Delicious: ಹಬ್ಬಗಳು, ನೈವೇದ್ಯಕ್ಕೆ ಅಥವಾ ಸಂಜೆ ಟೈಮ್ನಲ್ಲಿ ಸ್ನ್ಯಾಕ್ಸ್‌ಗೆ ಮನೆಯಲ್ಲಿ ತ್ವರಿತವಾಗಿ ಮಾಡಬಹುದಾದ ಈ ಉತ್ತರ ಕರ್ನಾಟಕದ ಸಿಹಿ ರವೆ ಉಂಡೆ ಬಾಯಲ್ಲಿ ನೀರೂರಿಸುತ್ತದೆ. ಇದನ್ನೂ ಸರಳವಾಗಿ ಮಾಡುಬಹುದಾದ ಸಿಂಪಲ್ ಟಿಪ್ಸ್ ಇಲ್ಲಿದೆ ತಿಳಿಯಿರಿ...
ಚಿರೋಟಿ ರವೆ (1 ಕಪ್)
ಒಣಕೊಬ್ಬರಿ(1 ಕಪ್)
ಒಣದ್ರಾಕ್ಷಿ (15)
ಗೋಡಂಬಿ (15)
ಏಲಕ್ಕಿ ಪುಡಿ (ಸಲ್ಪ)
ಸಕ್ಕರೆ (1 ಕಪ್)
ಏಲಕ್ಕಿ ಪುಡಿ (ಸಲ್ಪ)
ಹಾಲು 1 ಕಪ್
ತುಪ್ಪ (ಸಲ್ಪ)
1.ರವೆಯನ್ನು ಹುರಿಯಿರಿ
ಒಂದು ಕಡಾಯಿಯಲ್ಲಿ(ಬಟ್ಟಲು) ತುಪ್ಪವನ್ನು ಹಾಕಿ ಬಿಸಿಮಾಡಿ. ಅದರಲ್ಲಿ ಚಿರೋಟಿ ರವೆಯನ್ನು ಸೇರಿಸಿ, ಸಣ್ಣ ಉರಿಯಲ್ಲಿ 5 ರಿಂದ 7 ನಿಮಿಷಗಳ ಕಾಲ ಹುರಿಯಿರಿ. ರವೆ ಸುಗಂಧ ಬರುವಂತೆ ಮತ್ತು ಸ್ವಲ್ಪ ಕೆಂಪು ಬಣ್ಣಕ್ಕೆ ಬಂದರೆ ಓಕೆ. ಇದು ಉಂಡೆಗೆ ಮೃದುತೆ ನೀಡುತ್ತದೆ.
2. ಕೊಬ್ಬರಿಯನ್ನು ತಯಾರಿಸಿ
ಒಣಕೊಬ್ಬರಿಯನ್ನು ಮಿಕ್ಸಿಯಲ್ಲಿ ಸಣ್ಣ ಪುಡಿ ಮಾಡಿರಿ. ಇದು ಉಂಡೆಗೆ ಹೆಚ್ಚು ರುಚಿ ಸೇರುತ್ತದೆ.
3. ಡ್ರೈಫ್ರೂಟ್ಸ್ ಹುರಿಯಿರಿ
ಅದೇ ತುಪ್ಪದಲ್ಲಿ ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ, 1 ರಿಂದ 2 ನಿಮಿಷಗಳು ಬಿಸಿ ಮಾಡಿ.
4.ಎಲ್ಲವನ್ನೂ ಮಿಶ್ರಣ ಮಾಡಿ
ಬಿಸಿ ರವೆಯನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದರಲ್ಲಿ ಕೊಬ್ಬರಿ ಪುಡಿ, ಕರಿದ ದ್ರಾಕ್ಷಿ-ಗೋಡಂಬಿ, ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕರಗುವಂತೆ ಮಿಶ್ರಣ ಮಾಡಿ.
5. ಹಾಲು ಸೇರಿಸಿ
ಮೇಲಿನ ಮಿಶ್ರಣಕ್ಕೆ ಬಿಸಿ ಹಾಲನ್ನು ಸ್ವಲ್ಪ-ಸ್ವಲ್ಪವಾಗ ಸೇರಿಸಿ, ಬಳಿಕ ಮಿಶ್ರಣ ಬಿಸಿ-ಬಿಸಿಯಿರುವಾಗಲೇ ಸಣ್ಣ-ಸಣ್ಣ ಉಂಡೆಗಳನ್ನು (ಲಡ್ಡುಗಳಂತೆ) ಮಾಡಿ. ಉಂಡೆ ಕಟ್ಟಲು ಕಷ್ಟವಾದರೆ ಸ್ವಲ್ಪ ಹಾಲು ಹೆಚ್ಚಿಸಿ. ಇದೀಗ ಉತ್ತರ ಕರ್ನಾಟಕದ ಬಿಸಿಬಿಸಿ ರವೆ ಸವಿಯಲು ಸಿದ್ಧ.
ರುಚಿ ಹೆಚ್ಚಿಸಲು ಟಿಪ್ಸ್
- ರವೆಯನ್ನು ಹುರಿಯುವಾಗ ಸಣ್ಣ ಉರಿ ಬಳಸಿ, ಇಲ್ಲದಿದ್ದರೆ ಉಂಡೆ ಕಠಿಣವಾಗುತ್ತದೆ.
- ಸಕ್ಕರೆಯ ಪ್ರಮಾಣವನ್ನು ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿ (ಕಡಿಮೆ ಮಾಡಿದರೆ ಬೆಲ್ಲ ಪುಡಿ ಬಳಸಬಹುದು).
- ಉಳಿದ ಉಂಡೆಗಳನ್ನು ಗಾಳಿಯಾಡದ ಪಾತ್ರೆಯಲ್ಲಿ 4-5 ದಿನಗಳು ಇಡಿ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ.