Golgappa History 
ಲೈಫ್‌ಸ್ಟೈಲ್

ಭಾರತದ ನೆಚ್ಚಿನ ಸ್ಟ್ರೀಟ್​ ಫುಡ್​ ಗೋಲ್​ಗಪ್ಪಗಿದೆಯಂತೆ ಮಹಾಭಾರತದ ನಂಟು; ತಯಾರಿಸಿದ್ಯಾರು?..Golgappa History

ಪ್ರಮುಖ ಮುಖ್ಯಾಂಶಗಳು

  • ಆಲೂಗಡ್ಡೆ, ಕಡಲೆ, ಮಸಾಲೆ ಮಿಶ್ರಿತದ ಗೋಲ್​ಗಪ್ಪ ಹುಟ್ಟಿಕೊಂಡಿದ್ದು ಮಹಾಭಾರತದಲ್ಲಿ
  • ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿ ಪತ್ತೆ ಹಚ್ಚಿದ ಹೊಸ ಆಹಾರ ಎನ್ನುವ ಪ್ರತೀತಿ
  • ಮಗಧರ ಆಳ್ವಿಕೆ ಕಾಲದಲ್ಲಿಯೂ ಪುಲ್ಕಿ ಎನ್ನುವ ಈ ಆಹಾರ ತಯಾರಿ ಮಾಡಲಾಗಿತ್ತು ಎನ್ನಲಾಗಿದೆ
ಹೌದು, ಸುಕ್ಕಾ ಪುರಿ, ಮಸಾಲೆ, ದಹಿ ಪುರಿ ಹೀಗೆ ನಾನಾ ಹೆಸರಲ್ಲಿ ತಿನ್ನುವ ಗೋಲ್​ಗಪ್ಪಗೆ ಹೋಟೆಲ್​ ಮತ್ತು ರೆಸ್ಟೋರೆಂಟ್​ ಸೇರಿದಂತೆ ಹಲವು ಕಡೆ ಒಂದೊಂದು ರೇಟು. ದುಬಾರಿ ಮತ್ತು ಕೈಗೆಟುಕುವ ದರಕ್ಕೆ ಸಿಗುವ ಇದು ಹುಟ್ಟಿಕೊಂಡಿದ್ದೆಲ್ಲಿ, ಇದಕ್ಕಿರುವ ಪ್ರಾಚೀನ ಕತೆಯೇನು ಅನ್ನೋದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ದ್ರೌಪದಿ ತಯಾರಿಸಿದ್ಲಂತೆ ಗೋಲ್ಗಪ್ಪಾ?

ಅದು ಪಾಂಡವರು ವನವಾಸದಲ್ಲಿದ್ದ ಕಾಲ. ದ್ರೌಪದಿ ಆಗ ತಾನೆ ಅರ್ಜುನನ್ನು ವರಿಸಿ ಹೊಸದಾಗಿ ಪಾಂಡವರನ್ನು ಸೇರಿದ್ದಳು. ಅವರ ಬಳಿ ಅಷ್ಟಾಗಿ ಆಹಾರ ಪದಾರ್ಥವೂ ಇರಲಿಲ್ಲ. ಇನ್ನು ಭೀಮನಿಗೆ ಕೆಜಿಗಟ್ಟಲೇ ಊಟ ಬೇಕಿತ್ತು. ಹೀಗಾಗಿ, ಕುಂತಿ ದ್ರೌಪದಿಯ ಚಾಣಕ್ಯತನ ಪರೀಕ್ಷೆ ಮಾಡಲು ಅವರ ಬಳಿ ಇದ್ದ ಸ್ವಲ್ಪ ಹಿಟ್ಟು ಹಾಗೂ ತರಕಾರಿಗಳು ಮತ್ತು ಆಲೂಗಡ್ಡೆ ಕೊಟ್ಟು ಐವರು ಗಂಡು ಮಕ್ಕಳ ಹಸಿವನ್ನು ನೀಗಿಸುವ ಊಟವನ್ನು ತಯಾರಿಸಲು ಸೂಚನೆ ನೀಡಿದ್ದರಂತೆ.
ಅತ್ತೆ ಕೊಟ್ಟ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿ ತೀಡಿ ಅದನ್ನು ಎಣ್ಣೆಯಲ್ಲಿ ಹುರಿದು ಪಕ್ಕಕ್ಕೆ ಇಟ್ಟರು. ಆನಂತರ ಆಲೂಗಡ್ಡೆ, ಕಡಲೆ, ನೀರು ಸೇರಿಸಿ ಖಾದ್ಯ ತಯಾರಿ ಮಾಡಿಟ್ಟರು. ನಂತರ ಅದನ್ನು ಪಾಂಡವರಿಗೆ ಉಣಬಡಿಸಿದರು. ಪಾಂಡವರು ಈ ಆಹಾರ ಸೇವಿಸಿ ಆನಂದ ಪಟ್ಟರು. ಅಂದು ನವವಧು ಆಗಿದ್ದ ದ್ರೌಪದಿಯೇ ಈ ಆಹಾರವನ್ನು ಪತ್ತೆ ಹಚ್ಚಿದ್ದು ಎಂದು ಇಂದಿಗೂ ನಂಬಲಾಗಿದೆ.

ಮಗಧ ಕಾಲಕ್ಕೂ ನಂಟಿದೆ?

ಪುಲ್ಕಿ ಎಂತಲು ಕರೆಯಲಾಗುವ ಗೋಲ್​ಗಪ್ಪಾ ಮಗಧದಲ್ಲಿ ಹುಟ್ಟಿಕೊಡಿತ್ತು. ಅಂದರೆ ಈಗಿನ ಬಿಹಾರದಲ್ಲಿ. ಆದರೆ, ಇಲ್ಲಿ ಇದನ್ನು ಯಾರು ಕಂಡುಹಿಡಿದರು ಎನ್ನುವ ಸಾಕ್ಷಿ ಐತಿಹಾಸಿಕ ದಾಖಲೆಗಳಲ್ಲಿ ಪತ್ತೆಯಾಗಿಲ್ಲ, ಕತೆಗಳೂ ಇಲ್ಲ. ಆದರೆ, ಇದಕ್ಕೆ ಬಳಸುವ ಪದಾರ್ಥ ಮತ್ತು ಈ ಹಿಂದೆ ಬಳಕೆ ಮಾಡುತ್ತಿದ್ದ ಪದಾರ್ಥವನ್ನು ಅಳತೆ ಮಾಡಿ ನೋಡಿದಾಗ ಇದೊಂದು ಅಸಂಬದ್ಧ ಎನ್ನಲಾಗುತ್ತದೆ. ಗೋಲ್ಗಪ್ಪಾಗೆ ಆಲೂಗಡ್ಡೆ ಮತ್ತು ಮೆಣಸಿನಕಾಯಿ ಬಳಸಲಾಗುತ್ತದೆ. ಆದರೆ, ಇವು ಇತಿಹಾಸದಲ್ಲಿ ದೇಶಕ್ಕೆ ಬಂದದ್ದು 300–400 ವರ್ಷಗಳ ಹಿಂದೆ. ಈ ಮಧ್ಯೆ ಈ ಪುರಿಯನ್ನು ಬಳಸಿದ್ದಾದರೂ ಹೇಗೆ ಎನ್ನುವುದು ಪತ್ತೆಯಾಗಿಲ್ಲ.

ಯಾರು ಏನಂತಾರೆ?

ಆಲೂಗಡ್ಡೆ, ಹುಣಸೆ, ಕಡಲೆ, ಪುದಿನ ಹೊಂದಿದ ಜಲ್​ಜೀರ, ದಹಿ ಮತ್ತು ಮಸಾಲೆಯುಕ್ತ ಗೋಲ್​ಗಪ್ಪ, ಕಚೋರಿ ಗೋಲ್ಗಪ್ಪಗಳು 100-125 ವರ್ಷಗಳ ಹಿಂದೆಯೇ ಉತ್ತರ ಪ್ರದೇಶ ಮತ್ತು ಬಿಹಾರದ ಭಾಗಗಳಲ್ಲಿ ಗೋಲ್​ಗಪ್ಪಾಗಳು ಹೆಚ್ಚಾಗಿ ಪರಿಚಯವಾಗಿರಬಹುದು ಎಂದು ಆಹಾರ ಇತಿಹಾಸಕಾರ ಪುಷ್ಪೇಶ್ ಪಂತ್ ಹೇಳಿದರು.
ಗೋಲ್​ಗಪ್ಪ ಅರ್ಥವೇನು?
ಗೋಲ್ಗಪ್ಪ ಎಂದೂ ಕರೆಯಲ್ಪಡುವ ಪಾನಿ ಪುರಿ ಬಹಳ ಆಸಕ್ತಿದಾಯಕ ಮತ್ತು ಮೋಜಿನ ಅರ್ಥವನ್ನು ಹೊಂದಿದೆ. 'ಗೋಲ್ಗಪ್ಪ' ಎಂಬ ಪದವನ್ನು ಎರಡು ಭಾಗಗಳಾಗಿ ವಿಂಗಡಿಸಿದರೆ, ಗೋಲ್​ ಎಂದರೆ ಆಲೂಗಡ್ಡೆಯಿಂದ ತುಂಬಿದ ಹಿಟ್ಟಿನಿಂದ ಮಾಡಿದ ಆಕಾರ ಎನ್ನುವುದನ್ನು ಸೂಚಿಸುತ್ತದೆ. ಇನ್ನು 'ಗಪ್ಪಾ' ಎಂದರೆ ಅದನ್ನು ತಿನ್ನುವ ಪ್ರಕ್ರಿಯೆಯನ್ನು ಸೂಚಿಸುತ್ತದೆ.