ಲೈಫ್‌ಸ್ಟೈಲ್

ವೈಶಾಖ ಅಮಾವಾಸ್ಯೆಯ ಪೂಜಾ ವಿಧಿವಿಧಾನ, ಮಹತ್ವವೇನು ಗೊತ್ತಾ? Vaishakh Amavasya

Vaishakh Amavasya: ವೈಶಾಖ ಮಾಸವನ್ನು ಮಾಧವ ಮಾಸ ಎಂದೂ ಕರೆಯುತ್ತಾರೆ ಜೊತೆಗೆ ಇದು ವಿಷ್ಣುವಿನ ನೆಚ್ಚಿನ ಮಾಸವು ಹೌದು, ಹೀಗಾಗಿ ವೈಶಾಖ ಮಾಸದಲ್ಲಿ ಬರುವ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಈ ಅಮವಾಸ್ಯೆಯಂದು ಪೂರ್ವಜರ ಆತ್ಮಗಳಿಗೆ ಶಾಂತಿಗಾಗಿ ಪಿಂಡದಾನ, ತರ್ಪಣದ ಜೊತೆಗೆ ಸ್ನಾನ, ಧ್ಯಾನ ಮತ್ತು ದಾನಗಳು ಸಹ ವಿಶೇಷ ಮಹತ್ವವನ್ನು ಹೊಂದಿವೆ. ಹಾಗಾದ್ರೆ ವೈಶಾಖ ಅಮಾವಾಸ್ಯೆಯ ಶುಭ ಸಮಯ, ಪೂಜಾ ವಿಧಾನ ಮತ್ತು ಪರಿಹಾರದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ವೈಶಾಖ ಅಮಾವಾಸ್ಯೆಯ ಶುಭ ಮುಹೂರ್ತ

ವೈಶಾಖ ಅಮಾವಾಸ್ಯೆ ತಿಥಿಯು ಭಾನುವಾರ (ಏ. 27) ಮುಂಜಾನೆ 4.50 ಕ್ಕೆ ಪ್ರಾರಂಭವಾಗಲಿದ್ದು, ಅದೇ ದಿನ ಮಧ್ಯಾಹ್ನ 1.01ಕ್ಕೆ ಅಮವಾಸ್ಯೆಯ ತಿಥಿ ಮುಕ್ತಾಯಗೊಳ್ಳಲಿದೆ. ಈ ದಿನದಂದು ಸ್ನಾನ, ಧ್ಯಾನ, ದಾನ ಮತ್ತು ಪುಣ್ಯ ಕಾರ್ಯಗಳನ್ನು ಮಾಡುವುದರಿಂದ ಫಲ ಸಿಗುವುದರ ಜೊತೆಗೆ ವಿಷ್ಣುವನ್ನು ಪೂಜಿಸುವುದರಿಂದ ನಿಮಗೆ ಲಕ್ಷ್ಮಿ ನಾರಾಯಣನ ಆಶೀರ್ವಾದ ಕೂಡ ಸಿಗುತ್ತದೆ.

ವೈಶಾಖ ಅಮಾವಾಸ್ಯೆ ಪೂಜಾ ವಿಧಾನ

ವೈಶಾಖ ಅಮವಾಸ್ಯೆಯಂದು ಬೆಳಗ್ಗೆ ಗಂಗಾಜಲದ ಸ್ನಾನದ ನಂತರ ವಿಷ್ಣುವಿನ ಪೂಜೆ ಮಾಡಿ. ತುಪ್ಪದ ದೀಪ ಹಚ್ಚಿ. ಮನೆಯಲ್ಲಿ ವಿಷ್ಣುವಿನ ವಿಗ್ರಹವನ್ನು ಗಂಗಾ ನೀರಿನಿಂದ ಶುದ್ಧಗೊಳಿಸಿ, ಇದರ ನಂತರ ಹಳದಿ ಶ್ರೀಗಂಧ ಮತ್ತು ಅಕ್ಷತೆಯನ್ನು ಹಚ್ಚಿ. ಹಳದಿ ಹೂವುಗಳು ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ. ಪಂಚಮೇವ, ಪಂಚಾಮೃತ ಇತ್ಯಾದಿಗಳನ್ನು ನೈವೇದ್ಯಕ್ಕೆ. ಧೂಪ ಮತ್ತು ದೀಪವನ್ನು ಬೆಳಗಿ, ವಿಷ್ಣು ಸಹಸ್ರನಾಮ ಸ್ತೋತ್ರ ಅಥವಾ ವಿಷ್ಣು ಚಾಲೀಸಾ ಪಠಿಸಿ. ನಂತರ ವಿಷ್ಣುವಿಗೆ ಆರತಿಯನ್ನು ಮಾಡಿ ಪೂಜೆಯ ಸಮಯದಲ್ಲಿ ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿ.

ವೈಶಾಖ ಅಮವಾಸ್ಯೆಗೆ 5 ಪರಿಹಾರಗಳು

1. ವೈಶಾಖ ಅಮಾವಾಸ್ಯೆಯಂದು ಪಿತೃದೋಷ ಪರಿಹಾರಕ್ಕಾಗಿ ಶ್ರಾದ್ಧ ಮತ್ತು ತರ್ಪಣವನ್ನು ಮಾಡಬಹುದು. ಮಡಕೆ ಮತ್ತು ಪಿಂಡವನ್ನು ದಾನ ಮಾಡಬಹುದು.

2. ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ ದೀಪ ಹಚ್ಚಿ.

3. ಬಡವರಿಗೆ ಹಣ, ಆಹಾರ ಧಾನ್ಯಗಳು, ಸೌತೆಕಾಯಿ, ಹಣ್ಣುಗಳು, ಕಪ್ಪು ಎಳ್ಳು, ಪಾದರಕ್ಷೆಗಳು, ಕಪ್ಪು ಛತ್ರಿಗಳು, ಫ್ಯಾನ್‌ಗಳು ಇತ್ಯಾದಿಗಳನ್ನು ದಾನ         ಮಾಡಬಹುದು.

4. ಹನುಮಾನ್ ಚಾಲೀಸಾ, ಶನಿ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸಬಹುದು.

5. ವೈಶಾಖ ಅಮವಾಸ್ಯೆಯಂದು, ಮನೆಯಲ್ಲಿ ಲಕ್ಷ್ಮಿ ದೇವಿಯ ಮುಂದೆ ಲವಂಗವನ್ನು ಇಟ್ಟು ತುಪ್ಪದ ದೀಪವನ್ನು ಬೆಳಗಿಸಿ. (ಏಜೆನ್ಸೀಸ್​)