ಲೈಫ್‌ಸ್ಟೈಲ್

ನಿಮ್ಮ ಮನಸ್ಸು ಚಾಕುವಿನಂತೆ ಹರಿತವಾಗಿರಬೇಕಾ? ಹಾಗಿದ್ದರೆ ಇವುಗಳಿಂದ ದೂರವಿರಿ ಸಾಕು| Health tips

Health tips : ಮನಸ್ಸು ಗಟ್ಟಿಯಾಗಲು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬೇಕು. ಹಾಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮಗಳ ಮೊದಲ ಕರ್ತವ್ಯವಾಗಿದೆ. ಧ್ಯಾನ, ಯೋಗಾಸನ, ಪ್ರಾಣಾಯಾಮ, ಪಾಸಿಟಿವಿಟಿ ವಾಕಿಂಗ್ ಎಲ್ಲವೂ ಕೂಡ ಮನಸ್ಸನ್ನು ಕೇಂದ್ರೀಕರಿಸಲು ಸರಿಯಾದ ಫಲಿತಾಂಶ ಕೊಡುತ್ತವೆ. ಮನಸ್ಸು ಎಲ್ಲರಿಗೂ ಒಂದೇ ತರಹ ಇರುವುದಿಲ್ಲ. ಕೆಲವರ ವಿರುದ್ಧ ನಾವು ಎಷ್ಟೇ ಮಾತನಾಡಿದರೂ ಸಹ ಅವರು ಏನನ್ನೂ ಮಾತನಾಡುವುದಿಲ್ಲ. ಆದರೆ ಇನ್ನೂ ಹಲವರಿಗೆ ನಾವು ಸಣ್ಣದಾಗಿ ಏನನ್ನಾದರೂ ಹೇಳಿದರೆ ಸಾಕು ಅವರು, ಆ ವಿಚಾರವನ್ನು ಮನಸ್ಸಿಗೆ ತೆಗೆದುಕೊಂಡು ಬಿಡುತ್ತಾರೆ.

ಇನ್ನೂ ಮೆದುಳು ಮಾನವ ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ಇದು ನಮ್ಮ ಚಿಂತನೆ, ಭಾವನೆಗಳು, ಆಲೋಚನೆಗಳ ಜೊತೆಗೆ ನಿರ್ಧಾರಗಳನ್ನು ನಿಯಂತ್ರಿಸುತ್ತದೆ. ಇದು ದೇಹದ ಎಲ್ಲಾ ಅರಿವಿನ ಇಂದ್ರಿಯಗಳ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯಕರ ಮೆದುಳು ಮಾನಸಿಕ ಸಮತೋಲನವನ್ನು ಸುಧಾರಿಸುವ ಜೊತೆಗೆ ನಮ್ಮ ಯೋಚನಶಾಕ್ತಿಯನ್ನು ಚುರುಕಾಗಿರಿಸುತ್ತದೆ. ಹಾಗಾಗಿ ನಮ್ಮ ಮೆದುಳಿನ ಮೂಲಕ ನಮ್ಮ ಮನಸ್ಸನ್ನು ಹೇಗೆ ಚುರುಕಾಗಿಸುವುದು ಎಂಬುದನ್ನು ತಿಳಿಯೋಣ.

ಅನಾರೋಗ್ಯಕರ ಆಹಾರ: ಸಕ್ಕರೆ, ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್‌ಗಳು ಮನಸ್ಸಿನ ಆರೋಗ್ಯವನ್ನು ಹಾನಿಗೊಳಿಸುತ್ತವೆ. ಬದಲಿಗೆ ಹಣ್ಣುಗಳು, ತರಕಾರಿಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿರುವ ಆಹಾರವನ್ನು ಸೇವಿಸಿ. ಇವು ನಿಮ್ಮ ಮನಸ್ಸಿನ ಆರೋಗ್ಯವನ್ನು ಸುಧಾರಿಸುತ್ತವೆ.

ಅತಿಯಾದ ತಂತ್ರಜ್ಞಾನದ ಬಳಕೆ: ಮೊಬೈಲ್, ಸಾಮಾಜಿಕ ಮಾಧ್ಯಮ ಅಥವಾ ಟಿವಿಯ ಅತಿಯಾದ ಬಳಕೆ ಗಮನವನ್ನು ಹಾಳು ಮಾಡುತ್ತದೆ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಡಿಜಿಟಲ್ ಉಪಕರಣಗಳ​ ಬಳಕೆ ಮಾಡಿ.

ಮದ್ಯಪಾನ ಮತ್ತು ಧೂಮಪಾನ: ಇವು ಮೆದುಳಿನ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಇವುಗಳಿಂದ ದೂರವಿರಿ.

ವ್ಯಾಯಾಮದ ಕೊರತೆ: ದೈಹಿಕ ಚಟುವಟಿಕೆಯ ಕೊರತೆಯಿಂದ ರಕ್ತಪರಿಚಲನೆ ಕಡಿಮೆಯಾಗಿ ಮನಸ್ಸಿನ ಚಾಕಚಕ್ಯತೆ ಕಡಿಮೆಯಾಗುತ್ತದೆ. ಹಾಗಾಗಿ ದಿನನಿತ್ಯ ನಿಯಮಿತ ವ್ಯಾಯಾಮ ಮಾಡಿ.

ನಕಾರಾತ್ಮಕ ಚಿಂತನೆ: ಸತತ ನಕಾರಾತ್ಮಕ ಆಲೋಚನೆಗಳು ಮನಸ್ಸಿನ ಸ್ಪಷ್ಟತೆಯನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಯಾವಾಗಲೂ ಧನಾತ್ಮಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ.

ಅತಿಯಾದ ಒತ್ತಡ: ದೀರ್ಘಕಾಲೀನ ಒತ್ತಡವು ಮನಸ್ಸಿನ ಗಮನವನ್ನು ಕಡಿಮೆ ಮಾಡುತ್ತದೆ. ಧ್ಯಾನ, ಯೋಗ ಅಥವಾ ವಿಶ್ರಾಂತಿಯಿಂದ ಒತ್ತಡವನ್ನು ನಿಯಂತ್ರಿಸಿ.

ಕಳಪೆ ನಿದ್ರೆ: ಸಾಕಷ್ಟು ನಿದ್ರೆಯ ಕೊರತೆಯಿಂದ ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಪ್ರತಿದಿನ 7 ರಿಂದ 8 ಗಂಟೆ ಗುಣಮಟ್ಟದ ನಿದ್ರೆ ಪಡೆಯಿರಿ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)