Health Tips: ಚಪಾತಿ ಎಲ್ಲರಿಗೂ ಅಚ್ಚುಮೆಚ್ಚಿನ ಆಹಾರ. ಪಲ್ಯ, ಸಾಗು, ಜಾಮ್, ತುಪ್ಪ ಹೀಗೆ ಎಲ್ಲದರ ಜೊತೆಯಲ್ಲಿ ಚಪಾತಿಯನ್ನು ತಿನ್ನುತ್ತೇವೆ. ಅಷ್ಟೇ ಅಲ್ಲ ಚಪಾತಿ ದೇಹದ ತೂಕವನ್ನು ಇಳಿಸುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಆದರೆ ತುಪ್ಪ, ಎಣ್ಣೆಯನ್ನು ಸವರಿ ತಿನ್ನಬಾರದಂತೆ ಇದರಿಂದ ಆರೋಗ್ಯಕ್ಕೆ ತೊಂದರೆಯಾಗಬಹುದು. ಹಾಗಾದ್ರೆ ಏನೆಲ್ಲಾ ಪರಿಣಾಮ ಬೀರುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ಬನ್ನಿ ತಿಳಿಯೋಣ
ತುಪ್ಪ ನಮಗೆ ಉತ್ತಮ ಆರೋಗ್ಯವನ್ನು ಕೊಡುವುದರ ಜೊತೆಗೆ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ. ಇಂತಹ ಅನೇಕ ಪ್ರಯೋಜನಗಳನ್ನು ಹೊಂದಿರುವ ತುಪ್ಪವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿಯೂ ಬಳಸುತ್ತಾರೆ. ಆದರೆ ಈ ತುಪ್ಪವನ್ನು ರೊಟ್ಟಿ, ಚಪಾತಿಗೆ ಹಚ್ಚಿ ತಿನ್ನಬಾರದಂದು ತಜ್ಷರು ಹೇಳಿದ್ದಾರೆ.
ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ರೊಟ್ಟಿ ಮತ್ತು ಚಪಾತಿಗಳನ್ನು ಹೆಚ್ಚೆಚ್ಚು ತಿನ್ನುತ್ತಾರೆ. ಆದರೆ, ಕೆಲವರು ಅವುಗಳ ಚಪಾತಿಗಳ ಮೇಲೆ ಬೆಣ್ಣೆ, ತುಪ್ಪವನ್ನು ಸವರಿ ತಿನ್ನುತ್ತಾರೆ. ಹಿಂದೆ, ಇದು ಒಳ್ಳೆಯ ಅಭ್ಯಾಸ ಎಂದು ಹೇಳಲಾಗುತ್ತಿತ್ತು. ಆದರೆ ಈಗ, ಇದಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಹೆಚ್ಚುತ್ತಿವೆ.
ಯಾಕೆ ತಿನ್ನಬಾರದು?
ರೊಟ್ಟಿ ಅಥವಾ ಚಪಾತಿಯ ಮೇಲೆ ಬೆಣ್ಣೆಯನ್ನು ಹಚ್ಚುವುದರಿಂದ ಒಂದು ಪದರ ಉಂಟಾಗುತ್ತದೆ. ಇದು ಜೀರ್ಣಿಕ್ರಿಯೆಗೆ ಕಷ್ಟವಾಗುತ್ತದೆ. ಈ ಪದರವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಬಿಡುವುದಿಲ್ಲ. ಪರಿಣಾಮವಾಗಿ, ಅನಿಲ, ಅಜೀರ್ಣ ಮತ್ತು ಹೊಟ್ಟೆ ಭಾರವಾದ ಭಾವನೆ ಉಂಟು ಮಾಡುತ್ತದೆ. ಈ ರೀತಿ ಸೇವಿಸಿದ ರೊಟ್ಟಿಗಳು ಬೇಗನೆ ಜೀರ್ಣವಾಗುವುದಿಲ್ಲ. (ಏಜೆನ್ಸೀಸ್)