Monsoon: ಮಳೆಗಾಲದಲ್ಲಿ ಹವಾಮಾನವು ತಂಪಾಗಿರುತ್ತದೆ. ಮಳೆಗಾಲದಲ್ಲಿ ಮನೆಯಲ್ಲಿರುವಾಗ ಬಿಸಿಬಿಸಿಯಾಗಿರುವ ತಿಂಡಿ ಮಾಡಿಕೊಂಡು ತಿನ್ನುವುದು ನಮಗೆಲ್ಲರಿಗೂ ತುಂಬಾ ಖುಷಿ ನೀಡುವುದು. ಹೀಗಾಗಿ ಮಳೆಗಾಲದಲ್ಲಿ ಆಹಾರ ಸೇವನೆಯು ಹೆಚ್ಚು. ಹೀಗಿರುವಾಗ ಮಳೆಗಾಲದಲ್ಲಿ ತಣ್ಣೀರ ಅಥವಾ ಬಿಸಿನೀರು ಕುಡಿಯಬೇಕಾ? ಎನ್ನುವ ಗೊಂದಲ ನಿಮಗೆ ಇದ್ದರೆ ನಾವು ಈ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ.
ಗಾಳಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಮತ್ತು ಸೂಕ್ಷ್ಮಜೀವಿಗಳ ಹರಡುವಿಕೆಯಿಂದಾಗಿ, ಸೋಂಕುಗಳು, ಶೀತಗಳು ಮತ್ತು ಕೆಮ್ಮುಗಳಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಅವಧಿಯಲ್ಲಿ ಸೊಳ್ಳೆಗಳ ಸಂಖ್ಯೆಯೂ ಹೆಚ್ಚಿರುವುದರಿಂದ, ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗಗಳು ಬರುವ ಅಪಾಯವೂ ಹೆಚ್ಚಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ ಆರೋಗ್ಯಕ್ಕಾಗಿ ಕೆಲವು ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಮಳೆಗಾಲದಲ್ಲಿ ಬಿಸಿನೀರು ಕುಡಿಯುವುದು ಒಂದು ಸಣ್ಣ ಅಭ್ಯಾಸ, ಆದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಶೀತ, ಜೀರ್ಣಕಾರಿ ಸಮಸ್ಯೆಗಳು, ಚರ್ಮದ ಸಮಸ್ಯೆಗಳು ಮತ್ತು ಸೋಂಕುಗಳಿಗೆ ಪ್ರತಿರೋಧದಂತಹ ಅನೇಕ ವಿಷಯಗಳಿಗೆ ಇದು ಒಳ್ಳೆಯದು. ಆದ್ದರಿಂದ, ದಿನಕ್ಕೆ 3 ರಿಂದ 4 ಬಾರಿ ಬಿಸಿನೀರು ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು
ಮಳೆಗಾಲದಲ್ಲಿ ತಣ್ಣೀರಿನ ಬದಲು ಬಿಸಿನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತಜ್ಞರು ಹೇಳುವುದು ಇದನ್ನೇ. ಮಳೆಗಾಲದಲ್ಲಿ ಬಿಸಿನೀರು ಕುಡಿಯುವುದರಿಂದಾಗುವ ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಬಿಸಿನೀರು ಕುಡಿಯುವುದರಿಂದ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸಾಯುತ್ತವೆ. ಇದು ಗಂಟಲು ನೋವು ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಬಿಸಿನೀರು ಕುಡಿಯುವುದರಿಂದ ಕರುಳಿನಲ್ಲಿರುವ ಅನಿಲವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನೋವು ನಿವಾರಣೆಯಾಗುತ್ತದೆ
ಬಿಸಿನೀರು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವೈರಲ್ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಬಿಸಿ ನೀರು ಕುಡಿದರೆ ಕಫ ಕಡಿಮೆ ಮಾಡಬಹುದು ಮತ್ತು ವಾಯುನಾಳದಲ್ಲಿ ಉಸಿರುಕಟ್ಟುವಿಕೆ ಸಮಸ್ಯೆ ಕಡಿಮೆ ಮಾಡುವುದು.
ಊಟದ ಬಳಿಕ ತಣ್ಣೀರು ಕುಡಿದರೆ ಕರುಳಿನಲ್ಲಿ ಕೊಬ್ಬು ಶೇಖರಣೆ ಆಗುವುದು ಮತ್ತು ಇದರಿಂದ ಕರುಳಿನ ಕ್ಯಾನ್ಸರ್ ಬರಬಹುದು. ನೀವು ತಣ್ಣೀರಿನ ಬದಲು ಬಿಸಿ ಅಥವಾ ಉಗುರುಬೆಚ್ಚಗಿನ ನೀರು ಕುಡಿಯಿರಿ.