆ.
ಔಷಧಗಳು ಮತ್ತು ಜೀವನಶೈಲಿ ಬದಲಾವಣೆಗಳೊಂದಿಗೆ ಆಹಾರವು ಮಧುಮೇಹ ನಿಯಂತ್ರಣ ಪಡಿಸಲು ಸಹಾಯ ಮಾಡುತ್ತದೆ. ಇಲ್ಲಿ ಬಾರ್ಲಿಯು ಒಂದು ಸರಳ ಆಹಾರ ಪದಾರ್ಥವಾಗಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಬಾರ್ಲಿಯು ಹೈ ಫೈಬರ್, ಬೀಟಾ-ಗ್ಲೂಕನ್ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ, ಅದು ಮಧುಮೇಹಿಗಳಿಗೆ ಆದರ್ಶ ಆಹಾರವಾಗಿದೆ.
ಒಂದು ಸಣ್ಣ ಕಪ್ ಬಾರ್ಲಿ ಸುಮಾರು 193 ಕ್ಯಾಲೋರಿಗಳು, 6 ಗ್ರಾಂ ಪ್ರೊಟೀನ್, 44 ಗ್ರಾಂ ಕಾರ್ಬೊಹೈಡ್ರೇಟ್‌ಗಳು ಮತ್ತು 17 ಗ್ರಾಂ ಫೈಬರ್ ಅನ್ನು ಒದಗಿಸುತ್ತದೆ. ಇದರಲ್ಲಿ ಬೀಟಾ-ಗ್ಲೂಕನ್ ಎಂಬ ಫೈಬರ್ ಮುಖ್ಯವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೆ, ಮ್ಯಾಗ್ನೀಷಿಯಂ, ಮತ್ತು ವಿಟಮಿನ್ ಬಿ ಸಮೂಹಗಳನ್ನು ಈ ಬಾರ್ಲಿ ಹೊಂದಿರುತ್ತದೆ. ಈ ಎಲ್ಲಾ ಪೌಷ್ಟಿಕ ಗುಣಗಳು ಮಧುಮೇಹ ನಿರ್ವಹಣೆಗೆ ಸೂಕ್ತವಾಗಿದೆ.
ಬಾರ್ಲಿಯು ಫೈಬರ್ ಪದಾರ್ಥಗಳನ್ನು ಹೊಂದಿರುವುದರಿಂದ ರಕ್ತದಲ್ಲಿನ ಗ್ಲುಕೋಸ್ ಪದಾರ್ಥವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದನ್ನು ಸೇವನೆ ಮಾಡಿದ ನಂತರ, ರಕ್ತದಲ್ಲಿರುವ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಸಂಶೋಧನೆಯೊಂದರಲ್ಲಿ ಬಾರ್ಲಿ ಮಿಶ್ರಿತ ಅಕ್ಕಿಯನ್ನು ಸೇವಿಸಿದಾಗ ಟೈಪ್-2 ಮಧುಮೇಹಿಗಳಲ್ಲಿ ಶೇ. 20 ರಿಂದ 30 ರಷ್ಟು ಮಧುಮೇಹ ಕಡಿಮೆಯಾಗಿದೆ. ಇನ್ನು ಇದು ಬೀಟಾ-ಗ್ಲೂಕನ್ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿ ಇನ್ಸುಲಿನ್‌ನ ಉತ್ಪಾದನೆ ಸುಧಾರಿಸುತ್ತದೆ.
ಇದನ್ನೂ ಓದಿ: ನಾಳೆ ಮಣಿಪುರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ; ದೊಡ್ಡ ವಿಷಯವಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದೇನು?| Rahul Gandhi
ಪ್ರತಿನಿತ್ಯ ಬಾರ್ಲಿಯನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಹಾಗೆಯೇ ಬಾರ್ಲಿ ಸೇವನೆಯು ಹಸಿವನ್ನು ಕಡಿಮೆ ಮಾಡಿ, ತೃಪ್ತಿಯನ್ನು ಹೆಚ್ಚಿಸುತ್ತದೆ. ಇದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಹಾಗೆಯೇ ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ