Aluminium: ನಿಮ್ಮ ಜೀವನದ ಸಂಗಾತಿಯೊಂದಿಗೆ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೆಲಸದ ಒತ್ತಡ, ನಿದ್ರೆಯ ಕೊರತೆ, ಕಳಪೆ ಆಹಾರ ಸೇವನೆಯಿಂದ ಪತಿ-ಪತ್ನಿ ನಡುವಿನ ವೈಯಕ್ತಿಕ ಸಂಬಂಧಗಳ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಆದರೆ, ನಿಮ್ಮ ಅಡುಗೆ ಮನೆಯಲ್ಲಿರುವ ಒಂದು ಸಾಮಾನ್ಯ ಅಲ್ಯೂಮಿನಿಯಂ ಪಾತ್ರೆ ನಿಮ್ಮ ಲೈಂಗಿಕ ಕ್ರಿಯೆ ನಡೆಸುವ ಬಯಕೆಯನ್ನು ಕಡಿಮೆ ಮಾಡುತ್ತದೆ ಎಂದರೆ ನಂಬಲು ಸಾಧ್ಯವೇ? ಅಚ್ಚರಿ ಅನಿಸಿದರೂ ಇದು ನಿಜವೇ.
ಲೈಂಗಿಕ ಬಯಕೆ ಕಡಿಮೆಯಾಗಲು ಒತ್ತಡ ಅಥವಾ ಆಯಾಸ ಮಾತ್ರವಲ್ಲ, ನಿಮ್ಮ ಅಡುಗೆ ಮನೆಯಲ್ಲಿರುವ ಅಲ್ಯೂಮಿನಿಯಂ ಪಾತ್ರೆಗಳು ಸಹ ಬಯಕೆ ಕಡಿಮೆಯಾಗಲು ಕಾರಣವಾಗಿರಬಹುದು. ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಮಾಡಿದ ಆಹಾರವನ್ನು ಪದೇ ಪದೇ ತಿನ್ನುವುದರಿಂದ ನಿಮ್ಮ ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುವುದು ಅನೇಕ ದಂಪತಿಗಳಿಗೆ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಇದರ ಹಿಂದೆ ಮಾನಸಿಕ ಅಥವಾ ಭಾವನಾತ್ಮಕ ಕಾರಣಗಳಷ್ಟೇ ಅಲ್ಲದೆ, ದೈಹಿಕ ಮತ್ತು ಪೌಷ್ಠಿಕಾಂಶದ ಕೊರತೆಗಳು ಸಹ ಪ್ರಮುಖ ಪಾತ್ರವಹಿಸುತ್ತವೆ. ಪ್ರತಿದಿನ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ತಿನ್ನುವುದರಿಂದ ಆರೋಗ್ಯ ಹಾಳಾಗುವುದಲ್ಲದೆ, ವೈವಾಹಿಕ ಜೀವನದ ಅಂತರವೂ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು.
ಅಲ್ಯೂಮಿನಿಯಂ ಹೇಗೆ ಕಾರಣ?
ಹಾರ್ಮೋನ್ಗಳ ಅಸಮತೋಲನ: ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆಹಾರದ ಜೊತೆ ಅಲ್ಯೂಮಿನಿಯಂ ಅಂಶ ಸಹ ದೇಹ ಸೇರುತ್ತದೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಮಹಿಳೆಯರಲ್ಲಿ ಈಸ್ಟ್ರೊಜೆನ್ ಹಾರ್ಮೋನುಗಳು ಲೈಂಗಿಕ ಬಯಕೆಗೆ ಕಾರಣವಾಗಿವೆ. ಇದು ನೈಸರ್ಗಿಕ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ.
ಆಯಾಸ ಮತ್ತು ಶಕ್ತಿಯ ಕೊರತೆ: ಅಲ್ಯೂಮಿನಿಯಂ ಅಂಶ ದೇಹದಲ್ಲಿ ಸೇರುವುದರಿಂದ ಮಿದುಳಿಗೆ ಹಾನಿಯಾಗುತ್ತದೆ. ಇದರೊಟ್ಟಿಗೆ ಆಯಾಸ ಮತ್ತು ಆಲಸ್ಯವನ್ನು ಉಂಟು ಮಾಡುತ್ತದೆ. ಲೈಂಗಿಕ ಬಯಕೆಯನ್ನೂ ಕಡಿಮೆ ಮಾಡುತ್ತದೆ.
ಒತ್ತಡ ಮತ್ತು ಮನಸ್ಥಿತಿಯಲ್ಲಿನ ಬದಲಾವಣೆಗಳು: ಅಲ್ಯೂಮಿನಿಯಂ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮಾನಸಿಕ ಒತ್ತಡ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಲೈಂಗಿಕ ಸಂಬಂಧಗಳಲ್ಲಿ ಮಾನಸಿಕ ಆರೋಗ್ಯವು ಪ್ರಮುಖ ಪಾತ್ರ ವಹಿಸುತ್ತದೆ.
ಲೈಂಗಿಕ ಬಯಕೆ ಕಾಪಾಡಿಕೊಳ್ಳಲು ಏನು ಮಾಡಬೇಕು?
ಮನೆಯಲ್ಲಿ ಅಡುಗೆಗೆ ಸ್ಟೇನ್‌ಲೆಸ್ ಸ್ಟೀಲ್, ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಬಹಳ ಉತ್ತಮ. ಅಲ್ಯೂಮಿನಿಯಂ ಫಾಯಿಲ್ ಅನ್ನು ಪದೇ ಪದೇ ಬಳಸುವುದನ್ನು ಆದಷ್ಟು ಮಿತಗೊಳಿಸಿ. ವಿಶೇಷವಾಗಿ ಬಿಸಿ ಆಹಾರವನ್ನು ಪ್ಯಾಕ್ ಮಾಡುವಾಗ ಅಲ್ಯೂಮಿನಿಯಂ ಅಂಶ ನಿಮ್ಮ ದೇಹ ಸೇರಬಹುದು. ಅರಿಶಿಣ, ಹಸಿರು ತರಕಾರಿಗಳುಳ್ಳ ಪದಾರ್ಥಗಳನ್ನು ಹೆಚ್ಚು ಸೇವಿಸಿ, ಇದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.