ಸಾಂದರ್ಭಿಕ ಚಿತ್ರ  
ಲೈಫ್‌ಸ್ಟೈಲ್

ಹಲ್ಲುಗಳಿಂದ ಬಾಟಲಿ ಕ್ಯಾಪ್​ ಓಪನ್ ಮಾಡ್ತೀರಾ? ಇದೆಷ್ಟು ಡೇಂಜರೆಸ್ ಅಂತ​ ಗೊತ್ತಿದ್ಯಾ? ಇಲ್ಲಿದೆ ಮಾಹಿತಿ

ಪ್ರಮುಖ ಮುಖ್ಯಾಂಶಗಳು

  • ಬಿಯರ್​, ಕೂಲ್​ ಡ್ರಿಂಕ್​ ಬಾಟಲಿಗಳನ್ನು ಹಲ್ಲಿನಿಂದ ಕಿತ್ತು ಹಾಕಿದ್ರೆ ಜೋಕೇ!
  • ಹಲ್ಲುಗಳಿಗೆ ಡ್ಯಾಮೇಜ್​ ಆದ್ರೆ ಮುಂದೆ ಹಲ್ಲುಗಳೇ ಇರುವುದಿಲ್ಲ
Teeth: ಸಾಮಾನ್ಯವಾಗಿ ಪಾರ್ಟಿಗಳಲ್ಲಿ ಬಿಯರ್​ ಬಾಟಲಿ ಅಥವಾ ಕೂಲ್​ ಡ್ರಿಂಕ್​​ ಬಾಟಲಿಗಳನ್ನು​ ತಮ್ಮ ಹಲ್ಲುಗಳಿಂದ ಕಿತ್ತು ಬಿಸಾಡುವ ಅದೆಷ್ಟೋ ಮಂದಿ, ನೋಡಪ್ಪ ನನ್ನ ಹಲ್ಲು ಎಷ್ಟು ಗಟ್ಟಿಯಿದೆ ಎಂದು ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಇದು ಸಖತ್​ ಕೂಲ್​ ಮತ್ತು ಸುಲಭ ಅನಿಸಿದರೂ ಮುಂದಿನ ದಿನಗಳಲ್ಲಿ ನಿಮ್ಮ ಬಾಯಿಯಲ್ಲಿ ಹಲ್ಲುಗಳೇ ಉಳಿಯದಂತೆ ಮಾಡಿಕೊಳ್ಳುವ ಮುನ್ಸೂಚನೆ ಇದು ಎಂಬುದರಲ್ಲಿ ಯಾವುದೇ ಅನುಮಾನ ಬೇಡ.
ಪ್ರಯಾಣದ ನೆಪದಲ್ಲಿ ಹೊರಗಡೆ ಹೋದಾಗ ಕೂಲ್ ಡ್ರಿಂಕ್ ಅಥವಾ ಮದ್ಯದ ಬಾಟಲಿಗಳನ್ನು ಓಪನ್​ ಮಾಡಲು ಓಪನರ್ ಸಿಗದಿದ್ದಾಗ, ಅನೇಕರು ಮಾಡುವ ಮೊದಲ ಕೆಲಸವೇ ಬಾಟಲಿಯ ಮುಚ್ಚಳವನ್ನು ಹಲ್ಲುಗಳಿಂದ ಕಚ್ಚಿ, ಕಿತ್ತು ಬಿಸಾಡುವುದು. ಆ ಸಮಯದಲ್ಲಿ ನಿಮಗೆ ನೋವು ಅಥವಾ ರಕ್ತಸ್ರಾವ ಆಗದಿದ್ದರೂ ಭವಿಷ್ಯದಲ್ಲಿ ಒಂದೊಂದೇ ಸಮಸ್ಯೆಗಳು ಕಾಡಲಾರಂಭಿಸುತ್ತೆ ಅನ್ನೋದು ಖಚಿತ. ಇದಕ್ಕೆ ದಂತವೈದ್ಯರು ಕೊಡುವ ಉತ್ತರ ಹೀಗಿದೆ ನೋಡಿ.
ಭಗವಂತ ಹಲ್ಲುಗಳನ್ನು ಆಹಾರವನ್ನು ಜಗಿದು ತಿನ್ನಲು ಮಾತ್ರ ಕೊಟ್ಟಿರುವುದೇ ಹೊರತು ಬಾಟಲಿಗಳನ್ನು ಓಪನ್​ ಮಾಡಲಿ ಅಂತಲ್ಲ. ಮುಚ್ಚಳಗಳನ್ನು ಹಲ್ಲುಗಳಿಂದ ಕೀಳುವುದರಿಂದ ದೊಡ್ಡ ಡ್ಯಾಮೇಜ್​ ಆಗುತ್ತವೆ. ಅಸಲಿಗೆ, ಮಾನವನ ಹಲ್ಲು ಗಟ್ಟಿಯಾದ ಪ್ಲಾಸ್ಟಿಕ್‌ ಅಥವಾ ಸ್ಟೀಲ್​ ಪದರಗಳಿಂದ ಮಾಡಿದ ಬಾಟಲಿ ಮುಚ್ಚಳಗಳನ್ನು ತಗೆಯುಷ್ಟು ಬಲವಾಗಿರುವುದಿಲ್ಲ. ಹೀಗೆ ಮಾಡುವುದರಿಂದ ಹಲ್ಲಿನ ಪದರ, ಬೇರು ಹಾನಿಗೆ ಒಳಗಾಗುತ್ತೆ.

ಏನೆಲ್ಲ ಸಮಸ್ಯೆ?

ಹಲವು ಬಾರಿ, ಬಾಟಲಿಯನ್ನು ತೆರೆಯುವಾಗ ಹಲ್ಲುಗಳ ಅಂಚುಗಳು ಚಿಪ್ ಆಗುತ್ತವೆ. ಕೆಲವೊಮ್ಮೆ, ಬಿರುಕುಗಳು ಹಲ್ಲಿನ ಒಳಭಾಗದವರೆಗೆ ತಲುಪಿ, ದಂತಗಳ ಒಳಗಿನ ಬೇರುಗಳಿಗೆ ಹಾನಿ ಉಂಟು ಮಾಡುತ್ತದೆ. ಇದು ವಿಪರೀತ ನೋವಿಗೂ ಕಾರಣವಾಗಬಹುದು.

ದಂತಕವಚ ಪದರ ಡ್ಯಾಮೇಜ್​

ಲೋಹದ ಮುಚ್ಚಳಗಳು ಹಲ್ಲಿನ ಮೇಲಿರುವ ರಕ್ಷಣಾತ್ಮಕ ಪದರವಾದ ದಂತಕವಚಕ್ಕೆ ಪೆಟ್ಟು ನೀಡುತ್ತವೆ. ಒಮ್ಮೆ ಕವಚ ಹೋದರೆ, ಅದನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಇದು ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಗಾಳಿಗೆ ಒಡ್ಡಿಕೊಂಡಾಗ ಅಥವಾ ಶೀತ, ಬಿಸಿ ಆಹಾರವನ್ನು ತಿಂದಾಗ ತಡೆದುಕೊಳ್ಳಲು ಕಷ್ಟವಾಗುತ್ತದೆ.

ಒಸಡಿನಲ್ಲಿ ಗಾಯ

ಕೆಲವೊಮ್ಮೆ, ನಿಮ್ಮ ಹಲ್ಲುಗಳಿಂದ ಬಾಟಲಿ ಮುಚ್ಚಳಗಳನ್ನು ತೆಗೆದುಹಾಕುವಾಗ, ನಿಮ್ಮ ಕೈ ಜಾರಿಹೋಗುತ್ತದೆ ಮತ್ತು ಚೂಪಾದ ಮುಚ್ಚಳಗಳು ನಿಮ್ಮ ಒಸಡುಗಳನ್ನು ಚುಚ್ಚುತ್ತವೆ. ಇದು ಒಸಡುಗಳಲ್ಲಿ ರಕ್ತಸ್ರಾವ ಮತ್ತು ಗಂಭೀರ ನೋವು ಕೊಡುವ ಸೋಂಕುಗಳಿಗೆ ಕಾರಣವಾಗಬಹುದು.

ಬೇರಿಗೆ ಹಾನಿ

ಹಲ್ಲಿನ ಒಳಗಿನ ತಿರುಳು (ನರಗಳು) ಹಾನಿಗೊಂಡರೆ, ಅದು ತಡೆದುಕೊಳ್ಳಲಾಗದ ನೋವನ್ನು ಉಂಟುಮಾಡಬಹುದು. ನಂತರ ನೀವು ವೈದ್ಯರ ಬಳಿ ಹೋಗಿ ರೂಟ್​ ಕೆನಾಲ್​ ಚಿಕಿತ್ಸೆ ಪಡೆಯಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅನಿವಾರ್ಯ ಎದುರಾಗುತ್ತದೆ. ಹಾನಿ ಇನ್ನೂ ಹೆಚ್ಚಾಗಿದ್ದರೆ, ಹಲ್ಲನ್ನು ಸಂಪೂರ್ಣವಾಗಿ ಬುಡ ಸಮೇತ ತೆಗೆದು, ಕೃತಕ ಹಲ್ಲು ಅಳವಡಿಸುವ ಸಾಧ್ಯತೆಗಳು ಹೆಚ್ಚು,(ಏಜೆನ್ಸೀಸ್).

ನಿಮ್ಮ ಗಮನಕ್ಕೆ: ನಿಮ್ಮ ಕುಟುಂಬದಲ್ಲಿ ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆ ಅಥವಾ ಹೃದಯ ಸಮಸ್ಯೆಗಳ ಇತಿಹಾಸವಿದ್ದರೆ, ಸರಿಯಾದ ಆಹಾರ ಮಾರ್ಗಸೂಚಿಗಳು ಮತ್ತು ಚಿಕಿತ್ಸೆಗಾಗಿ ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸುವುದು ಕಡ್ಡಾಯ ಹಾಗೂ ಉತ್ತಮ.