ಲೈಫ್‌ಸ್ಟೈಲ್

ಅಧಿಕ ಜನರು ದುಃಖದ ಹಾಡುಗಳನ್ನೇ ಸದಾ ಕೇಳ್ತಾರೆ ಏಕೆ ಗೊತ್ತೇ?; ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿಯಿರಿ... | Sad Songs

Sad Songs: ಗಾಯನ(ಸಂಗೀತ) ಭಾವನೆಗೊಳೊಂದಿಗೆ ಆಳವಾದ ಸಂಪರ್ಕ ಹೊಂದಿದೆ. ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಕೆಲ ಹಾಡುಗಳು ಹಳೆಯದನ್ನು ಮರಕಳಿಸುವಂತೆ ಮಾಡಿದರೆ, ಇನ್ನು ಕೆಲ ಸಾಂಗ್ಸ್​ ನಮ್ಮ ಕಣ್ಣಲ್ಲಿ ಕೆಲವೊಮ್ಮೆ ನೀರನ್ನು ತರಿಸುತ್ತದೆ. ಕೆಲವು ಅಮೂಲ್ಯವಾದ ಜೀವನ ಪಾಠವನ್ನು ಕಲಿಸುತ್ತದೆ. ಆದ್ರೆ, ಇನ್ನು ಕೆಲ ಜನರು ಅಧಿಕವಾಗಿ ದುಖಕರವಾದ ಹಾಡುಗಳನ್ನೇ ಸದಾ ಕೇಳುತ್ತಾರೆ. ಅಲ್ಲದೆ, ಇದು ಏಕೆ ಎಂದುನ ಎಂದದಾರೂ ಯೋಚಿಸಿದ್ದೀರಾ?

ದುಖಿತ ಜನರು ಅಧಿಕವಾಗಿ ಇಂತಹ ಹಾಡುಗಳಿಗೆ ಆಕರ್ಷಿತರಾಗಿದ್ದಾರೆಯೇ? ಹೌದು, ಕೆಲವರು ದುಃಖದ ಸಂಗೀತವನ್ನು ಏಕೆ ಆನಂದಿಸುತ್ತಾರೆ ಎಂಬುದರ ಹಿಂದೆ ವೈಜ್ಞಾನಿಕ ವಿವರಣೆಯಿದೆ. ಆಶ್ಚರ್ಯಕರವೆಂದರೆ, ಕೇವಲ ದುಃಖದ ಹಾಡುಗಳು ಕೇವಲ ಖಿನ್ನತೆಗೆ ಒಳಗಾದವರಲ್ಲ. ಒಳ್ಳೆಯ ಮನಸ್ಥಿತಿಯಲ್ಲಿರುವವರು ಸಹ ಅವುಗಳನ್ನು ಹೆಚ್ಚಾಗಿ ಹುಡುಕುತ್ತಾರೆ ಏಕೆಂದರೆ ಈ ಹಾಡುಗಳು ನಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ವಾಸ್ತವಿಕತೆಯ ಅರ್ಥವನ್ನು ನೀಡಲು ಸಹಾಯ ಮಾಡುತ್ತವೆ ಎಂದು ಅಧ್ಯಯನ ಹೇಳಿದೆ.

ದುಃಖದ ಹಾಡುಗಳನ್ನು ಕೇಳುವುದರಿಂದ ಮನಸ್ಸನ್ನು ಶಾಂತಗೊಳಿಸಬಹುದು ಎಂದು ಹಲವಾರು ಅಧ್ಯಯನಗಳು ಹೇಳುತ್ತವೆ. ಸಂಗೀತವು ಮಾನಸಿಕ ಶಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ನಿಯಂತ್ರಿಸುತ್ತದೆ ಎಂದು ಸಾಬೀತಾಗಿದೆ. ಅಲ್ಲದೆ, ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ ಎಂದು ತಜ್ಞರು ಹೇಳುತ್ತಾರೆ.

ವೈಜ್ಞಾನಿಕ ಕಾರಣ ಏನು..?

ಜನರು ದುಃಖದ ಹಾಡುಗಳನ್ನು ಆನಂದಿಸಲು ಇನ್ನೊಂದು ಕಾರಣವೆಂದರೆ ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್. ಇದು ಪುರುಷರು ಮತ್ತು ಮಹಿಳೆಯರಲ್ಲಿ ಬಿಡುಗಡೆಯಾಗುತ್ತದೆ. ಪ್ರೊಲ್ಯಾಕ್ಟಿನ್ ಭಾವನಾತ್ಮಕ ನೋವನ್ನು ಕಡಿಮೆ ಮಾಡುತ್ತದೆ. ಜನರು ಅನುಭವಿಸಬಹುದಾದ ಒತ್ತಡ ಮತ್ತು ದುಃಖವನ್ನು ಕಡಿಮೆ ಮಾಡುತ್ತದೆ. ನೀವು ನಿರುತ್ಸಾಹಗೊಂಡಾಗ, ಪ್ರೊಲ್ಯಾಕ್ಟಿನ್ ಶಾಂತತೆಯ ಭಾವನೆಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ ಮತ್ತು ದುಃಖದ ಹಾಡುಗಳು ಅದರ ಬಿಡುಗಡೆಯನ್ನು ಪ್ರಚೋದಿಸುತ್ತವೆ. ಅಲ್ಲದೆ, ಮಾನಸಿಕ ಯಾತನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನದ ವರದಿ ಹೇಳುತ್ತಿದೆ.

ದುಃಖದ ಹಾಡುಗಳು ಹಳೆಯ ನೆನಪುಗಳನ್ನು ಸಹ ತರುತ್ತವೆ. ಅದು ನಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಆ ನೆನಪುಗಳು ಶಾಲೆ, ಕಾಲೇಜು, ಸಂಬಂಧಗಳು ಅಥವಾ ಜೀವನದ ಮೈಲಿಗಲ್ಲುಗಳಂತಹ ಅರ್ಥಪೂರ್ಣ ಕ್ಷಣಗಳಿಗೆ ಸಾಕ್ಷಿಯಾಗಿತ್ತದೆ.(ಏಜೆನ್ಸೀಸ್​)