Chicken Drumsticks ಸಾಂದರ್ಭಿಕ ಚಿತ್ರ
Chicken Drumsticks: ಚಿಕನ್ ಪ್ರಿಯರಿಗೆ 'ಪೆಪ್ಪರ್ ಚಿಕನ್' ಅಂದರೆ ಯಾವಾಗಲೂ ಅಚ್ಚುಮೆಚ್ಚು. ಆದರೆ ಈ 'ಕಾಲಿ ಮಿರ್ಚ್ ಚಿಕನ್ ಡ್ರಮ್ ಸ್ಟಿಕ್ಸ್' ಕೇವಲ ರುಚಿಯಷ್ಟೇ ಅಲ್ಲ, ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಆದಾಗ್ಯೂ, ಚಿಕನ್ ಪ್ರಿಯರಿಗೆ ಭಾನುವಾರದ ಬಾಡೂಟಕ್ಕೆ ಈ ರೆಸಿಪಿ ಉಪಯುಕ್ತ.
ಬೇಕಾಗುವ ಸಾಮಾಗ್ರಿಗಳು
* 4-5 ಚಿಕನ್ ಡ್ರಮ್ ಸ್ಟಿಕ್ಸ್
*1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಚಿಕನ್ ಡ್ರಮ್ ಸ್ಟಿಕ್ಸ್‌ಗಳನ್ನು ಸ್ವಚ್ಛಗೊಳಿಸಿ, ಅವುಗಳ ಮೇಲೆ ಸಣ್ಣಗೆ ಗಾಯ (Slits) ಮಾಡಿ. ನಂತರ ಒಂದು ಪಾತ್ರೆಯಲ್ಲಿ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ನಿಂಬೆ ರಸ ಮತ್ತು ಕುಟ್ಟಿದ ಕಾಳು ಮೆಣಸನ್ನು ಹಾಕಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಚಿಕನ್‌ಗೆ ಹಚ್ಚಿ ಕನಿಷ್ಠ 30 ನಿಮಿಷಗಳಿಂದ 1 ಗಂಟೆ ಕಾಲ ನೆನೆಯಲು ಬಿಡಿ.
ನಂತರ ಒಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ನೆನಸಿದ ಚಿಕನ್ ಪೀಸ್ಗಳನ್ನು ಪ್ಯಾನ್‌ನಲ್ಲಿ ಇರಿಸಿ ಮಧ್ಯಮ ಉರಿಯಲ್ಲಿ ಚಿಕನ್ ಎರಡೂ ಬದಿಗಳಲ್ಲಿ ಕೆಂಪಾಗುವವರೆಗೆ ಹುರಿಯಿರಿ.
ನಂತರ ಪಾತ್ರೆಯಲ್ಲಿ ಉಳಿದಿರುವ ಮೊಸರಿನ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ. ಅದಕ್ಕೆ ಸ್ವಲ್ಪ ಗರಂ ಮಸಾಲಾ ಮತ್ತು ಕಸೂರಿ ಮೇಥಿಯನ್ನು ಮೇಲೆ ಉದುರಿಸಿ. ಪ್ಯಾನ್ ಮುಚ್ಚಿ, ಚಿಕನ್ ಪೂರ್ಣವಾಗಿ ಬೇಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಚಿಕನ್ ಬೆಂದ ಮೇಲೆ, ಗ್ರೇವಿ ಗಟ್ಟಿಯಾಗಿ ಚಿಕನ್‌ಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಿ. ಕೊನೆಯಲ್ಲಿ ಸ್ವಲ್ಪ ತಾಜಾ ಕಾಳು ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸೇವಿಸಿ (ಏಜೆನ್ಸೀಸ್).