ನಮ್ಮ ಜೀವನಶೈಲಿ ಬದಲಾದಂತೆ ನಾವು ಬಳಸುವ ವಸ್ತುಗಳ ಸಂಖ್ಯೆಯು ಹೆಚ್ಚುತ್ತಲೆ ಇದೆ. ವ್ಯಾಕ್ಯೂಮ್ ಕ್ಲೀನರ್, ವಾಷಿಂಗ್ಮೆಷಿನ್, ರೆಫ್ರಿಜಿರೇಟರ್ ಹೀಗೆ ವಿದ್ಯುತ್ ಉಪಕರಣಗಳನ್ನು ಬಳಸುವುದು ಸಹಜವಾಗಿದೆ. ರೆಫ್ರಿಜಿರೇಟರ್ ವಿಷಯಕ್ಕೆ ಬಂದರೆ ಆಗಾಗ್ಗೆ ಫ್ರೀಜರ್‌ನಲ್ಲಿ ಬಹಳಷ್ಟು ಐಸ್ ಸಂಗ್ರಹವಾಗುವುದನ್ನು ನೋಡುತ್ತಿರುತ್ತೇವೆ. ಅದನ್ನು ಸ್ವಚ್ಛಗೊಳಿಸುವುದು ಅಥವಾ ಐಸ್ ಮುಕ್ತವಾಗಿಸುವುದು ಹೇಗೆ ಎಂಬುದೆ ದೊಡ್ಡ ಸವಾಲಾಗಿರುತ್ತದೆ. ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ ಕೊನೆಗೆ ಡಿಫ್ರಾಸ್ಟಿಂಗ್ ಮಾಡುವ ಮೂಲಕ ಐಸ್ ಕರಗುವಂತೆ ಮಾಡುತ್ತೇವೆ.
ಇದನ್ನು ಓದಿ: ಗರ್ಭಕೋಶ ತೆಗೆಸಿದ ಬಳಿಕ ಪತ್ಯೆ ಏಕಿರಬೇಕು?: ಯಾವುದನ್ನು ಸೇವಿಸಬೇಕು & ಏನನ್ನು ಮುಟ್ಟಬಾರದು.. ಮಾಹಿತಿ ಇಲ್ಲಿದೆ
ಡಿಫ್ರಾಸ್ಟಿಂಗ್ ಮಾಡುವುದರಿಂದ ಅನಾನುಕೂಲವೆ ಹೆಚ್ಚು. ಫ್ರೀಜರ್ ಅನ್ನು ಡಿಫ್ರಾಸ್ಟ್ ಮಾಡಿದಾಗ ಫ್ರಿಜ್ನ ತಂಪಾಗುವಿಕೆಯು ನಿಲ್ಲುತ್ತದೆ. ಆ ಸಮಯದಲ್ಲಿ ರೆಫ್ರಿಜರೇಟರ್ನಲ್ಲಿ ಇರಿಸಲಾದ ಹಣ್ಣುಗಳು, ತರಕಾರಿಗಳು ಮತ್ತು ಆಹಾರ ಪದಾರ್ಥಗಳು ಹಾಳಾಗುವ ಸಂಭವವಿರುತ್ತದೆ. ಆದ್ದರಿಂದ ಐಸ್ ಕರಗಿಸಲು ಮನೆಯಲ್ಲಿ ಮಾಡಬಹುದಾದ ಟ್ರಿಕ್ಸ್ ಬಗ್ಗೆ ನಿಮಗೆ ಇಲ್ಲಿ ತಿಳಿಸಲಾಗಿದೆ.
ಫ್ರೀಜರ್ ನಲ್ಲಿ ಹೆಚ್ಚು ಮಂಜುಗಡ್ಡೆ ಶೇಖರಣೆಗೊಂಡಾಗ ಅದನ್ನು ಸುಲಭವಾಗಿ ಕರಗಿಸಲು ಬಿಸಿ ನೀರನ್ನು ಸಣ್ಣ ಪಾತ್ರೆಯಲ್ಲಿ ಕುದಿಸಬೇಕು. ಬಳಿಕ ಆ ಪಾತ್ರೆಯನ್ನು ಬಿಸಿನೀರಿನ ಜತೆಗೆ ಫ್ರೀಜರ್ ಒಳಗೆ ಇಡಬಹುದು. ಕೆಲವೆ ಸಮಯದಲ್ಲಿ ಮಂಜುಗೆಡ್ಡೆ ಕರಗಲು ಪ್ರಾರಂಭಿಸುತ್ತದೆ. ಅಷ್ಟು ಸಣ್ಣ ಪಾತ್ರೆ ನಿಮ್ಮ ಬಳಿ ಇಲ್ಲವಾದರೆ, ಸಿಂಪಲ್ ಕಾಫಿ ಮಗ್ನಲ್ಲಿ ಬಿಸಿ ನೀರನ್ನು ತುಂಬಿಸಿ ಅದನ್ನು ನಿಧಾನವಾಗಿ ಫ್ರೀಜರ್‌ನಲ್ಲಿ ಇರಿಸಿ. ಈ ಟ್ರಿಕ್ ಸಹಾಯದಿಂದ ಫ್ರೀಜರ್‌ನಲ್ಲಿ ಸಂಗ್ರಹವಾಗಿರುವ ಹಿಮಗೆಡ್ಡೆ ಸುಲಭವಾಗಿ ಕರಗುತ್ತದೆ.
ಅನೇಕ ಬಾರಿ ರೆಫ್ರಿಜರೇಟರ್ನಲ್ಲಿ ಕಟ್ಟುವ ಐಸ್ಗೆಡ್ಡೆಯನ್ನು ಬಿಸಿನೀರಿನ ಸಹಾಯದಿಂದ ಸುಲಭವಾಗಿ ಸ್ವಚ್ಛಗೊಳಿಸಲಾಗುವುದಿಲ್ಲ. ಆದ್ದರಿಂದ ಸ್ವಲ್ಪ ಹೆಚ್ಚು ಬಿಸಿ ಇರುವ ನೀರನ್ನು ಸ್ಪೂನ್ ಮೂಲಕ ಐಸ್ ಮೇಲೆ ಹಾಕುವ ಮೂಲಕ ಸ್ವಚ್ಛಗೊಳಿಸಬಹುದು. ಬಿಸಿ ನೀರು ಬಳಸುವುದನ್ನು ಹೊರತು ಪಡಿಸಿ ಇನ್ನೊಂದು ಮಾರ್ಗವೂ ಇದೆ. ಐಸ್ ಕರಗಿಸಲು ನೀವು ಹೇರ್ ಡ್ರೈಯರ್ ಅನ್ನು ಬಳಸಬಹುದು.
ಹೇರ್ ಡ್ರೈಯರ್ ಬಳಸುವುದರಿಂದ ಕಡಿಮೆ ಸಮಯದಲ್ಲಿ ಫ್ರೀಜರ್‌ನಲ್ಲಿ ಐಸ್ ಅನ್ನು ಕರಗಿಸಬಹುದು. ಇದು ಸುಲಭವಲ್ಲ ಆದರೆ ಬಹಳ ಉಪಯುಕ್ತವಾಗಿದೆ.