ಏಕಾಂಗಿತನವನ್ನು ಪ್ರೀತಿಸುವುದು AI image WEB
ಲೈಫ್‌ಸ್ಟೈಲ್

ನೀವು ಕೂಡ ಏಕಾಂತವಾಗಿರುವುದನ್ನು ಪ್ರೀತಿಸುತ್ತೀರಾ? ಇದರ ಹಿಂದೆ ಇರುವ ಸತ್ಯ ಗೊತ್ತಾ? ಅಂತರ್ಮುಖಿಗಳ ಅಚ್ಚರಿ ಲೋಕ...Loneliness

ಕೆಲವರಿಗೆ ಜನರ ನಡುವೆ ಇರುವುದಕ್ಕಿಂತ ಒಂಟಿಯಾಗಿ ಸಮಯ ಕಳೆಯುವುದೇ ಹೆಚ್ಚು ಇಷ್ಟ. ಸ್ನೇಹಿತರೊಂದಿಗೆ ಮಾತನಾಡುವುದಕ್ಕಿಂತ ಪುಸ್ತಕ ಓದುವುದು, ಹಾಡು ಕೇಳುವುದು ಅಥವಾ ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾರೆ. ಹಾಗಾದರೆ ಒಂಟಿಯಾಗಿರಲು ಇಷ್ಟಪಡುವವರು ನಿಜವಾಗಿಯೂ ಸಂತೋಷವಾಗಿರುತ್ತಾರೆಯೇ? ಅಥವಾ ಅವರ ಮೌನದ ಹಿಂದೆ ಬೇರೆ ಭಾವನೆಗಳಿವೆಯೇ?ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.Loneliness

loneliness: ಕೆಲವರಿಗೆ ಜನರ ನಡುವೆ ಇರುವುದಕ್ಕಿಂತ ಒಂಟಿಯಾಗಿ ಸಮಯ ಕಳೆಯುವುದೇ ಹೆಚ್ಚು ಇಷ್ಟ. ಸ್ನೇಹಿತರೊಂದಿಗೆ ಮಾತನಾಡುವುದಕ್ಕಿಂತ ಪುಸ್ತಕ ಓದುವುದು, ಹಾಡು ಕೇಳುವುದು ಅಥವಾ ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾರೆ. ಹಾಗಾದರೆ ಒಂಟಿಯಾಗಿರಲು ಇಷ್ಟಪಡುವವರು ನಿಜವಾಗಿಯೂ ಸಂತೋಷವಾಗಿರುತ್ತಾರೆಯೇ? ಅಥವಾ ಅವರ ಮೌನದ ಹಿಂದೆ ಬೇರೆ ಭಾವನೆಗಳಿವೆಯೇ?ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ.

ಕೆಲವರು ಬಿಡುವಿನ ಸಮಯ ಸಿಕ್ಕರೆ ಸ್ನೇಹಿತರನ್ನು ಭೇಟಿಯಾಗಲು, ಹೊರಗೆ ಸುತ್ತಾಡಲು ಅಥವಾ ಕುಟುಂಬದವರೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರು ಯಾರೊಂದಿಗೂ ಮಾತನಾಡದೆ ತಮ್ಮಷ್ಟಕ್ಕೆ ತಾವೇ ಸಮಯ ಕಳೆಯಲು ಬಯಸುತ್ತಾರೆ. ಒಂಟಿಯಾಗಿ ಕುಳಿತುಕೊಳ್ಳುವುದು, ಇಷ್ಟದ ಹಾಡು ಕೇಳುವುದು, ಪುಸ್ತಕ ಓದುವುದು ಅಥವಾ ತಮ್ಮ ಆಲೋಚನೆಗಳಲ್ಲಿ ಮುಳುಗಿರುವುದು ಅವರಿಗೆ ಸಂತೋಷ ನೀಡುತ್ತದೆ. ಇಂತಹವರನ್ನು ಕೆಲವರು ಮೌನ ಸ್ವಭಾವದವರು ಅಥವಾ ಹೆಚ್ಚು ಬೆರೆಯದವರು ಎಂದು ಭಾವಿಸುತ್ತಾರೆ. ಆದರೆ ಒಂಟಿಯಾಗಿರಲು ಇಷ್ಟಪಡುವುದೆಂದರೆ ಅವರು ದುಃಖದಲ್ಲಿದ್ದಾರೆ ಎಂದು ನಾವು ತಿಳಿದುಕೊಳ್ಳುವುದು ಸರಿಯಲ್ಲ.

ಒಂಟಿತನ ಮತ್ತು ಏಕಾಂತದ ನಡುವೆ ವ್ಯತ್ಯಾಸವಿದೆ

ಒಂಟಿಯಾಗಿರುವುದು ಮತ್ತು ಒಂಟಿತನ ಅನುಭವಿಸುವುದು ಎರಡೂ ಒಂದೇ ಅಲ್ಲ. ಏಕಾಂತ ಎಂದರೆ ವ್ಯಕ್ತಿಯೊಬ್ಬರು ತಮ್ಮ ಇಚ್ಛೆಯಿಂದ ಸ್ವಲ್ಪ ಸಮಯವನ್ನು ತಮ್ಮಷ್ಟಕ್ಕೆ ತಾವೇ ಕಳೆಯುವುದು. ಇದು ಮನಸ್ಸಿಗೆ ವಿಶ್ರಾಂತಿ ನೀಡಬಹುದು. ಆದರೆ ಒಂಟಿತನ ಎಂದರೆ ಜನರ ನಡುವೆ ಇದ್ದರೂ ಯಾರೂ ನಮ್ಮನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಅಥವಾ ನಮ್ಮೊಂದಿಗೆ ಯಾರೂ ಇಲ್ಲ ಎಂಬ ಭಾವನೆ ಮೂಡುವುದು.ಒಬ್ಬ ವ್ಯಕ್ತಿ ಒಬ್ಬರೇ ಇದ್ದರೂ ಸಂತೋಷವಾಗಿರಬಹುದು. ಅದೇ ರೀತಿ ಸ್ನೇಹಿತರು, ಕುಟುಂಬದವರು ಸುತ್ತಲಿದ್ದರೂ ಒಂಟಿತನ ಅನುಭವಿಸಬಹುದು. ಹೀಗಾಗಿ ಸುತ್ತಲಿರುವ ಜನರ ಸಂಖ್ಯೆಯೇ ಸಂತೋಷವನ್ನು ನಿರ್ಧರಿಸುವುದಿಲ್ಲ.

ಇದನ್ನೂ ಓದಿ : ಮೆದುಳಿನ ಯಾವ ಭಾಗ ನಿಜಕ್ಕೂ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ? ಮಾನವನ ಅರಿವಿನ ಹಿಂದಿನ ರಹಸ್ಯ ಬಯಲು! Brain science

ತಮ್ಮೊಂದಿಗೆ ಸಮಯ ಕಳೆಯುವುದರಿಂದ ಸಿಗುವ ನೆಮ್ಮದಿ

ಕೆಲವರಿಗೆ ನಿರಂತರ ಮಾತುಕತೆ, ಜನರ ಗದ್ದಲ ಮತ್ತು ಸಾಮಾಜಿಕ ಚಟುವಟಿಕೆಗಳು ಆಯಾಸ ಉಂಟುಮಾಡಬಹುದು. ಇಂತಹವರು ಸ್ವಲ್ಪ ಸಮಯ ಒಂಟಿಯಾಗಿದ್ದಾಗ ಮನಸ್ಸು ಹಗುರವಾದಂತೆ ಅನುಭವಿಸುತ್ತಾರೆ. ತಮ್ಮ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು, ದಿನದ ಘಟನೆಗಳನ್ನು ನೆನಪಿಸಿಕೊಳ್ಳಲು ಹಾಗೂ ಮುಂದಿನ ಕೆಲಸಗಳ ಬಗ್ಗೆ ಯೋಚಿಸಲು ಏಕಾಂತ ಸಹಾಯ ಮಾಡಬಹುದು.

ಮನೋವಿಜ್ಞಾನದಲ್ಲಿ ಅಂತರ್ಮುಖ ಸ್ವಭಾವದವರು ತಮ್ಮ ಆಂತರಿಕ ಆಲೋಚನೆಗಳು ಮತ್ತು ಶಾಂತ ವಾತಾವರಣದಲ್ಲಿ ಹೆಚ್ಚು ಆರಾಮ ಅನುಭವಿಸಬಹುದು ಎಂದು ವಿವರಿಸಲಾಗುತ್ತದೆ. ಆದರೆ ಎಲ್ಲ ಅಂತರ್ಮುಖಿಗಳೂ ಒಂದೇ ರೀತಿ ಆಗಿರುವುದಿಲ್ಲಾ ಅವರ ಆಸಕ್ತಿ, ಭಾವನೆ ಮತ್ತು ಸಾಮಾಜಿಕ ಸಂಬಂಧಗಳ ಅಗತ್ಯವೂ ವಿಭಿನ್ನವಾಗಿರುತ್ತದೆ.

ಒಂಟಿಯಾಗಿರುವಾಗ ಸೃಜನಶೀಲತೆ ಹೆಚ್ಚಾಗುತ್ತದೆಯೇ?

ಕೆಲವು ಸಂದರ್ಭಗಳಲ್ಲಿ ಏಕಾಂತವು ಹೊಸ ಆಲೋಚನೆಗಳಿಗೆ ಅವಕಾಶ ನೀಡುತ್ತದೆ. ಸುತ್ತಲಿನ ಗದ್ದಲ ಇಲ್ಲದಿರುವಾಗ ಓದುವುದು, ಬರೆಯುವುದು, ಚಿತ್ರ ಬಿಡಿಸುವುದು ಅಥವಾ ಹೊಸ ವಿಷಯಗಳನ್ನು ಕಲಿಯುವುದರ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ. ತಮ್ಮ ಆಸಕ್ತಿಗಳಿಗೆ ಸಮಯ ನೀಡುವುದರಿಂದ ಆತ್ಮವಿಶ್ವಾಸ ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವೂ ಬೆಳೆಯಬಹುದು.

ಇದನ್ನೂ ಓದಿ : ಬಾವಲಿಗಳ ಕಣ್ಣಿಗೆ ಮಣ್ಣೆರೆಚಲು ಪತಂಗಗಳು ಜನನಾಂಗದಿಂದ ವಿಚಿತ್ರ ಸೌಂಡ್ ಮಾಡುತ್ತವೆ ಅಂದ್ರೆ ನಂಬ್ತೀರಾ ? ಇಲ್ಲಿದೆ ಅಚ್ಚರಿ ಸಂಗತಿ...Moths

ಒಂಟಿಯಾಗಿರಲು ಇಷ್ಟಪಡುವುದು ಸಹಜವಾದರೂ, ಕ್ರಮೇಣ ಎಲ್ಲರಿಂದಲೂ ದೂರವಾಗುವುದು ಗಮನಿಸಬೇಕಾದ ಸಂಗತಿ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡುವ ಆಸಕ್ತಿ ಕಡಿಮೆಯಾಗುವುದು, ಸದಾ ದುಃಖವಾಗಿರುವುದು, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವಷ್ಟು ಪ್ರತ್ಯೇಕವಾಗಿರುವುದು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಇಂತಹ ಬದಲಾವಣೆಗಳು ದೀರ್ಘಕಾಲ ಮುಂದುವರಿದರೆ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಉತ್ತಮ.

ಸಂತೋಷವಾಗಿರಲು ಯಾವಾಗಲೂ ಜನರ ಜತೆಯೆ ಇರಬೇಕು ಅಂತಲ್ಲಾ

ಕೆಲವರಿಗೆ ದೊಡ್ಡ ಸ್ನೇಹಿತರ ಬಳಗವೇ ಸಂತೋಷ ನೀಡಬಹುದು. ಇನ್ನು ಕೆಲವರಿಗೆ ಒಬ್ಬರು ಅಥವಾ ಇಬ್ಬರು ಆತ್ಮೀಯರೊಂದಿಗೆ ಸಮಯ ಕಳೆಯುವುದೇ ಸಾಕಾಗಬಹುದು. ಮತ್ತೂ ಕೆಲವರಿಗೆ ತಮ್ಮಷ್ಟಕ್ಕೆ ತಾವೇ ಇರುವುದರಲ್ಲಿ ನೆಮ್ಮದಿ ಸಿಗಬಹುದು. ಮುಖ್ಯವಾಗಿ, ಒಂಟಿಯಾಗಿರುವ ಸಮಯ ನಮಗೆ ಸಂತೋಷ ಮತ್ತು ಶಾಂತಿ ನೀಡುತ್ತಿದೆಯೇ ಅಥವಾ ನೋವು ಮತ್ತು ನಿರಾಶೆ ಉಂಟುಮಾಡುತ್ತಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಏಕಾಂತವನ್ನು ಪ್ರೀತಿಸುವುದು ತಪ್ಪಲ್ಲ ಆದರೆ ಅಗತ್ಯವಿದ್ದಾಗ ಆತ್ಮೀಯರೊಂದಿಗೆ ಬೆರೆಯುವುದೂ ಅಷ್ಟೇ ಮುಖ್ಯ. ಏಕಾಂತವಾಗಿರುವು ಹೆಚ್ಚಾಗಿ ಮುಂದುವರೆದರೆ ಮಾನಸಿಕವಾಗಿ ಬಳಲುವ ಸಾಧ್ಯತೆಯೂ ಕೂಡಾ ಹೆಚ್ಚಾಗಬಹುದು ಇದರಿಂದ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸುವುದು ಹಾಗೂ ಅವರ ಸಲಹೆಯನ್ನು ಪಡೆಯುವುದು ಮುಖ್ಯ.