ಜಗತ್ತಿನಾದ್ಯಂತ ಕರೊನಾ ಹೆಮ್ಮಾರಿಯ ಭೀತಿ ತಲೆದೋರಿದೆ. ವೈರಾಣು ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಈ ನಡುವೆ ಕರೊನಾ ತಡೆಗಟ್ಟುವಿಕೆ ಕುರಿತಂತೆ ಅನೇಕ ಕಟ್ಟುಕಥೆಗಳು, ವದಂತಿಗಳು ಪುಂಖಾನುಪುಂಖವಾಗಿ ಹರಡಿಕೊಂಡು ಜನರನ್ನು ದಾರಿತಪ್ಪಿಸುತ್ತಿವೆ. ಈ ಕಟ್ಟುಕಥೆಗಳ ವಾಸ್ತವ ಏನು, ಕರೊನಾ ತಡೆಗೆ ವೈಜ್ಞಾನಿಕವಾಗಿ ನಾವು ಅನುಸರಿಸಬೇಕಾದ ಕ್ರಮಗಳೇನು ಎಂಬುದರ ಮೇಲೆ ಬೆಳಕು ಚೆಲ್ಲಿದ್ದಾರೆ ಹಿರಿಯ ವೈದ್ಯ ಸತ್ತೂರ ಮೆಡಿಕಲ್ ಕೇರ್ನ ಡಾ.ಜಿ.ಬಿ. ಸತ್ತೂರ.
# ಸೋಂಕು ತಗಲುವುದನ್ನು ಮಾಸ್ಕ್ ಧರಿಸಿ ತಡೆಯಬಹುದೇ?
ಕರೊನಾ ತಡೆಯುವಲ್ಲಿ ಮಾಸ್ಕ್ಗಳು ಪರಿಣಾಮಕಾರಿಯಲ್ಲ ಎಂದು ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ ಹೇಳುತ್ತದೆ. ಮಾಸ್ಕ್ ಧರಿಸುವವರು ಮುಖವನ್ನು ಪದೇಪದೆ ರ್ಸ³ಸುವ ಸಾಧ್ಯತೆ ಇರುವುದರಿಂದ ವೈರಸ್ ಹರಡುವ ಅಪಾಯ ಹೆಚ್ಚು.ಕರವಸ್ತ್ರವನ್ನು ಮಾಸ್ಕ್ನಂತೆ ಬಳಸಬೇಡಿ.
# ಪ್ರತಿ 15 ನಿಮಿಷಕ್ಕೊಮ್ಮೆ ನೀರು ಕುಡಿಯುವುದರಿಂದ ಕರೊನಾ ವೈರಸ್ ಹರಡುವಿಕೆ ತಡೆಯಬಹುದೇ?
ಇಲ್ಲ. ಮೇಲಿಂದ ಮೇಲೆ ನೀರು ಕುಡಿಯುವುದರಿಂದ ವೈರಸ್ ನಿವಾರಿಸಲಾಗದು.
# ನಾನು ಆರೋಗ್ಯವಾಗಿ ದ್ದೇನೆ, ಜನಸಂದಣಿ ಬಗ್ಗೆ ನಾನು ಚಿಂತಿಸಬೇಕಾಗಿಲ್ಲ ಎನ್ನಬಹುದೇ?
ವೈರಸ್ ಹರಡುವ ವೇಗ ತಗ್ಗಿಸಲು ದೇಶಾದ್ಯಂತ ಕಾರ್ಯಕ್ರಮ ರದ್ದುಪಡಿಸಲಾಗುತ್ತಿದೆ. ಆರೋಗ್ಯ ಸೇವೆ ಮೇಲೆ ದಾಳಿ ತಡೆಯಲು ವೈರಸ್ ಹರಡುವ ವೇಗ ತಗ್ಗಿಸು ವುದು ಪ್ರಮುಖವಾಗಿದೆ. ಹಾಗಾದಾಗ ಐಸಿಯು, ವೆಂಟಿಲೇಟರ್ ಮುಂತಾದ ವೈದ್ಯಕೀಯ ಉಪಕರಣಗಳನ್ನು ಬಾಧಿತರಿಗೆ ಉಪಯೋಗಿಸಲು ಸಾಧ್ಯ.
# 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ವೈರಸ್ ಸೋಂಕು ತಗಲುತ್ತದೆಯೇ?
ವಯಸ್ಸಾದ ವ್ಯಕ್ತಿಗಳಿಗೆ ವೈರಸ್ ತಗುಲಿದರೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಜಾಸ್ತಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳುತ್ತದೆ. ಆದರೆ, ಯಾವುದೇ ವಯೋಮಾನದ ವ್ಯಕ್ತಿ ವೈರಸ್ ಸೋಂಕಿತನಾಗಿ ಇತರರಿಗೆ ಹರಡ ಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಿ ಮೇಲಿಂದ ಮೇಲೆ ಕೈತೊಳೆದುಕೊಳ್ಳಬೇಕು.
# ವೈರಸ್ ಹರಡುವಿಕೆಯನ್ನು ಹೆಚ್ಚಿನ ಉಷ್ಣತೆ ಹಾಗೂ ತೇವಾಂಶವು ತಡೆಗಟ್ಟುವುದೇ?
ಇಲ್ಲ.. ಡಬ್ಲ್ಯುಎಚ್ಒ ಪ್ರಕಾರ, ಉಷ್ಣಾಂಶಕ್ಕೆ ಸಂಬಂಧವಿಲ್ಲದಂತೆ ವೈರಸ್ ಹರಡುತ್ತದೆ. ಉಷ್ಣಾಂಶ ಬದಲಾವಣೆಯು ವೈರಸ್ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ.
# ಹ್ಯಾಂಡ್ ಡ್ರೖೆಯರ್ಗಳು ಉಪಯುಕ್ತವೇ?
ಡಬ್ಲ್ಯುಎಚ್ಒ ಪ್ರಕಾರ, ಸಾಬೂನು ಹಾಗೂ ಬಿಸಿನೀರಿನ ಮೂಲಕ ಕೈತೊಳೆಯುವುದೇ ವೈರಸ್ನಿಂದ ರಕ್ಷಿಸಿಕೊಳ್ಳಲು ಇರುವ ಉತ್ತಮ ವಿಧಾನ. ಹೋಟೆಲ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೈ ತೊಳೆಯಲು ಸಾಬೂನು ಹಾಗೂ ನೀರು ಉಪಯೋಗಿಸಬೇಕು.
# ಚೈನೀಸ್ ಫುಡ್ ಸೇವಿಸಬಹುದೇ?
ವಾಸ್ತವ ಏನೆಂದರೆ, ಉಸಿರಾಟದ ಹನಿಗಳ ಮೂಲಕ ವೈರಸ್ಗಳು ಹರಡುತ್ತವೆ. ಆಹಾರದ ಮೂಲಕ ವೈರಸ್ ಹರಡುವ ಸಾಧ್ಯತೆಗಳು ತೀರ ವಿರಳ. ಮೇಲಿಂದ ಮೇಲೆ ಕೈತೊಳೆದುಕೊಳ್ಳುವುದೇ ಸದ್ಯಕ್ಕೆ ಇರುವ ಅತ್ಯುತ್ತಮ ಸಂರಕ್ಷಣೆ ಮಾರ್ಗ.
# ಕೊವಿಡ್-19 ಗೆ ಲಸಿಕೆ, ಔಷಧ ಅಂಗಡಿಗಳಲ್ಲಿ ಲಭ್ಯವಿದೆಯೇ?
ಕೊವಿಡ್ಗೆ ಲಸಿಕೆ ಬಹುತೇಕ ಸಿದ್ಧವಿದೆ. ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಲಸಿಕೆ ತಯಾರಿಸಲು ವಿಜ್ಞಾನಿಗಳಿಗೆ ಕೆಲ ತಿಂಗಳು ಬೇಕಾಗಬಹುದು ಎಂದು ‘ಜಾನ್ ಹಾಪಕಿನ್ಸ್ ಮೆಡಿಸಿನ್’ ಕಂಪನಿ ಹೇಳಿದೆ.
# ಆಲ್ಕೋಹಾಲ್ (ಮದ್ಯ, ಸಾರಾಯಿ) ಸೇವನೆಯಿಂದ ವೈರಸ್ ಕೊಲ್ಲಬಹುದೇ?
ಇಲ್ಲ. ನಿಮ್ಮ ದೇಹವನ್ನು ಒಮ್ಮೆ ವೈರಸ್ ಪ್ರವೇಶಿಸಿದರೆ ಅದನ್ನು ಅಲ್ಕೋಹಾಲ್ನಿಂದ ನಾಶಪಡಿಸಲಾ ಗದು ಎಂದು ಡಬ್ಲ್ಯುಎಚ್ಒ ಸ್ಪಷ್ಟಪಡಿಸಿದೆ.