ನೀವು ಕಾಫಿ ಪ್ರಿಯರಾಗಿದ್ದರೆ ನಿಮಗೊಂದು ಗುಡ್ ನ್ಯೂಸ್. ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಲಿದೆ. ಇದು ಹೃದ್ರೋಗ, ಮಧುಮೇಹದಂತಹ ಚಯಾಪಚಯ ರೋಗಗಳ ಅಪಾಯದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಸಂಶೋಧನೆಯಿಂದ ತಿಳಿದು ಬಂದ ಅಂಶವಾಗಿದೆ. ಇಂದು (ಅಕ್ಟೋಬರ್ 1) ಇಂಟರ್ ನ್ಯಾಷನಲ್ ಕಾಫಿ ಡೇ (International Coffee Day) ಎಂಬುದು ನಿಮಗೆ ತಿಳಿದಿದೆಯೇ?
ಕೆಫೀನ್ ಅಂಶದಿಂದ ಆಗುವ ಪ್ರಯೋಜನಗಳು:
- ಹೊಸ ಅಧ್ಯಯನದ ಪ್ರಕಾರ ಕಾಫಿ ಮತ್ತು ಕೆಫೀನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಹೃದಯರಕ್ತನಾಳದ ಮತ್ತು ಚಯಾಪಚಯ ಅಸ್ವಸ್ಥತೆಯನ್ನು ರಕ್ಷಿಸಬಹುದು. ಹೃದಯ ಸಂಬಂಧಿ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.
- ಹೃದಯ ಮತ್ತು ಪಿತ್ತಜನಕಾಂಗವನ್ನು ಆರೋಗ್ಯವಾಗಿಡುವುದರ ಜತೆಗೆ ಮಧುಮೇಹವು ನಿಯಂತ್ರಣದಲ್ಲಿಡುತ್ತದೆ.
ಕೆಫೀನ್ ಸೇವಿಸುವುದರಿಂದ ಮೂಡ್ ಫ್ರೆಶ್ ಆಗಿರುತ್ತದೆ.
- ಕಾಫಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಪಾಲಿಫಿನಾಲ್‌ಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳು ಇರುವುದರಿಂದ ಇದು ಮೆದುಳಿಗೆ ತುಂಬಾ ಒಳ್ಳೆಯದು. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
- ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಕಾಫಿ ಸಹಾಯ ಮಾಡುತ್ತದೆ.
- ಕಾಫಿ ನಿಮಗೆ ಶಕ್ತಿಯನ್ನು ನೀಡುತ್ತದೆ. ನೀವು ದಿನವಿಡೀ ಚೈತನ್ಯದಿಂದ ಇರುವಂತೆ ಮಾಡುತ್ತದೆ.
- ಕಾಫಿ ಸೇವನೆಯು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಒಂದು ದಿನದಲ್ಲಿ ಎಷ್ಟು ಕಪ್ ಕಾಫಿ ಸೇವಿಸುವುದು ಆರೋಗ್ಯಕರ ?:
ನೀವು ಒಂದು ದಿನದಲ್ಲಿ 200-300 ಮಿಗ್ರಾಂ ಕೆಫೀನ್ ಅನ್ನು ಸೇವಿಸಬಹುದು. ಅಂದರೆ ನೀವು 2 ರಿಂದ 3 ಕಪ್ ಕಾಫಿ ಕುಡಿಯಬಹುದು. ನಿಮ್ಮ ರುಚಿಗೆ ಅನುಗುಣವಾಗಿ ನೀವು ಬ್ಲ್ಯಾಕ್ ಕಾಫಿ ಅಥವಾ ಹಾಲಿನ ಕಾಫಿಯನ್ನು ಕುಡಿಯಬಹುದು. ಗರಿಷ್ಠ ಪ್ರಯೋಜನಗಳನ್ನು ಪಡೆಯಲು, ಕಾಫಿಗೆ ಹೆಚ್ಚು ಸಕ್ಕರೆ ಸೇರಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ. ವ್ಯಕ್ತಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಾಫಿಯ ಪ್ರಮಾಣವನ್ನು ನಿರ್ಧರಿಸಬೇಕು.