ಸಂಗಾತಿಯ ಬೇಸರ ಗುರುತಿಸುವುದು ದೀರ್ಘಕಾಲ ಸಂಬಂಧ ಗಟ್ಟಿಯಾಗಿಟ್ಟುಕೊಳ್ಳಲು ಇರುವ ಬುನಾದಿ.
ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ವ್ಯವಧಾನವು ಅರ್ಧಕ್ಕರ್ಧ ಜಗಳವನ್ನು ನಿಲ್ಲಿಸುತ್ತದೆ.
ದಾಂಪತ್ಯ ಜೀವನದಲ್ಲಿ ಯಾವುದನ್ನು ಪಾಲನೆ ಮಾಡುವುದು ಸರಿ?.
stronger marriage study: ರೊಮ್ಯಾಂಟಿಕ್ ವಾಕ್, ನಿಯಮಿತ ಡೇಟ್ ನಡೆಯುತ್ತಲೇ ಇರುತ್ತದೆ. ಆದರೆ ದಂಪತಿ ಅಥವಾ ಪ್ರೇಮಿಗಳು ನಿಮ್ಮ ಸಂಗಾತಿ ಬೇಸರದಲ್ಲಿದ್ದಾಗ ಅಸಮಾಧಾನವನ್ನು ಕಡೆಗಣಿಸದೆ, ಅದಕ್ಕೆ ಭಾವನಾತ್ಮಕವಾಗಿ ಸ್ಪಂದಿಸಿದರೆ ನಿಮ್ಮ ಪ್ರೀತಿ ಕೊನೆಯ ತನಕ,,, ಹಲವು ವರ್ಷಗಳ ಕಾಲ ಗಟ್ಟಿಯಾಗಿ ಉಳಿದುಕೊಳ್ಳೋದು ಗ್ಯಾರಂಟಿ ಎನ್ನುತ್ತದೆ ಡೇಲಿ ಮೇಲ್ ವರದಿ
ಭಿನ್ನಾಭಿಪ್ರಾಯ ಅಥವಾ ನೋವಿನ ಕ್ಷಣಗಳಲ್ಲಿ ಸಂಗಾತಿಯ ಅಸಮಾಧಾನವನ್ನು ಕಡೆಗಣಿಸದೆ, ಅದಕ್ಕೆ ಭಾವನಾತ್ಮಕವಾಗಿ ಸ್ಪಂದಿಸುವ ದಂಪತಿಗಳು ಹೆಚ್ಚು ಸ್ಥಿರವಾದ ವೈವಾಹಿಕ ಜೀವನವನ್ನು ಹೊಂದಿರುತ್ತಾರೆ ಎಂದು ಹೊಸ ಸಂಶೋಧನೆ ಹೇಳಿದೆ
ಡೈಲಿ ಮೇಲ್ ವರದಿ ಮಾಡಿರುವಂತೆ, ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧನೆಯು ಪರಸ್ಪರರ ಭಾವನೆಗಳಿಗೆ ದಂಪತಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಪತ್ತೆ ಹಚ್ಚಲು, ಸಂಶೋಧಕ ಜಾನ್ ಗಾಟ್ಮನ್ ಅವರ ಸಮ್ಮುಖದಲ್ಲಿ ಸಂಶೋಧನೆ ನಡೆಸಲಾಗಿದೆ.
ಸಂಬಂಧಗಳನ್ನು ಅರ್ಥೈಸಿಕೊಳ್ಳುವ ರೀತಿ ಇದು
ಯಾವುದೇ ವಿಚಾರಕ್ಕಾದರೂ ದಂಪತಿ ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಾರೆ. ಧರ್ಮ, ಬಟ್ಟೆ, ಜಾತಿ, ಓಡಾಡುವ ಸ್ಥಳ, ತಿನ್ನುವ ಆಹಾರ ಎಲ್ಲ ವಿಚಾರಕ್ಕೂ ಗಲಾಟೆ ಇದ್ದೇ ಇರುತ್ತದೆ,. ಆದರೆ, ಇದೆಲ್ಲವನ್ನೂ ಬಿಟ್ಟು ಒಬ್ಬರಿಗೊಬ್ಬರ ಭಾವೆನೆಗೆ ಬೆಲೆ ಕೊಡೋ ಜೋಡಿಗಳು ದೀರ್ಘ ಕಾಲ ಉಳಿಯುತ್ತಾರೆ. ಇಂತಹ ದಂಪತಿ ಅಥವಾ ಪ್ರೇಮಿಗಳು ತಮ್ಮ ಕಿತ್ತಾಟವನ್ನು ನಿಭಾಯಿಸುವ ರೀತಿಯೇ ಬೇರೆ. ಇಬ್ಬರು..ಇಬ್ಬರ ಮಾತನ್ನು ಕೇಳಿಸಿಕೊಳ್ಳುತ್ತಾರೆ. ಭಾನೆ ಅರ್ಥ ಮಾಡಿಕೊಂಡು..ಕಷ್ಟ ಬಂದರೂ ದೂರವಾಗದೆ.. ಈ ಬಾರಿ ಒಬ್ಬರ ಆಸೆ..ಮತ್ತೊಂದು ಬಾರಿ ಮತ್ತೊಬ್ಬರ ಆಸೆಯನ್ನು ಪೂರ್ಣೈಸಿಕೊಳ್ಳಲು ಮುಂದಾಗುತ್ತಾರೆ.
ಜಗಳವಾಡೋದು, ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಹುಟ್ಟಿಕೊಂಡು ಮೌನವಾಗಿ ಅಥವಾ ಜೋರಾಗಿಯೇ ಕಿತ್ತಾಡಿಕೊಳ್ಳುವುದು ಕೆಲ ಸಂಬಂಧಕ್ಕೆ ಇಷ್ಟವಾಗೋದೇ ಇಲ್ಲ. ಹಾಗಾಗಿ ಕಷ್ಟದ ಟಾಪಿಕ್ ಬಂದ್ರೆ ಮಾತು ಬದಲಿಸ್ತಾರೆ. ಸುಮ್ಮನಾಗುತ್ತಾರೆ. ನಗಿಸುತ್ತಾರೆ. ಕಾದಾಟ ಬೇಡ ಈ ಟಾಪಿಕ್ ಇಲ್ಲಿಗೆ ಸಾಕು ಎನ್ನುತ್ತಾರೆ. ಆದರೆ ಹೀಗೆ ಮಾಡಬೇಡಿ ಸಮಾಧಾನಕರವಾಗಿ..ಛೇಷ್ಟೆ ಮಾಡುತ್ತ ನಿಮ್ಮ ಸಂಗಾತಿ ಸಮಸ್ಯೆಯನ್ನು ಸಮಾಧಾನವಾಗಿ ಕೇಳಿ ಬಗೆಹರಿಸಿಕೊಳ್ಳುವುದು ಸೂಕ್ತ
ತೀವ್ರ ಒತ್ತಡ, ಕೋಪ, ಭಯ ಹಾಗೂ ಓವರ್ ತಿಂಕ್ಗಳಿಂದ ತಲೆ ಕೆಡಿಸಿಕೊಳ್ಳುವವರು ಇರುತ್ತಾರೆ. ಇಂತಹ ಸ್ವಭಾವದವರ ಜಗಳ ಕೂಡ ಜೋರಾಗಿ ಇರುತ್ತದೆ. ಆದ್ರೆ ಇವರ ಸ್ಪೆಷಾಲಿಟಿ ಏನಂದ್ರೆ, ಕೋಪ ಬಂದ್ರೂ ಮಾತು ನಿಲ್ಲಿಸಲ್ಲ, ಸಮಸ್ಯೆಯಿಂದ ಓಡಿ ಹೋಗಲ್ಲ. ಜಗಳದ ಮಧ್ಯೆಯೂ ಒಬ್ಬರಿಗೊಬ್ಬರು ಕನೆಕ್ಟ್ ಆಗೇ ಇರ್ತಾರೆ.ಗಾಟ್ಮನ್ ಅವರ ಸಂಶೋಧನೆ ಪ್ರಕಾರ ಭಾವನೆಗೆ ಬೆಲೆ ಕೊಡೋದು, ಜೋರಾಗಿ ಜಗಳಾಡೋದು, ಮತ್ತು ಜಗಳದಿಂದ ತಪ್ಪಿಸಿಕೊಳ್ಳೋದು - ಈ ಮೂರೂ ಬೇರೆ ಬೇರೆ ಆದ್ರೂ ಸ್ಟೇಬಲ್ ಮದುವೆಯಲ್ಲಿ ಇರಬಹುದಾದ ಮೂರು ಮಾದರಿಗಳು.
ಜರ್ನಲ್ ಆಫ್ ಕನ್ಸಲ್ಟಿಂಗ್ ಅಂಡ್ ಕ್ಲಿನಿಕಲ್ ಸೈಕಾಲಜಿಯಲ್ಲಿ ಪ್ರಕಟವಾದ ಗಾಟ್ಮನ್ ಅವರ ಅಧ್ಯಯನದ ಪ್ರಕಾರ, ಸಂಶೋಧಕರು ನಾಲ್ಕು ವರ್ಷಗಳ ಅಂತರದಲ್ಲಿ ಎರಡು ವಿಭಿನ್ನ ಹಂತಗಳಲ್ಲಿ 73 ದಂಪತಿಗಳನ್ನು ಅಧ್ಯಯನ ಮಾಡಿದರು. ಈ ಮೂಲಕ ದಂಪತಿಗಳು ಹೇಗಿರುತ್ತಾರೆ. ಹೇಗಿದ್ದರೆ ಸಂಬಂಧ ವರ್ಷಗಳ ಕಾಲ ಆರೋಗ್ಯವಾಗಿ ಉಳಿಯುತ್ತೆ ಎನ್ನುವುದನ್ನು ತಿಳಿಸಿದರು, (ಏಜೆನ್ಸೀಸ್).