ತೆಂಗಿನ ಎಣ್ಣೆಯಲ್ಲಿನ ಲಾರಿಕ್ ಆಮ್ಲವು ಇದರ ವೈಶಿಷ್ಟ್ಯ್ಕೆ ಕಾರಣವಾದ ಅಂಶವಾಗಿದೆ. ಇನ್ನಿತರ ಯಾವುದೇ ಎಣ್ಣೆಯು ಲಾರಿಕ್ ಆಮ್ಲವನ್ನು ಹೊಂದಿರುವುದಿಲ್ಲ. ತೆಂಗಿನ ಎಣ್ಣೆಯು ಶೇ. 45ರಷ್ಟು ಲಾರಿಕ್ ಆಮ್ಲವನ್ನು ಹೊಂದಿದೆ. ತಾಯಿಹಾಲಿನಲ್ಲಿ ಮಾತ್ರ ಕಂಡು ಬರುವಂತಹ ಲಾರಿಕ್ ಆಮ್ಲವು ತೆಂಗಿನ ಎಣ್ಣೆಯಿಂದ ನಮಗೆ ಲಭ್ಯವಾಗಬಲ್ಲದು. ಇದು ಮೀಡಿಯಂ ಚೈನ್ ಫ್ಯಾಟಿ ಆಮ್ಲವಾಗಿದೆ. ಇದರ ಹೊರತಾಗಿ ನಾವು ಸೇವಿಸುವ ಸರಿಸುಮಾರು ಎಲ್ಲ ಎಣ್ಣೆಗಳಲ್ಲಿನ ಅಂಶಗಳು ಲಾಂಗ್ ಚೈನ್ ಫ್ಯಾಟಿ ಆಮ್ಲಗಳಾಗಿವೆ. ಲಾರಿಕ್ ಆಮ್ಲವು ಸುಮಾರು ಎಂಬತ್ತು ರೀತಿಯ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ ಎಂಬುದಾಗಿ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಆದ್ದರಿಂದ ಬ್ಯಾಕ್ಟೀರಿಯಾ, ಫಂಗಸ್ ಹಾಗೂ ವೈರಸ್ಸುಗಳ ನಿರ್ವಹಣೆಗೆ ತೆಂಗಿನಕಾಯಿ ಅಥವಾ ತೆಂಗಿನ ಎಣ್ಣೆ ಸೇವನೆಯು ಬಹಳ ಉತ್ತಮ. ತೆಂಗಿನ ಎಣ್ಣೆಯನ್ನು ನಾವು ಸೇವಿಸಿದ ನಂತರ ಇದರಲ್ಲಿನ ಲಾರಿಕ್ ಆಮ್ಲವು ಕರುಳಿನಲ್ಲಿ ಮೊನೊಲೋರಿನ್ ಎಂಬ ಅಂಶವಾಗಿ ಬದಲಾವಣೆಗೊಳ್ಳುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಕಾರಣವಾಗುತ್ತದೆ.
ಜಗತ್ತಿನಾದ್ಯಂತ ಮೊನೊಲೋರಿಕ್ ಅಂಶವನ್ನು ಮಾತ್ರೆಯ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಬಹಳ ದುಬಾರಿ. ಆದರೆ ಒಂದು ತೆಂಗಿನಕಾಯಿಯಿಂದ ಇಪ್ಪತ್ತು ಮಾತ್ರೆಗಳನ್ನು ತಯಾರಿಸಬಹುದು. ಫುಡ್ ಸೇಪ್ಟಿ ಎಂಬ ನಿಯತಕಾಲಿಕದ ವರದಿಯಂತೆ ಮೊನೊಲೋರಿನ್ ಅಂಬ ಅಂಶವು ಆರ್.ಎನ್.ಎ. ಮತ್ತು ಡಿ.ಎನ್.ಎ. ವೈರಸ್ಗಳ ವಿರುದ್ಧ ಹೋರಾಡಲು ಸಹಕರಿಸುತ್ತವೆ. ಕರುಳಿನ ಮೇಲೆ ಫಂಗಸ್ಗಳು ಪರಿಣಾಮವನ್ನು ಬೀರಿ ಅನೇಕ ಹೊಸ ಹೊಸ ಸಮಸ್ಯೆಗಳು ಉದ್ಭವವಾಗುತ್ತಿರುವುದು ಇತ್ತೀಚೆಗೆ ಹೆಚ್ಚು ಕಂಡುಬರುತ್ತಿದೆ. ಮಲ್ಟಿಪಲ್ ಸ್ಕಿ್ಲರೋಸಿಸ್ನಿಂದ ಪ್ರಾರಂಭವಾಗಿ ಐ.ಬಿ.ಎಸ್.ವರೆಗಿನ ನಿರ್ವಹಣೆಗೆ ತೆಂಗಿನ ಎಣ್ಣೆ ಅಥವಾ ತೆಂಗಿನಕಾಯಿ ಸೇವನೆ ಸಹಕಾರಿ. ಅನೇಕಾನೇಕ ಆಟೋ ಇಮ್ಯೂನ್ ಕಾಯಿಲೆಗಳು (ಆಟಿಸಂ, ಹಷಿಮೋಟೋ ಥೈರಾಯ್ಡಿಟಿಸ್, ರುಮೈಟಾಯ್್ಡ ಆರ್ಥರೈಟಿಸ್ ಇತ್ಯಾದಿ) ಇದರ ಸೇವನೆಯಿಂದ ಕಡಿಮೆಯಾಗಬಲ್ಲವು. ಇದನ್ನೂ ಓದಿ: ಧ್ಯಾನ, ಪ್ರಾಣಾಯಾಮಕ್ಕೆ ಪೂರಕ ಪದ್ಮಾಸನ
ಮನಿಲಾ ಯುನಿವರ್ಸಿಟಿಯು 2020ರ ಜನವರಿ 31ರಂದು ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ ತೆಂಗಿನ ಎಣ್ಣೆ ಹಾಗೂ ತೆಂಗಿನ ಉತ್ಪನ್ನಗಳು ಕರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಸಾಮಾನ್ಯ ತೆಂಗಿನ ಎಣ್ಣೆಗಿಂತ ಎಕ್ಸಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ಸೇವನೆಯು ಪರಿಣಾಮಕಾರಿಯಾಗಬಲ್ಲದು.
ಕೋಲ್ಡ್ ಕಂಪ್ರೆಸ್ ವಿಧಾನವನ್ನು ಬಳಸಿಕೊಂಡು ತೆಂಗಿನಕಾಯಿಯಿಂದ ಎಕ್ಸಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ತೆಗೆಯಲಾಗುತ್ತದೆ. ಇದು ಶುದ್ಧ ಹಾಗೂ ಆರೋಗ್ಯಸ್ನೇಹಿ ಎಣ್ಣೆಯಾಗಿದ್ದು ನಮ್ಮಲ್ಲಿನ ತೊಂದರೆಗಳನ್ನು ಕಡಿಮೆ ಮಾಡಲು ಅನುಕೂಲ ಮಾಡಿಕೊಡುತ್ತದೆ. ದೇಹದಲ್ಲಿನ ತೊಂದರೆ ಅಥವಾ ರೋಗಕ್ಕೆ ಅನುಗುಣವಾಗಿ ಇದರ ಪ್ರಮಾಣ, ಸೇವನೆಯ ವಿಧಾನ ನಿರ್ಧಾರವಾಗುತ್ತದೆ. ಮಕ್ಕಳು 1-1-1 ಚಮಚದಂತೆ ಹಾಗೂ ವಯಸ್ಕರು 2-2-2 ಚಮಚದಂತೆ ಊಟಕ್ಕೆ ಮೊದಲು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳಬಹುದು.