ಲೈಫ್‌ಸ್ಟೈಲ್

ಹಾಗಲಕಾಯಿ ಬೀಜದಿಂದ ಎಷ್ಟೆಲ್ಲಾ ಪ್ರಯೋಜನಗಳವೆ ಗೊತ್ತಾ? ಯಾರಿಗೂ ತಿಳಿಯದ ಅಚ್ಚರಿ ಸಂಗತಿಗಳು! | Bittergourd

Bittergourd : ಹಾಗಲಕಾಯಿ ಔಷಧೀ ಗುಣಗಳಿಂದ ಕೂಡಿದ ತರಕಾರಿಯಾಗಿದೆ. ಪ್ರಸ್ತುತ ದಿನಗಳಲ್ಲಿ ಈ ತರಕಾರಿಯನ್ನು ಹಲವಾರು ಜನರು ಹಸಿಯಾಗಿ ತಿನ್ನುವುದು, ಪಲ್ಯ, ಸಲಾಡ್​ ಇನ್ನಿತರ ರೂಪದಲ್ಲಿ ತಿನ್ನುತ್ತಾರೆ. ಮಧುಮೇಹಿಗಳು ಇದನ್ನು ಸೇವಿಸುವುದರಿಂದ ಮಧುಮೇಹ ಕಡಿಮೆ ಮಾಡಬಹುದಾಗಿದೆ. ಆದರೆ, ಇದರ ಬೀಜಗಳು ಸೇವಿಸುವುದರಿಂದ ನಂಬಲಾಗದ ಪರಿಣಾಮಗಳು ಎದುರಿಸಬೇಕಾಗುತ್ತದೆ ಎಂಬುದು ನಂಬಲು ಅಸಾಧ್ಯವಾಗಿದೆ. ಈ ಬೀಜಗಳನ್ನು ಸೇವಿಸುವುದರಿಂದ ಆಗುವಂತಹ ತೊಂದರೆಗಳೇನು ನೋಡೋಣ ಬನ್ನಿ..

* ಅಧಿಕ ಪೌಷ್ಟಿಕಾಂಶವನ್ನು ಹೊಂದಿದೆ

ಹಾಗಲಕಾಯಿ ಬೀಜಗಳ ಬಹಳ ಶಕ್ತಿಯುತವಾಗಿರುತ್ತವೆ. ಇವುಗಳಲ್ಲಿ ಫೈಬರ್, ಪ್ರೋಟೀನ್, ಐರನ್, ಮ್ಯಾಗ್ನೀಷಿಯಂ ಮತ್ತು ವಿಟಮಿನ್ ಸಿ ನಂತರ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಅತ್ಯಂತ ವಿಶೇಷವಾಗಿ ಇದರಲ್ಲಿ ಮೊಮೊರ್ಡಿಸಿನ್ ಎಂಬ ಕೆಫಲಿನ್ ರೂಪದ ಅಮೈನೊ ಆಸಿಡ್ ಇರುತ್ತದೆ. ಇದು ಇನ್ಸುಲಿನ್‌ನಂತೆ ಕೆಲಸ ಮಾಡಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಈ ತರಕಾರಿ ಡಯಾಬಿಟಿಸ್ ರೋಗಿಗಳಿಗೆ ಇದು ಸ್ವಾಭಾವಿಕ ಔಷಧವಾಗಿದೆ.

* ಊಹೆ ಮಾಡಲು ಸಾಧ್ಯವಿಲ್ಲದ ಸಂಗತಿಗಳು

ಹಾಗಲಕಾಯಿ ಬೀಜಗಳಲ್ಲಿ 'ಚಾರಂಟಿನ್' ಎಂಬ ಅಂಶವಿದ್ದು, ಇದು ನಮ್ಮ ದೇಹದಲ್ಲಾಗುವ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಸಂಶೋಧನೆಯೊಂದರಲ್ಲಿ ಈ ಬೀಜಗಳನ್ನು ಸೇವಿಸುವುದರಿಂದ ಬ್ರೆಸ್ಟ್​ ಕ್ಯಾನ್ಸರ್​ ಸೆಲ್ಸ್​ಗಳು ಶೇ. 90ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ. ಇನ್ನು ಸೌಂದರ್ಯದ ಸಮಸ್ಯೆಗಳಾದ ಮೊಡವೆಗಳು, ಎಕ್ಸಿಮಾ ಹಾಗೂ ತೂಕ ಕಡಿಮೆ ಮಾಡುವಲ್ಲಿ ಈ ಬೀಜಗಳು ಸಹಾಯ ಮಾಡುತ್ತವೆ. ಈ ಬೀಜಗಳ ಸೇವನೆಯು ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡಿ, ರಕ್ತನಾಳಗಳನ್ನು ಶುದ್ಧೀಕರಿಸುತ್ತದೆ.

* ಹಾಗಲಕಾಯಿ ಬೀಜ ಸೇವಿಸುವುದರಿಂದಾಗುವ ಪ್ರಯೋಜನಗಳೇನು?

ಹಾಗಲಕಾಯಿ ಬೀಜಗಳನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣ, ತೂಕ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ಆದರೆ, ಅತಿಯಾಗಿ ತಿನ್ನುವುದರಿಂದ ಸಮಸ್ಯೆ ಉಂಟಾಗುತ್ತದೆ. ಇದರಲ್ಲಿ ಟಾಕ್ಸಿನ್​ ಇರುವುದರಿಂದ ಹೆದೆ, ಬೇನೆ, ಉಬ್ಬರ ಅಥವಾ ಕಡಿಮೆ ರಕ್ತಶುದ್ಧಿ ಸಂಭವಿಸಬಹುದು. ಗರ್ಭಿಣಿಯರು ಈ ಹಾಗಲಕಾಯಿ ಬೀಜವನ್ನು ಸೇವಿಸುವುದರಿಂದ ಗರ್ಭಪಾತವಾಗುವ ಸಂಭವ ಹೆಚ್ಚಾಗಿರುತ್ತದೆ.

* ಯಾರು ಈ ಬೀಜಗಳನ್ನು ಸೇವಿಸಬಾರದು?

ಹಿಮೋಗ್ಲೋಬಿನ್​ ಕಡಿಮೆ ಇರುವವರು, ಹೈಪೋಗ್ಲೈಸಿಮಿಯಾ, ರೋಗಿಗಳು, ಮಕ್ಕಳು, ವಯಸ್ಸಾದವರು, ಗರ್ಭಿಣಿಯರು,, ಕಿಡ್ನಿ ಸಮಸ್ಯೆ ಇರುವಂತವರು ಈ ಹಾಗಲಕಾಯಿ ಬೀಜವನ್ನು ಸೇವಿಸಬಾರದು. ಇದು ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ. ಆದರಿಂದ ವೈದ್ಯರ ಸಲಹೆಯಿಲ್ಲದೆ, ಈ ಬೀಜಗಳನ್ನು ಸೇವಿಸಬೇಡಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ