ಲೈಫ್‌ಸ್ಟೈಲ್

ಜೋಡಿ ಬಾಳೆಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ? Twin Banana

Twin Banana : ಸಾಮಾನ್ಯವಾಗಿ ಎಲ್ಲರೂ ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಈ ಬಾಳೆಹಣ್ಣು ವರ್ಷವಿಡೀ ನಮಗೆ ಲಭ್ಯ. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಅನೇಕ ಪ್ರಯೋಜನಗಳಿವೆ. ನಾವು ಬಾಳೆಹಣ್ಣು ಖರೀದಿಸಿದಾಗ, ಕೆಲವೊಮ್ಮೆ ಅವಳಿ ಬಾಳೆಹಣ್ಣುಗಳು ಸಿಗುತ್ತವೆ. ಅಂದರೆ ಒಂದು ಬಾಳೆಹಣ್ಣು ಮತ್ತೊಂದು ಬಾಳೆಗೆ ಅಂಟಿಕೊಂಡಿರುತ್ತದೆ. ಇದನ್ನು ಅವಳಿ ಬಾಳೆಹಣ್ಣು ಎಂದೂ ಕರೆಯುತ್ತಾರೆ...

ಅವಳಿ ಬಾಳೆಹಣ್ಣು ತಿಂದರೆ ಈ ದಂಪತಿ ಅವಳಿ ಮಕ್ಕಳೊಂದಿಗೆ ಜನಿಸುತ್ತಾರೆ ಎಂದು ಹಲವರು ಹೇಳುತ್ತಾರೆ. ಇದಲ್ಲದೆ, ದಂಪತಿ ನಿಜವಾಗಿಯೂ ಅವಳಿ ಬಾಳೆಹಣ್ಣು ತಿನ್ನಬಹುದೇ ಅಥವಾ ಇಲ್ಲವೇ ಎಂಬ ಅನುಮಾನ ಅನೇಕರಿಗೆ ಇರುತ್ತದೆ. ಈಗ ಆ ಬಗ್ಗೆ ತಿಳಿದುಕೊಳ್ಳೋಣ.. ಅವಳಿ ಬಾಳೆಹಣ್ಣುಗಳನ್ನು ಮಕ್ಕಳಿಗೆ ಕೊಡುವುದಿಲ್ಲ ಮತ್ತು ದೇವರ ಪೂಜೆಗೆ ಇಡುವುದಿಲ್ಲ  ಎನ್ನುವ ನಂಬಿಕೆ ಇದೆ.

ಭಾರತೀಯರಿಗಷ್ಟೇ ಅಲ್ಲ ಫಿಲಿಪೈನ್ಸ್ ದೇಶದವರೂ ಕೂಡ ಜೋಡಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕಳಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಅಂದರೆ ಗರ್ಭಿಣಿ ತನ್ನ ಮೊದಲ ಮೂರು ತಿಂಗಳಲ್ಲಿ ಜಂಟಿ ಬಾಳೆಹಣ್ಣು ತಿಂದರೆ ಅವರಿಗೆ ಖಚಿತವಾಗಿ ಅವಳಿ ಮಕ್ಕಳಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ.

ನಿಜಕ್ಕೂ ಜೋಡಿ ಬಾಳೆಹಣ್ಣು ತಿಂದ್ರೆ ಅವಳಿ ಮಕ್ಕಳಾಗುತ್ತದೆ ಎಂಬ ವಿಚಾರ ವೈಜ್ಞಾನಿಕವಾಗಿ ಎಲ್ಲೂ ಸಾಬೀತಾಗಿಲ್ಲ. ಬಾಳೆಹಣ್ಣು ತಿಂದರೆ ಆರೋಗ್ಯಕ್ಕೆ ಒಳ್ಳೆಯದ. ಇದರಿಂದ ದೇಹಕ್ಕೆ ನಾನಾ ಪ್ರಯೋಜನ ಸಿಗುತ್ತದೆ. ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೊಟ್ಯಾಸಿಯಂ ಲಭ್ಯವಿದೆ. ಗರ್ಭಿಣಿಯರಿಗೂ ಪೊಟ್ಯಾಸಿಯಂ ಅಗತ್ಯವಿದೆ. ಹಾಗಂತ ಹೆಚ್ಚು ತಿನ್ನಬಾರದು. ಸಾಮಾನ್ಯವಾಗಿ ಒಂದು ಬಾಳೆಹಣ್ಣಿನಲ್ಲಿ 450 ಮಿಗ್ರಾಂ ಪೊಟ್ಯಾಷಿಯಂ ಇರುತ್ತದೆ. ಇನ್ನೂ ಜೋಡಿ ಬಾಳೆ ಹಣ್ಣಿನಲ್ಲಿ ಬರೋಬ್ಬರಿ 900 ಎಂಜಿ ಪೊಟ್ಯಾಷಿಯಂ ಇರುತ್ತದೆ. ಒಂದು ದಿನಕ್ಕೆ ನಮ್ಮ ದೇಹಕ್ಕೆ ಅಗತ್ಯವಿರುವ ಶೇ40ರಷ್ಟು ಪೊಟ್ಯಾಷಿಯಂ ಸಿಗುತ್ತದೆ. ಹಾಗಾಗಿ ಗರ್ಭಿಣಿಯರು ಹೆಚ್ಚು ಬಾಳೆಹಣ್ಣು, ಅದರಲ್ಲಿಯೂ ಜೋಡಿ ಬಾಳೆ ಹಣ್ಣು ತಿನ್ನಬಾರದು ಎನ್ನಲಾಗುತ್ತದೆ. ಆದರೆ ಕೆಲವರು ತಮಗೆ ಅವಳಿ ಮಕ್ಕಳು ಬೇಕೆಂಬ ಕಾರಣಕ್ಕೆ ಜೋಡಿ ಬಾಳೆಹಣ್ಣು ತಿನ್ನುತ್ತಾರೆ.

ನಿಜಕ್ಕೂ ಜೋಡಿ ಬಾಳೆಹಣ್ಣು ಅತಿಯಾಗಿ ತಿನ್ನುವುದರಿಂದ ಅಧಿಕ ಮೂರ್ತ ವಿಸರ್ಜನೆ, ಕಿಡ್ನಿಯಲ್ಲಿ ಕಲ್ಲುಗಳು, ಆಂತರಿಕ ರಕ್ತಸ್ರಾವ, ಹೃದಯ ಬಡಿತ ಕಡಿಮೆಯಾಗುವುದು, ಉಸಿರಾಟದಲ್ಲಿ ತೊಂದರೆ ಹೀಗೆ ನಾನಾ ಆರೋಗ್ಯ ಸಮಸ್ಯೆಗಳು ಕಾಡಲಿದೆ.