ಲೈಫ್‌ಸ್ಟೈಲ್

ನೀವು ಎದ್ದ ತಕ್ಷಣ ಹೀಗೆ ಮಾಡುತ್ತೀರಾ? ಹಾಗಿದ್ದರೆ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..Health tips

Health tips: ಬೆಳಿಗ್ಗೆ ಎದ್ದ ಕೂಡಲೇ ಎಲ್ಲರೂ ಉತ್ಸೂಹಕರಾಗಿರಬೇಕೆಂದು ಬಯಸುತ್ತಾರೆ. ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹ ಪ್ರಯತ್ನಿಸುತ್ತಾರೆ. ಬೆಳಿಗ್ಗೆ ಎದ್ದು ನಾವು ಮಾಡುವಂತಹ ಕೆಲಸಗಳು ನಮ್ಮ ಮೇಲೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಣಾಮ ಬೀರುತ್ತವೆ. ನಿಮ್ಮ ಜೀವನಶೈಲಿಯಲ್ಲಿ ಆದಷ್ಟು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಆದರಿಂದ ನೀವು ಬೆಳಿಗ್ಗೆ ಎದ್ದಾಗ ಈ ರೀತಿಯ ತಪ್ಪುಗಳನ್ನು ಮಾಡಬೇಡಿ...

ಎದ್ದ ಕೂಡಲೇ ಹಾಸಿಗೆಯಲ್ಲಿ ಕುಳಿತುಕೊಳ್ಳುವುದು

ಬೆಳಿಗ್ಗೆ ಎದ್ದ ತಕ್ಷಣ ನೀವು ಅದೇ ಹಾಸಿಗೆಯುಲ್ಲಿ ಕುಳಿತುಕೊಳ್ಳುತ್ತೀರಾ ಹಾಗಿದ್ದರೆ, ಇದು ಸ್ನಾಯು ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದ ದೈಹಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಆದರಿಂದ ಎದ್ದ ತಕ್ಷಣ ಕೆಲ ಕಾಲ ಓಡಾಡುವುದು ಒಳ್ಳೆಯದು ಇದು ನಿಮ್ಮ ದೇಹವನ್ನು ಹಗುರಗೊಳಿಸುತ್ತದೆ.

ದೈನಂದಿನ ಕೆಲಸಗಳನ್ನುಆದಷ್ಟು ಬೇಗನೆ ಮುಗಿಸಿ

ನೀವು ಕಚೇರಿಗೆ ಹೋಗಬೇಕಾದರೆ ಎಲ್ಲಾ ಕೆಲಸವನ್ನು ಕೊನೆಯ ಕ್ಷಣದಲ್ಲಿ ಮಾಡಲು ಪ್ರಯತ್ನಿಸುತ್ತೀರ ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಆದರಿಂದ ಆದಷ್ಟು ಬೇಗನೆ ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಆದರೆ, ಹಿಂದಿನ ದಿನವೇ ಆದಷ್ಟು ಕೆಲಸಗಳನ್ನು ಮುಗಿಸಲು ಪ್ರಯತ್ನಿಸಿ.

ಉಪಹಾರ ಬಿಡುವುದು

ದಿನನಿತ್ಯದ ಒತ್ತಡಗಳಿಂದ ಹಲವಾರು ಜನರು ತಿಂಡಿ, ಊಟ ಸೇವಿಸದೆ ಕೆಲಸಕ್ಕೆ ಹೋಗುತ್ತಾರೆ. ಇದರಿಂದ ರೋಗ ನಿರೋಧಕ ಶಕ್ತಿ ದೇಹಕ್ಕೆ ಸೇರ್ಪಡುವುದರಿಂದ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರಿ, ಮಧುಮೇಹ (ಸಕ್ಕರೆ ಕಾಯಿಲೆ) ಬೊಜ್ಜು ಈ ಸಮಸ್ಯೆಗಳಿಗೆ ಒಳಗಾಗುತ್ತಾರೆ.

ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್​ ವೀಕ್ಷಿಸುವುದು

ಹಲವಾರು ಜನರಿಗೆ ಮೊಬೈಲ್​ ಇಲ್ಲದೇ ಬದುಕೇ ಇಲ್ಲದಂತೆ ಭಾಸವಾಗುತ್ತದೆ. ಅಂತವರು ಎದ್ದ ಕೂಡಲೇ ತಮ್ಮ ಮೊಬೈಲ್ ವೀಕ್ಷಣೆ ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿಯೇ ಸಕ್ರಿಯರಾಗಿರುತ್ತಾರೆ. ಇವುಗಳನ್ನು ತಪ್ಪಿಸುವುದರಿಂದ ಆರೋಗ್ಯಕರವಾಗಿ ಇರಲು ಸಾಧ್ಯವಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ವ್ಯಾಯಾಮ ಮಾಡುವುದು

ಯಾವುದೇ ವ್ಯಕ್ತಿಯು ಬೆಳಿಗ್ಗೆ ಎದ್ದ ತಕ್ಷಣ ಏಕಾಏಕಿ ವ್ಯಾಯಾಮ ಮಾಡುವ ಬದಲು ಮೊದಲು ಎದ್ದ ಕೂಡಲೇ ನಿಧಾನವಾಗಿ ಚಲಿಸಿ ದೇಹವನ್ನು ವಿಶ್ರಾಂತಿಗೊಳಿಸಬೇಕು. ನಂತರ ಧ್ಯಾನ ಹಾಗೂ ವ್ಯಾಯಾಮ ಮಾಡುವುದು ಉತ್ತಮ.

ಈ ಎಲ್ಲಾ ತಪ್ಪುಗಳನ್ನು ತಪ್ಪಿಸಿದರೆ ನೀವು ಆರಾಮವಾಗಿ ಇರಲು ಸಾಧ್ಯವಾಗಿರುತ್ತದೆ.(ಏಜೆನ್ಸೀಸ್​)