ನಾನು ಗುತ್ತಿಗೆ ಕಾರ್ವಿುಕ. ನನಗೆ 10 ಲಕ್ಷ ರೂ. ಗೃಹ ಸಾಲ ಬೇಕಾಗಿದೆ. ನನ್ನ ಸಂಬಳ 15 ಸಾವಿರ. ಯಾವ ಬ್ಯಾಂಕಿನಲ್ಲಿ ಸಾಲ ಪಡೆಬಹುದು ತಿಳಿಸಿ.
| ಶ್ರೀನಿವಾಸ ರಾಮನಗರ
ಶ್ರೀನಿವಾಸ ಅವರೆ, ಬ್ಯಾಂಕ್ಗಳು ಗೃಹ ಸಾಲ ನೀಡುವಾಗ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಸಾಲ ಪಡೆಯುವ ವ್ಯಕ್ತಿಯ ಒಟ್ಟು ಮಾಸಿಕ ವೇತನ, ಸಾಲ ಮರು ಪಾವತಿ ಸಾಮರ್ಥ್ಯ, ಅರ್ಜಿದಾರನ ವಯಸ್ಸು, ಆರ್ಥಿಕ ಸ್ಥಿತಿಗತಿ, ಈ ಹಿಂದೆ ಸಾಲ ಪಡೆದಿರುವ ಇತಿಹಾಸ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತವೆ. ಇದಲ್ಲದೆ ಈಗಾಗಲೇ ಮಾಡಿರುವ ಸಾಲಗಳ ಸ್ಥಿತಿಗತಿಯನ್ನು ಗಮನಿಸುತ್ತವೆ. ನಿಮ್ಮ ತಿಂಗಳ ಒಟ್ಟು ಆದಾಯ 15 ಸಾವಿರ ರೂ. ಎಂದು ತಿಳಿಸಿದ್ದೀರಿ. 10 ಲಕ್ಷ ರೂ. ಸಾಲಕ್ಕೆ ನೀವು 10 ಸಾವಿರ ರೂ. ತಿಂಗಳ ಕಂತು (ಇಎಂಐ) ಕಟ್ಟಬೇಕಾಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್ಗಳು ಗೃಹ ಸಾಲ ನೀಡಲು ಕನಿಷ್ಠ ಮಾಸಿಕ ವೇತನ 25 ಸಾವಿರ ರೂ. ಇರಬೇಕು ಎಂದು ಬಯಸುತ್ತವೆ. ಇದೇ ವೇಳೆ ನೀವು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವುದರಿಂದ ಉದ್ಯೋಗ ಭದ್ರತೆ ಬಗ್ಗೆ ಬ್ಯಾಂಕ್ಗಳು ಪ್ರಶ್ನಿಸುತ್ತವೆ. ಗೃಹ ಸಾಲ ದೀರ್ಘಾವಧಿಯ ಸಾಲವಾಗಿರುವ ಕಾರಣ ನಿಮಗೆ ಸಾಲ ದೊರೆಯುವ ಸಾಧ್ಯತೆ ತೀರಾ ಕಡಿಮೆ. ತಪ್ಪು ತಿಳಿಯಬೇಡಿ. ದೇವರು ನಿಮಗೆ ಒಳಿತು ಮಾಡಲಿ.
ಕೋವಿಡ್ ಸೋಂಕಿನಿಂದಾಗಿ ಷೇರು ಮಾರುಕಟ್ಟೆ ಮೇಲಿಂದ ಮೇಲೆ ಕುಸಿತ ಕಾಣುತ್ತಿದೆ. ಈ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆ ನಿಲ್ಲಿಸುವುದು ಸೂಕ್ತವೇ?
| ಶ್ರೀನಿವಾಸ ಕುಲಕರ್ಣಿ ಹುಬ್ಬಳ್ಳಿ
ನಾನು ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಎಂಡಬ್ಲೂ್ಯಪಿ ಕಾಯ್ದೆ ಅನ್ವಯ ಟಮ್ರ್ ಲೈಫ್ ಇನ್ಶೂರೆನ್ಸ್ ತೆಗೆದುಕೊಂಡರೆ ಅನುಕೂಲವೇನು?
| ಶೇಷಕೃಷ್ಣ ಬೆಂಗಳೂರು
ಟಮ್ರ್ ಲೈಫ್ ಇನ್ಶೂರೆನ್ಸ್ ತಗೆದುಕೊಂಡ ಮಾತ್ರಕ್ಕೆ ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ಇನ್ಶೂರೆನ್ಸ್ ಹಣ ಸಿಕ್ಕಿಬಿಡುವುದಿಲ್ಲ. ಎಷ್ಟೋ ಸಂದರ್ಭದಲ್ಲಿ ನಾಮಿನಿ ಹೆಸರಿಸಿದ್ದರೂ ಇನ್ಶೂರೆನ್ಸ್ ಕವರೇಜ್ ಹಣ, ಸಾಲ ಕೊಟ್ಟಿರುವವರು ಅಥವಾ ಸಂಬಂಧಿಕರ ಪಾಲಾಗಿರುವ ನಿದರ್ಶನಗಳಿವೆ. 1874ರಲ್ಲಿ ಜಾರಿಗೆ ಬಂದಿರುವ ಎಂಡಬ್ಲೂ್ಯಪಿ ಕಾಯ್ದೆಯ ಸೆಕ್ಷನ್ 6ರಡಿಯಲ್ಲಿ ಟಮ್ರ್ ಇನ್ಶೂರೆನ್ಸ್ ಪಡೆದುಕೊಂಡರೆ, ಪತ್ನಿ, ಮಕ್ಕಳು ಅಥವಾ ಸೂಚಿತ ವ್ಯಕ್ತಿಗೆ ಮಾತ್ರ ಇನ್ಶೂರೆನ್ಸ್ ಕ್ಲೇಮ್ ಹಣ ಸಿಗುತ್ತದೆ. ಸಾಲಗಾರರು, ಸಂಬಂಧಿಕರು ಈ ಹಣದ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ. ಇನ್ಶೂರೆನ್ಸ್ನಿಂದ ಬಂದಿರುವ ಹಣದಲ್ಲಿ ಗೃಹ ಸಾಲ ಮರು ಪಾವತಿ ಮಾಡುವಂತೆ ಕೋರ್ಟ್ನಲ್ಲಿ ಬ್ಯಾಂಕ್ಗಳು ಪ್ರಶ್ನಿಸುವ ಹಾಗಿಲ್ಲ. ಎಂಡಬ್ಲೂ್ಯಪಿ ಕಾಯ್ದೆ ಅನ್ವಯ ಯಾರ ಹೆಸರು ಇದೆಯೋ ಅವರಿಗೆ ಮಾತ್ರ ಇನ್ಶೂರೆನ್ಸ್ ಕ್ಲೇಮ್ ಹಣದ ಮೇಲೆ ಸಂಪೂರ್ಣ ಹಕ್ಕಿರುತ್ತದೆ.
ಉದಾಹರಣೆ: ಒಂದು ವರ್ಷದ ಹಿಂದೆ ನಾಗರಾಜ್ ಗೃಹ ಸಾಲ ಪಡೆದಿದ್ದರು. ಮನೆ ಸಾಲ ಪಡೆದ ಬೆನ್ನಲ್ಲೇ ಅವರು ಟಮ್ರ್ ಲೈಫ್ ಇನ್ಶೂರೆನ್ಸ್ ಪಡೆದುಕೊಂಡು, ವಿವಾಹಿತ ಮಹಿಳೆ ಆಸ್ತಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಿದರು. ಪತ್ನಿ ಮತ್ತು ಮಕ್ಕಳು ಅದರ ಫಲಾನುಭವಿಗಳು ಎಂದು ನಮೂದಿಸಿದರು. ಮೂರು ವರ್ಷಗಳ ಬಳಿಕ ನಾಗರಾಜ್ ಅಕಾಲಿಕ ಸಾವಿಗೆ ತುತ್ತಾದರು. ಆಗ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿ ಇನ್ಶೂರೆನ್ಸ್ ಹಣದಿಂದ ಸಾಲ ಮರುಪಾವತಿ ಮಾಡಬೇಕು ಎಂದು ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಪತ್ನಿ ಮತ್ತು ಮಕ್ಕಳಿಗೆ ಮಾತ್ರ ಆ ಹಣ ನೀಡಬಹುದು ಎಂದು ಹೇಳಿತು.
ನನ್ನ ಹೆಸರು ಸೀತಾರಾಮಶೆಟ್ಟಿ. ಮಂಗಳೂರು ನಿವಾಸಿ. ನಾನು ಅಂಚೆ ಜೀವ ವಿಮೆ ಮತ್ತು ಪಿಪಿಎಫ್ ಮಾಡಿಸಿದ್ದೇನೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗುತ್ತಿರುತ್ತದೆ. ಆದ್ದರಿಂದ ನಾನು ವರ್ಗಾವಣೆಯಾಗುವ ಜಿಲ್ಲೆಗಳಿಗೆಲ್ಲಾ ಅಂಚೆ ಜೀವ ವಿಮೆ ಮತ್ತು ಪಿಪಿಎಫ್ ಖಾತೆಗಳನ್ನು ವರ್ಗಾಯಿಸಿಕೊಳ್ಳಬೇಕೆ? ವರ್ಗಾಯಿಸಿಕೊಳ್ಳದಿದ್ದರೆ ಇವುಗಳ ಮೆಚ್ಯುರಿಟಿ ಆದ ನಂತರ ಎಲ್ಲಿ ಖಾತೆ ತೆರೆದಿದ್ದೆವೋ ಅಲ್ಲಿಯೇ ಅಂಚೆ ಜೀವ ವಿಮೆ ಮತ್ತು ಪಿಪಿಎಫ್ ಹಣವನ್ನು ಪಡೆಯಬೇಕೇ? ಅಥವಾ ಯಾವ ಊರಿನ ಅಂಚೆ ಕಚೇರಿಯಲ್ಲಾದರೂ ಪಡೆಯಬಹುದೇ? ದಯವಿಟ್ಟು ತಿಳಿಸಿ.
ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅಕೌಂಟ್ಗಳನ್ನು 2014ರಿಂದ ಆನ್ ಲೈನ್ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುತ್ತಿದೆ. ಹಾಗಾಗಿ ಖಾತೆ ಹೊಂದಿರುವ ವ್ಯಕ್ತಿಯು ಯಾವುದೇ ಅಂಚೆ ಕಚೇರಿಯಲ್ಲಿ ಹೋಗಿ ಪಿಪಿಎಫ್ ಖಾತೆಗೆ ಹಣ ಸಂದಾಯ ಮಾಡಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ಇದ್ದರೆ ನೇರವಾಗಿ ಪಿಪಿಎಫ್ ಖಾತೆಗೆ ಹಣ ವರ್ಗಾಯಿಸಬಹುದು. ಇನ್ನು ಪೋಸ್ಟಲ್ ಲೈಫ್ ಇನ್ಶೂರೆನ್ಸ್ ವಿಚಾರಕ್ಕೆ ಬರುವುದಾದರೆ, ಆನ್ ಲೈನ್ನಲ್ಲಿ ನೀವು ಪ್ರೀಮಿಯಂ ಪಾವತಿಸಲು ಅವಕಾಶವಿದೆ. ನೀವು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ಗೆ ಈ ಬಗ್ಗೆ ತಿಳಿಸಿ ಸ್ವಯಂ ಚಾಲಿತ ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಬಹುದಾಗಿದೆ. ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಖಾತೆ ಮುಚ್ಚಲು ಮೂಲ ಬ್ರಾಂಚ್ಗೆ ಹೋಗಬೇಕೆಂದಿಲ್ಲ. ಯಾವ ಅಂಚೆ ಕಚೇರಿಯಲ್ಲಾದರೂ ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಖಾತೆ ಮುಚ್ಚಬಹುದು.