Bad Habit: ಪದೇಪದೆ ಮೂಗಿನ ಮೇಲೆ ಬೆರಳಿಡುವ ಅಭ್ಯಾಸ ನಿಮಗಿದೆ ಎಂದರೆ ಅದನ್ನು ಇಂದೇ ಬಿಟ್ಟುಬಿಡಿ, ಇಲ್ಲವಾದರೆ ಇದರಿಂದ ಸಾವು ಸಂಭವಿಸಬಹುದು ಎನ್ನುತ್ತಾರೆ ವೈದ್ಯರು. ಇದಕ್ಕೆ ಕಾರಣ ಏನು? ಯಾಕೆ ಮೂಗಿನ ಮೇಲೆ ಬೆರಳಿಡಬಾರದು ಎಂಬುವುದನ್ನು ತಿಳಿಯೋಣ ಬನ್ನಿ..
ನಿಮ್ಮ ಸುತ್ತಲೂ ಅನೇಕ ಜನರು ತಮ್ಮ ಮೂಗಿನ ಮೇಲೆ ಬೆರಳು ಹಾಕುತ್ತಲೇ ಇರುತ್ತಾರೆ. ಇದನ್ನು ಕೆಟ್ಟ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ರೈನೋಟಿಲೆಕ್ಸೋಮೇನಿಯಾ ಎಂದು ಕರೆಯಲಾಗುತ್ತದೆ. ಈ ಕೆಟ್ಟ ಅಭ್ಯಾಸವು ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ಇದರಿಂದಾಗಿ ಸಾವಿನ ಅಪಾಯವೂ ಇರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಹೌದು ಇದಕ್ಕೆ ಕಾರಣ, ಇತ್ತೀಚೆಗೆ ಚೀನಾದ ವ್ಯಕ್ತಿಯೊಬ್ಬರಿಗೂ ಇದೇ ರೀತಿಯ ಘಟನೆ ಸಂಭವಿಸಿದ್ದು, ಅವರು ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾರೆ ಎನ್ನಲಾಗಿದೆ.
1.ಕೈಗಳಿಂದ ಬರುವ ಸೂಕ್ಷ್ಮಜೀವಿಗಳು ಮೂಗಿನೊಳಗೆ ಸೇರುತ್ತವೆ. ಇದರಿಂದ ಮೂಗು ಶೀಲಿಂದ್ರಗಳಿಗೆ ಕಾರಣವಾಗಬಹುದು.
2.ಕೈ ಬೆರಳಿನ ಉಗುರುಗಳು ಮೂಗಿನ ಒಳಪದರುನ್ನು ಹಾನಿಗೊಳಿಸಬಹುದು.ಇದರಿಂದ ಮೂಗಿನ ಅಂಗಾಗ ಕತ್ತರಿಸುವ ಅಪಾಯವಿರುತ್ತದೆ.
3.ಸ್ಟ್ಯಾಫಿಲೋಕೊಕಸ್ ಎಂಬ ಬ್ಯಾಕ್ಟೀರಿಯಾವನ್ನು ಹರಡುವ ಅಪಾಯ ಇರುತ್ತದೆ. ಈ ಬ್ಯಾಕ್ಟೀರಿಯಾ, ನ್ಯೂಮೆನಿಯಾ ಮತ್ತು ಮೂಳೆ ಕಾಯಿಲೆಗೆ ಕಾರಣವಾಗಬಹುದು.
4.ಮೂಗಿನಲ್ಲಿ ಗಾಯ ಮತ್ತು ಊತಗಳಾಗುತ್ತವೆ.
5.ಮೂಗಿನಲ್ಲಿ ನೋವು ಮತ್ತು ತೂರಿಕೆ ಊಂಟಾಗುತ್ತದೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.