ಬೆಂಗಳೂರು: ( winter ) ಚಳಿಗಾದಲ್ಲಿ ಶೀತ ವಾರಾವರಣವು ಸಾಮಾನ್ಯವಾಗಿದೆ. ಇದರಿಂದಾಗಿ ಸ್ನಾಯುಗಳ ಬಿಗಿತ ಹಾಗೂ ಕೀಲು ನೋವು ಉಂಟಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ದೇಹವು ಅಗತ್ಯವಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ನೋವು, ಊತ ಮತ್ತು ಆಯಾಸ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನಾವು ಇಂದು ನೀವು ಚಳಿಗಾದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು ಎನ್ನುವ ಕುರಿತಾಗಿ ನಾವು ಇಂದು ತಿಳಿಸಿಕೊಡಲಿದ್ದೇವೆ.
ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆಯಿರುವುದರಿಂದ ವಿಟಮಿನ್ ಡಿ ಕೊರತೆಯಾಗಿ ಮೂಳೆಗಳು ದುರ್ಬಲಗೊಳ್ಳಬಹುದು. ಮೂಳೆಗಳು ಬಲವಾಗಿರಲು ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಕೆ, ಮೆಗ್ನೀಸಿಯಂ ಮತ್ತು ಒಮೆಗಾ-3 ಸಮೃದ್ಧ ಆಹಾರಗಳನ್ನು ಸೇವಿಸಿ.
ಪಾಲಕ್, ಮೆಂತ್ಯ, ಸಾಸಿವೆ ಸೊಪ್ಪು ನಂತಹ ಹಸಿರು ತರಕಾರಿಗಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಕೆ ಯ ಉತ್ತಮ ಮೂಲಗಳಾಗಿವೆ. ಅವು ಮೂಳೆಯ ಬಲವನ್ನು ಹೆಚ್ಚಿಸುವುದಲ್ಲದೆ, ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಲು, ಮೊಸರು ಮತ್ತು ಪನೀರ್‌ನಂತಹ ಡೈರಿ ಉತ್ಪನ್ನಗಳು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಒದಗಿಸುವಲ್ಲಿ ಪ್ರಮುಖವಾಗಿವೆ. ಅವು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ಸೂರ್ಯನ ಬೆಳಕನ್ನು ಪಡೆಯಲು ಪ್ರತಿದಿನ ಸ್ವಲ್ಪ ಸಮಯದವರೆಗೆ ಹೊರಗೆ ನಡೆಯುವುದು ವಿಟಮಿನ್ ಡಿ ಉತ್ಪಾದಿಸಲು ಸಹಕಾರಿಯಾಗಿದೆ.
ಮೂಳೆಗಳು, ಕೀಲುಗಳು ಮತ್ತು ಕಾರ್ಟಿಲೆಜ್‌ಗಳ ಆರೋಗ್ಯಕ್ಕೆ ಕಾಲಜನ್ ಅತ್ಯಗತ್ಯ. ಚಳಿಗಾಲದಲ್ಲಿ ಆಮ್ಲಾವನ್ನು ಕಚ್ಚಾ ತಿನ್ನಬಹುದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವು ಅತ್ಯಗತ್ಯ. ಎಳ್ಳು, ಸೊಪ್ಪು, ಬೀಜಗಳು, ಡೈರಿ ಉತ್ಪನ್ನಗಳು ಮತ್ತು ಆಮ್ಲಾದಂತಹ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ನಿಮ್ಮ ದೇಹವು ಬಲವಾಗಿ ಮತ್ತು ಸಕ್ರಿಯವಾಗಿ ಇರುತ್ತದೆ.
ಕ್ಯಾಲ್ಸಿಯಂ ಮತ್ತು ಕಬ್ಬಿಣ ಹೆಚ್ಚು. ರಾಗಿ ಮುದ್ದೆ, ರಾಗಿ ದೋಸೆ ಅಥವಾ ಬಜ್ರಾ ರೊಟ್ಟಿ ಸೇವಿಸಿ.
ಬಾದಾಮಿ, ವಾಲ್‌ನಟ್ ಮತ್ತು ಅಗಸೆ ಬೀಜಗಳು ಮೆಗ್ನೀಸಿಯಂ ಮತ್ತು ಒಮೆಗಾ-3 ಇರುತ್ತವೆ. ಪ್ರತಿದಿನ ಒಂದು ಹಿಡಿ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮವಾಗಿದೆ.
ಮೀನು, ಮೊಟ್ಟೆಯ ಹಳದಿ ಭಾಗ ಮತ್ತು ಅಣಬೆಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಹೀಗಾಗಿ ಇವುಗಳನ್ನು ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ.
ಪಾಲಕ್ ಸೊಪ್ಪು, ಮೆಥಿ, ಸೊಪ್ಪು ಸಾರು, ಕಾಳುಗಳಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಮೆಗ್ನೀಸಿಯಂ ಹೇರಳವಾಗಿ ಇರುತ್ತವೆ. ಚಳಿಗಾಲದಲ್ಲಿ ಸಿಗುವ ಸೊಪ್ಪುಗಳನ್ನು ಸಾಂಬಾರ್ ಅಥವಾ ಪಲ್ಯದಲ್ಲಿ ಸೇರಿಸಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
ಗಮನಿಸಿ: ಸಾಧ್ಯವಾದರೆ ಬೆಳಗ್ಗೆ ಸೂರ್ಯನ ಬೆಳಕು ಪಡೆಯಿರಿ, ಒಳಾಂಗಣ ವ್ಯಾಯಾಮ ಮಾಡಿ ಮತ್ತು ಅಗತ್ಯವಿದ್ದರೆ ಡಾಕ್ಟರ್ ಸಲಹೆಯಂತೆ ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳಿ. ಈ ಆಹಾರಗಳು ಮೂಳೆಗಳನ್ನು ಬಲಪಡಿಸಿ, ಕೀಲು ನೋವು ಕಡಿಮೆ ಮಾಡುತ್ತವೆ.