French fries: ಫ್ರೆಂಚ್ ಫ್ರೈಸ್ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಕೆಲವೊಂದು ತಿನಿಸು ಅಂಗಡಿಗಳಲ್ಲಿ ಬೇಗನೆ ನಿಮ್ಮ ಟೇಬಲ್ ಮೇಲೆ ಬರುವಂತಹ ಖಾದ್ಯ ಇದಾಗಿದೆ. ಇನ್ನು ಫ್ರೈ ಅನ್ನು ಆಲುಗಡ್ಡೆಯಿಂದ ತಯಾರಿಸಲಾಗಿರುತ್ತದೆ. ಈ ಖಾದ್ಯವನ್ನು ಅತೀ ಹೆಚ್ಚಾಗಿ ಸೇವಿಸುವುದರಿಂದ ಅನೇಕ ಕಾಯಿಲೆಗಳು ಸೇರಿದಂತೆ ಮಧುಮೇಹಕ್ಕೂ ತುತ್ತಾಗುವ ಅಪಾಯ ಜಾಸ್ತಿ ಇದೆ. ವಾರಕ್ಕೆ 2 ಬಾರಿಗಿಂತಲೂ ಹೆಚ್ಚು ತಿನ್ನುವುದರಿಂದ ಮಧುಮೇಹ-2 ಬರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ನಿರ್ಜನ ಪ್ರದೇಶದಲ್ಲಿ ವಿಶೇಷ ಚೇತನ ಯುವತಿಯನ್ನು ಬೆನ್ನಟ್ಟಿ, ಅತ್ಯಾಚಾರ ಎಸಗಿದ ಪಾಪಿಗಳು ! ದೃಶ್ಯ ಸಿಸಿಟಿಯಲ್ಲಿ ಸೆರೆ | woman
ಪ್ರತಿಯೊಬ್ಬರು ಇಷ್ಟ ಪಡುವಂತಹ ಫ್ರೆಂಚ್ ಫ್ರೈ ತಿನ್ನುವುದರ ಬಗ್ಗೆ ಹೊಸ ಅಧ್ಯಾಯನಗಳು ಮಾಡಲ್ಪಟ್ಟಿವೆ. ಇನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ತನ್ನ ಸಂಶೋಧನೆಯಲ್ಲಿ ಬೇಯಿಸಿದ ಅಥವಾ ಕರಿದ ಆಲುಗಡ್ಡೆಯನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಧೃಢಪಡಿಸಿದೆ. ಇನ್ನು ಹಾರ್ವರ್ಡ್ ಹಾಗೂ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಕಾರ 40 ವರ್ಷ ಮೇಲ್ಪಟ್ಟ 2 ಲಕ್ಷ ಜನರನ್ನು ಸಂಪರ್ಕಿಸಿ ಡೇಟಾ ಸಂಸ್ಕರಣೆ ಮಾಡಿದ್ದು, ಅದರಲ್ಲಿ 22,300 ಜನರು ಹೃದ್ರೋಗ, ಕ್ಯಾನ್ಸರ್ ಮಧುಮೇಹ ಹೊಂದಿರುವವರು 40 ವರ್ಷ ಮೇಲ್ಪಟ್ಟವರೇ ಜಾಸ್ತಿ ಎಂದು ವರದಿ ತಿಳಿಸಿದೆ.
ಇನ್ನು ವರದಿಗಳನ್ನು ಗಮನಿಸಿದಾಗ ವಾರಕ್ಕೆ 2 ರಿಂದ ಹೆಚ್ಚು ಬಾರಿ ಫ್ರೆಂಚ್ ಫ್ರೈ ತಿನ್ನುವರಲ್ಲಿ ಮಧುಮೇಹ ಕಂಡುಬಂದಿದೆ. ಬೇಯಿಸಿದ ಆಲುಗಡ್ಡೆಯನ್ನು ಸೇವಿಸುವುದರಿಂದ ಮಧುಮೇಹ ಬರುವುದಿಲ್ಲ. ಆಲುಗಡ್ಡೆಯನ್ನು ಧಾನ್ಯದೊಂದಿಗೆ ಬೆರಸಿದಾಗ ಮಧುಮೇಹ ಬರುವ ಸಾಧ್ಯತೆಗಳಿಲ್ಲ. ಇನ್ನು ಅನ್ನದ ಜೊತೆ ಆಲುಗಡ್ಡೆಯನ್ನು ಸೇವಿಸುವುದರಿಂದ ಕಾಯಿಲೆ ಬರಬಹುದು. ಇದರಲ್ಲಿ ವಿಟಮಿನ್ ಸಿ, ಮೆಗ್ನೇಶಿಯಂ, ಫೈಬರ್ನಂತಹ ಖನಿಜಗಳು ಜಾಸ್ತಿ ಇರುತ್ತವೆ ಹಾಗಾಗಿ ಹೆಚ್ಚು ಪಿಷ್ಟವನ್ನು ಹೊಂದಿರುತ್ತದೆ ಇದರಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರಿಂದ ಫ್ರೆಂಚ್ ಫ್ರೈಗಳನ್ನು ಆದಷ್ಟು ಕಡಿಮೆ ತಿನ್ನುವುದನ್ನು ಪ್ರಯತ್ನಿಸಿ. (ಏಜೆನ್ಸೀಸ್)