ನಿದ್ರೆಗೂ ಮುನ್ನ ಈ 5 ಕೆಲಸ ಮಾಡಿದ್ರೆ ಬೆಳಗ್ಗೆ ಎದ್ದಾಗಲೇ ವ್ಯತ್ಯಾಸ ಕಾಣಬಹುದು 
ಲೈಫ್‌ಸ್ಟೈಲ್

ನಿದ್ರೆಗೂ ಮುನ್ನ ಈ 5 ಕೆಲಸ ಮಾಡಿದ್ರೆ ಬೆಳಗ್ಗೆ ಎದ್ದಾಗಲೇ ವ್ಯತ್ಯಾಸ ಕಾಣಬಹುದು! ಏನು ಅಂತೀರಾ? ಇಲ್ಲಿದೆ ಮಾಹಿತಿ | Before Sleep

ಇದರಿಂದ ಬೆಳಗ್ಗೆ ಎದ್ದಾಗ ಕೆಲಸಗಳು ಬಗ್ಗೆ ಹೆಚ್ಚು ಗೊಂದಲವಾಗುವುದಿಲ್ಲ. ಮತ್ತು ನಿಮ್ಮ ಮನಸನ್ನು ಹತೋಟಿಯಲ್ಲಿ ಇಡಬಹುದು. ಇದರಿಂದ ಗೊಂದಲಗಳು ಕಡಿಮೆಯಾಗಿ ದಿನವೆಲ್ಲ ಸರಳವಾಗಿ ನಡೆಯುತ್ತದೆ.

Before Sleep: ದಿನವಿಡೀ ಕೆಲಸ, ಓದು, ಸುತ್ತಾಟ, ಮೊಬೈಲ್ ಬಳಕೆಯ ನಡುವೆ ಅದ್ಯಾವಾಗ ರಾತ್ರಿ ಮಲಗುವ ಸಮಯ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ದೇಹಕ್ಕೆ ವಿಶ್ರಾಂತಿ ನೀಡಲು ಮಲಗಲು ಹಾಸಿಗೆಗೆ ಹೋದರೂ ಮೊಬೈಲ್ ನೋಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುತ್ತಾ ಸಮಯ ಮುಂದಕ್ಕೆ ದೂಡುವುದು ತೀರ ರೂಢಿಯಾಗಿದೆ. ಆದರೆ, ಮಲಗುವ ಮುನ್ನ ಮಾಡುವ ಕೆಲವು ಸಣ್ಣ ಬದಲಾವಣೆಗಳು ನಿಮ್ಮ ನಿದ್ರೆ ಮತ್ತು ಮರುದಿನದ ಬೆಳಗಿನ ಅನುಭವದ ಮೇಲೆ ಪರಿಣಾಮ ಬೀರುತ್ತವೆ.

ಮಲಗುವ ಮುನ್ನ ಮೊಬೈಲ್​ಗೆ ಬ್ರೇಕ್ ಹಾಕಿ

ನಿದ್ರೆಗೆ ಕೆಲವು ಗಂಟೆಗಳಿವೆ ಎನ್ನುವ ಮುನ್ನ ಮೊಬೈಲ್ ಸ್ಕ್ರೀನ್ ನೋಡುವ ಅಭ್ಯಾಸ ಹಲವರಿಗಿದೆ. ಹೀಗಾಗಿ ಮಲಗುವ ಸಮಯದಲ್ಲಿ ಮೊಬೈಲ್ ಅನ್ನು ಸ್ವಲ್ಪ ದೂರವಿಡುವುದು ಉತ್ತಮ. ವಿಶೇಷವಾಗಿ ನಿದ್ರೆಗೆ ಮುನ್ನ ನಿರಂತರವಾಗಿ ರೀಲ್ಸ್, ಶಾರ್ಟ್ಸ್ ವಿಡಿಯೋ ಅಥವಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುವುದನ್ನು ಮಿತಿಗೊಳಿಸಿದರೆ ಮನಸ್ಸನ್ನು ವಿಶ್ರಾಂತಿಯ ಸ್ಥಿತಿಗೆ ತರಬಹುದು.

ಕೆಲಸಗಳನ್ನು ಮೊದಲೇ ಪ್ಲ್ಯಾನ್ ಮಾಡಿ

ಬೆಳಗ್ಗೆ ಎದ್ದಾಕ್ಷಣ ಏನು ಮಾಡಬೇಕು ಎಂಬ ಗೊಂದಲ ಕೆಲವೊಮ್ಮೆ ದಿನದ ಆರಂಭವನ್ನೇ ಒತ್ತಡದಿಂದ ಪ್ರಾರಂಭವಾಗಿಸುತ್ತದೆ. ಆದ್ದರಿಂದ, ಮಲಗುವ ಮುನ್ನ ಮರುದಿನ ಮಾಡಬೇಕಾದ ಪ್ರಮುಖ ಕೆಲಸಗಳನ್ನು ಮನಸ್ಸಿನಲ್ಲೇ ಅಥವಾ ಚಿಕ್ಕ ಪಟ್ಟಿ ಮಾಡಿಕೊಳ್ಳಿ. ಇದರಿಂದ ಬೆಳಗ್ಗೆ ಎದ್ದಾಗ ಕೆಲಸಗಳು ಬಗ್ಗೆ ಹೆಚ್ಚು ಗೊಂದಲವಾಗುವುದಿಲ್ಲ. ಮತ್ತು ನಿಮ್ಮ ಮನಸನ್ನು ಹತೋಟಿಯಲ್ಲಿ ಇಡಬಹುದು. ಇದರಿಂದ ಗೊಂದಲಗಳು ಕಡಿಮೆಯಾಗಿ ದಿನವೆಲ್ಲ ಸರಳವಾಗಿ ನಡೆಯುತ್ತದೆ.

ಮಲಗುವ ಮುನ್ನ ಒಂದು ಗ್ಲಾಸ್ ನೀರು

ರಾತ್ರಿಯಲ್ಲಿ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಮಲಗುವ ಮುನ್ನ ಅತಿಯಾಗಿ ನೀರು ಕುಡಿಯುವ ಬದಲು ಅಗತ್ಯಕ್ಕೆ ತಕ್ಕಷ್ಟು ನೀರು ಕುಡಿಯುವುದು ಒಳ್ಳೆಯ ಅಭ್ಯಾಸ. ಆದರೆ, ಪದೇ ಪದೇ ರಾತ್ರಿ ಎದ್ದು ಬರುವ ಸಮಸ್ಯೆ ಇದ್ದರೆ ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸುವುದು ಸೂಕ್ತ. ಆಗಾಗ್ಗೆ ನೀರು ಕುಡಿಯುವುದರಿಂದ ನಿದ್ದೆ ಸರಿಯಾಗಿ ಆಗದೇ ಮರುದಿನ ಸುಸ್ತು, ತಲೆನೋವಿನಂತಹ ಸಮಸ್ಯೆಗಳನ್ನು ಕಾಡಬಹುದು.

ರೂಮ್​ ಸ್ವಚ್ಚವಾಗಿಡಿ

ಮಲಗುವ ಸ್ಥಳ ಸ್ವಚ್ಚವಾಗಿದ್ದು, ಹೆಚ್ಚು ಬೆಳಕು ಅಥವಾ ಶಬ್ದವಿಲ್ಲದಿದ್ದರೆ ವಿಶ್ರಾಂತಿಗೆ ಅನುಕೂಲಕರ. ಹಾಸಿಗೆಯ ಮೇಲೆ ಬಟ್ಟೆ, ಪುಸ್ತಕ, ಮೊಬೈಲ್ ಸೇರಿದಂತೆ ಅನಗತ್ಯ ವಸ್ತುಗಳನ್ನು ಹರಡದೆ ಸರಳವಾಗಿ ಇಡುವುದರಿಂದಲೂ ಮನಸ್ಸಿಗೆ ನೆಮ್ಮದಿ ಲಭಿಸಬಹುದು.

ನಾಳೆಗಾಗಿ ರೆಡಿಯಿರಿ

ಬೆಳಗ್ಗೆ ಎದ್ದ ಮೇಲೆ ಧ್ಯಾನ, ಯೋಗ ಮಾಡಿ ಮನಸ್ಸನ್ನು ಶಾಂತತೆಯಿಂದ ಕೂಡಿರುವ ಹಾಗೇ ನೋಡಿಕೊಳ್ಳಬೇಕು. ನಂತರ ಕೆಲಸಕ್ಕೆ ಹೋಗುವ ಮುನ್ನ ಧರಿಸಬೇಕಾದ ಬಟ್ಟೆ, ಅಗತ್ಯ ದಾಖಲೆಗಳು ಅಥವಾ ತೆಗೆದುಕೊಂಡು ಹೋಗಬೇಕಾದ ವಸ್ತುಗಳನ್ನು ರಾತ್ರಿಯೇ ರೆಡಿ ಇಟ್ಟುಕೊಳ್ಳಿ. ಇದರಿಂದ ಬೆಳಗಿನ ಆತುರ ಕಡಿಮೆಯಾಗಬಹುದು. ಜತೆಗೆ ಕೆಲವು ನಿಮಿಷ ಶಾಂತವಾಗಿ ಕುಳಿತು ದಿನದ ಬಗ್ಗೆ ಯೋಚಿಸುವುದು ಅಥವಾ ನಿಧಾನವಾಗಿ ಉಸಿರಾಟದ ಮೇಲೆ ಗಮನ ಹರಿಸುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಬಹುದು.

ಸಣ್ಣ ಅಭ್ಯಾಸಗಳೇ ಕೆಲವೊಮ್ಮೆ ನಮ್ಮ ದಿನಚರಿಯಲ್ಲಿ ದೊಡ್ಡ ಬದಲಾವಣೆ ತರುವುದು. ನಿದ್ರೆಗೂ ಮುನ್ನ ಮೊಬೈಲ್‌ ಬಳಕೆ ಕಟ್​ಆಫ್ ಮಾಡಿ​, ಮುಂದಿನ ದಿನಕ್ಕೆ ಸಣ್ಣ ತಯಾರಿ ಮಾಡಿಕೊಂಡು, ಮನಸ್ಸಿಗೆ ವಿಶ್ರಾಂತಿ ನೀಡುವ ಅಭ್ಯಾಸ ಬೆಳೆಸಿಕೊಂಡರೆ ಬೆಳಗಿನ ಆರಂಭವೂ ಹೆಚ್ಚು ನೆಮ್ಮದಿ ಆಗಿರಬಹುದು. ನಿದ್ರೆಯ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೆ ಅಥವಾ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ,(ಮಾಹಿತಿ ಸಂಗ್ರಹ).