ಲೈಫ್‌ಸ್ಟೈಲ್

ಸುಡುವ ಬಿಸಿಲು ಮತ್ತು ದೀರ್ಘಕಾಲ ಎಸಿಗಳಿಂದ ಆರೋಗ್ಯ ಹದಗೆಡುತ್ತಿದಿಯೇ? ಅದರಿಂದ ತಪ್ಪಿಸಿಕೊಳ್ಳಲು ಈ ಮಾರ್ಗ ಪ್ರಯತ್ನಿಸಿ! | Health tips

Health tips: ಇಂದಿನ ಯುವ ಸಮೂಹಗಳು ಅತಿಯಾದ ಬಿಸಿಲು ಹಾಗೂ ದೀರ್ಘವಾದ ಎಸಿಗಳಿಂದ ಆದಷ್ಟು ದೂರ ಇರಲು ಇಷ್ಟಪಡುತ್ತಿದ್ದಾರೆ. ಹಾಗೆಯೇ ಅನೇಕರ ಆರೋಗ್ಯದ ಮೇಲೆ ಈ ಎರಡು ಅಗತ್ಯಗಳು ಗಂಭೀರವಾದ ಪರಿಣಾಮವನ್ನು ಬೀರುತ್ತವೆ. ಇನ್ನು ಕೆಲವರಿಗೆ ಬಿಸಿಲಿಗೆ ಹೋದ ತಕ್ಷಣ ತಲೆ ಸುತ್ತುವುದು, ಬೆವರುವುದು,ಆಯಾಸ ಆಗುವುದು,ಡಿಹೈಡ್ರೇಷನ್​ನಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಇನ್ನು ಕೆಲವರು ಎಸಿಯಲ್ಲಿ ಕುಳಿತ ಸ್ವಲ್ಪ ಸಮಯಕ್ಕೆ ಸೀನುವುದು, ಅಲರ್ಜಿ, ಕಣ್ಣಿನ ಕಿರಿಕಿರಿ, ಒಣ ಚರ್ಮ, ಶೀತ, ಶ್ವಾಸಕೋಸದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಹಾಗಾಗಿ ಅದರಿಂದ ಹೊರ ಬರಲು ಈ ರೀತಿಯ ಕ್ರಮಗಳನ್ನು ಕೈಗೊಂಡು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ..

ಈ ಕ್ರಮಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

* ತೇವಾಂಶ ಕಾಪಾಡಿಕೊಳ್ಳಿ

ಈ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿನಿತ್ಯ ದಿನಕ್ಕೆ ಕನಿಷ್ಟ 3-4 ಲೀಟರ್​ ನೀರನ್ನು ಕುಡಿಯಿರಿ. ಹಾಗೂ ತೆಂಗಿನ ನೀರು, ನಿಂಬೆ ರಸ, ಅಥವಾ ಎಲೆಕ್ಟ್ರೋಲೈಟ್ ಇರುವಂತಹ ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ತೇವಾಂಶ ಕಾಪಾಡಲು ಸಹಾಯವಾಗುತ್ತದೆ ಇದರಿಂದ ಸಮಸ್ಯೆಗಳನ್ನು ತಡೆಗಟ್ಟಬಹುದು.

* ಸೂಕ್ತವಾದ ಬಟ್ಟೆ ಧರಿಸಿ

ಯಾವುದೇ ವ್ಯಕ್ತಿ ಮೇಲಿರುವಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಆತನು ತಾವು ಧರಿಸುವ ಉಡುಗೆಗಳ ಮೇಲೆ ಗಮನಕೊಡುವುದು ಉತ್ತಮವಾಗಿರುತ್ತದೆ. ಹಾಗೆಯೇ ತೆಳುವಅದ ಬಟ್ಟೆ ಧರಿಸುವುದು, ಗಾಳಿಯಾಡುವಂತಹ ಹತ್ತಿ ಬಟ್ಟೆ ಧರಿಸುವುದರಿಂದ ಇದು ಶಾಖವನ್ನು ಕಡಿಮೆ ಮಾಡುವುದರಿಂದ ಬೆವರುವಿಕೆಯನ್ನು ಹೀರಿಕೊಳ್ಳುತ್ತದೆ.

* ಎಸಿ ನಿಯಂತ್ರಣ

ಎಸಿಯ ತಾಪಮಾನವನ್ನು ತಡೆಯಲು ಆಗದಿದ್ದರೆ, ಅದನ್ನು 24-26°C ಒಳಗೆ ಇರಿಸಿಕೊಳ್ಳಿ. ಇದರಿಂದ ದೇಹಕ್ಕೆ ಆರಾಮದಾಯಕವಾಗುತ್ತದೆ. ಹಾಗೆಯೇ ಶಾಖದ ಆಘಾತವನ್ನು ತಡೆಯುತ್ತದೆ. ಎಸಿಯನ್ನು ಆಗಾಗ ಆಫ್ ಮಾಡಿ, ಕಿಟಕಿಗಳನ್ನು ತೆಗೆದುಕೊಂಡು ನೈಸರ್ಗಿಕ ಗಾಳಿಯನ್ನು ಪಡೆದುಕೊಳ್ಳಿ ಇದರಿಂದ ನಿಮ್ಮ ಆರೋಗ್ಯ ಸಮನಾಗಿರುತ್ತದೆ.

* ನೈಸರ್ಗಿಕ ಗಾಳಿ

ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಬೀಸುವಂತಹ ಗಾಳಿಯನ್ನು ತೆಗೆದುಕೊಳ್ಳಲು ಆದಷ್ಟು ಮನೆಯಿಂದ ಹೊರಗಡೆ ಇರಿ. ಇಲ್ಲಿ ಮರಗಿಡಗಳಿಮದ ಬೀಸುವ ನೈಸರ್ಗಿಕ ಗಾಳಿಯು ನಿಮಗೆ ಆರಾಮದಯಕ ಸ್ಥಿತಿಗೆ ತಲುಪಿಸುತ್ತದೆ. ಹಾಗೆಯೇ ನಿಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ.

* ಆರೋಗ್ಯ ಎಚ್ಚರಿಕೆ

ಅತಿಯಾದ ಶಾಖದಿಂದ ತಲೆತಿರುಗುವಿಕೆ, ಆಯಾಸ, ಅತಿಯಾದ ಬೆವರುವಿಕೆ, ಅಥವಾ ಒಣಗಿದ ಚರ್ಮದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಇನ್ನು ಆದಷ್ಟು ಶಾಖದಿಂದ ದೂರ ಇರಲು ಪ್ರಯತ್ಸಿಸಿ.

* ಆಹಾರ ಕ್ರಮ

ಈ ರೀತಿಯ ಸಮಸ್ಯೆಯಿಮದ ಬಳಲುತ್ತಿರುವವರು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಲಘು ಆಹಾರ ಸೇವಿಸಿ. ಖಾರದ, ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ, ಇದು ದೇಹದ ಶಾಖವನ್ನು ಹೆಚ್ಚಿಸಬಹುದು.

* ವಿಶ್ರಾಂತಿ

ಶಾಖದ ಒತ್ತಡವನ್ನು ಕಡಿಮೆ ಮಾಡಲು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಪ್ರತಿದಿನ ಯೋಗ, ಧ್ಯಾನ ಅಥವಾ ತಂಪಾದ ವಾತಾವರಣದಲ್ಲಿ ವಿಶ್ರಾಂತಿಯಿಂದ ಒತ್ತಡ ನಿವಾರಣೆಯಾಗುತ್ತದೆ. ಆದಷ್ಟು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಿ ಇದರಿಂದ ನೀವು ಆರಾಮವಾಗಿ ಇರುತ್ತೀರಿ..

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ