ಬೆಂಗಳೂರು: ನಿಮಗೆ ಸೂಜಿ ಚುಚ್ಚದೆ, ರಕ್ತ ತೆಗೆದುಕೊಳ್ಳದೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುತ್ತಾರೆ ಎಂದರೆ ನಂಬುವಿರಾ..?
ಬಹುತೇಕರು ನಂಬುವುದಿಲ್ಲ. ಆದರೆ, ನಂಬಲೇ ಬೇಕಾದ ತಂತ್ರಜ್ಞಾನ ಬಂದಿದೆ. ವೈದ್ಯಲೋಕದಲ್ಲಿ ನಡೆಯುತ್ತಿರುವ ಸಂಶೋಧನೆಗಳೇ ಇದಕ್ಕೆ ಕಾರಣ. ಇಂತಹ ಹೊಸ ವೈಜ್ಞಾನಿಕ ಪದ್ಧತಿಯನ್ನು ‘ಸೆಲ್ ಹೆಲ್ತ್ ಮೆಡಿಕಲ್ ಸೆಂಟರ್’ ಅನುಸರಿಸುತ್ತಿದೆ.
ಈ ಆರೋಗ್ಯ ಕೇಂದ್ರವು ರೋಗ ಪತ್ತೆ ಹಚ್ಚಲು ‘ಆನೇಸಾ’ ಮತ್ತು ಚಿಕಿತ್ಸೆ ನೀಡಲು ‘ಬಯೋಲ್’ ಎಂಬ ತಂತ್ರಜ್ಞಾನ ಬಳಕೆ ಮಾಡಿಕೊಂಡಿದೆ. ಇದರಿಂದಾಗಿ ಬಹುದೊಡ್ಡ ಕಾಯಿಲೆಗಳಾದ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್, ಚರ್ಮ ಸಂಬಂಧಿತ ಕಾಯಿಲೆಗೆ ಈ ನೂತನ ತಂತ್ರಜ್ಞಾನದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮ ಫಲಿತಾಂಶ ಕೂಡ ಲಭ್ಯವಾಗಿದೆ.
ಏನಿದು ಆನೇಸಾ?: ಆಟೋಮೆಟಿಕ್ ನಾನ್ ಇನ್ವೇಸಿವ್ ಎಕ್ಸ್ಪ್ರೆಸ್ ಸ್ಕ್ರೀನಿಂಗ್ ಅನಲೈಜರ್ (ಆನೇಸಾ). ಇದು ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಭಾರತದಲ್ಲಿ ಮೊದಲ ಬಾರಿಗೆ ಸೆಲ್ ಹೆಲ್ತ್ ಮೆಡಿಕಲ್ ಸೆಂಟರ್ ಈ ನೂತನ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಈ ಪದ್ಧತಿಯಲ್ಲಿ ರೋಗ ಪತ್ತೆ ಹಚ್ಚಲು ಸೂಜಿ ಚುಚ್ಚುವುದಿಲ್ಲ, ಮೂತ್ರ ಮತ್ತು ರಕ್ತದ ಮಾದರಿ ತೆಗೆದುಕೊಳ್ಳುವುದಿಲ್ಲ. ಇದ್ಯಾವುದೂ ಇಲ್ಲದೆಯೇ ಆನೇಸಾ ಮೂಲಕ 5-6 ನಿಮಿಷ ಮನುಷ್ಯ ದೇಹವನ್ನು ಪರೀಕ್ಷೆಗೆ ಒಳಪಡಿಸಿ ರೋಗ ಪತ್ತೆ ಹಚ್ಚಲಿದೆ.
135 ಪರಿಶೀಲನೆ: ಸಾಮಾನ್ಯ ವೈದ್ಯ ಪದ್ಧತಿಯಲ್ಲಿ ರಕ್ತ ಮತ್ತು ಮೂತ್ರ ಪರಿಶೀಲನೆ ಮಾಡುವ ಮೂಲಕ ಕೆಲವು ರೋಗಳನ್ನು ಮಾತ್ರವೇ ಪತ್ತೆ ಹಚ್ಚಲಾಗುತ್ತದೆ. ಒಂದೇ ಬಾರಿಗೆ ಹೆಚ್ಚಿನ ರೋಗವನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ಇಲ್ಲಿ ಒಮ್ಮೆ ಪರಿಶೀಲನೆಗೆ ಒಳಪಟ್ಟರೆ 135 ರೀತಿಯ ಪ್ಯಾರಾಮೀಟರ್ ಫಲಿತಾಂಶ ದೊರೆಯುತ್ತದೆ. ಹಿಮೋಗ್ಲೋಬಿನ್, ಸಕ್ಕರೆ ಪ್ರಮಾಣ, ಹಾಮೋನ್ ಸೇರಿದಂತೆ ದೇಹದಲ್ಲಿರುವ ಅಂಗಾಂಗಗಳ ಪರಿಸ್ಥಿತಿ ತಿಳಿಯುತ್ತದೆ. ಈ ರಿಪೋರ್ಟ್ ಕಾರ್ಡ್ ಆಧಾರದ ಮೇಲೆ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲಾಗುತ್ತದೆ.
ಬಯೋಲ್ ಚಿಕಿತ್ಸೆ: ರೋಗದ ಮೂಲ ಪತ್ತೆ ಹಚ್ಚಿದರೆ ಮಾತ್ರವೇ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ. ಈ ಮೂಲ ಪತ್ತೆ ಹಚ್ಚುವುದನ್ನು ಆನೇಸಾ ಮಾಡಿದ ಮೇಲೆ ಬಯೋಲ್ ಚಿಕಿತ್ಸೆ ಆರಂಭ ಆಗಲಿದೆ. ಈ ತಂತ್ರಜ್ಞಾನದ ಥೆರಪಿಯಿಂದ ರೋಗಕ್ಕೆ ನಿಖರವಾಗಿ ಚಿಕಿತ್ಸೆ ಮಾಡುತ್ತೇವೆ. ರೋಗ ತೀವ್ರತೆಯ ಆಧಾರದ ಮೇಲೆ ಈ ಬಯೋಲ್ ಥೆರಪಿ ಮಾಡಲಾಗುತ್ತದೆ.
ಒಮ್ಮೆ ನೀವು ‘ಆನೇಸಾ’ ಮೂಲಕ ಪರೀಕ್ಷೆಗೆ ಒಳಪಟ್ಟರೆ ನಿಮ್ಮಲ್ಲಿರುವ ರೋಗದ ಗುಣಲಕ್ಷಣಗಳು ತಿಳಿಯಲಿವೆ. ಇದರ ಆಧಾರದ ಮೇಲೆ ನಾವು ಚಿಕಿತ್ಸೆ ನೀಡುತ್ತೇವೆ. ವಿದೇಶದಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. | ಡಾ.ಸಂದೀಪ್ ಎನ್.ಸ್ವಾಮಿ ಸೆಲ್ ಹೆಲ್ತ್ ಮೆಡಿಕಲ್ ಸೆಂಟರ್
ವಿಳಾಸ
ಸೆಲ್ ಹೆಲ್ತ್ ಮೆಡಿಕಲ್ ಸೆಂಟರ್, 532, 1ನೇ ಮಹಡಿ, 36ನೇ ಕ್ರಾಸ್, 10ನೇ ಮುಖ್ಯರಸ್ತೆ, ಜಯನಗರ 5ನೇ ಹಂತ, ಬೆಂಗಳೂರು 560041. 080-26651799, 82778 07999 ಸಂರ್ಪಸಬಹುದು.