ಬೆಂಗಳೂರು: ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕವು ವಿಧಿಸುತ್ತಿರುವ ಶೇ.50 ಸುಂಕದಿಂದ ರಾಜ್ಯದ ಉತ್ಪನ್ನಗಳ ರ್ತು ವಹಿವಾಟಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬುದು ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕಾಸಿಯಾ ಅಭಿಪ್ರಾಯ ವ್ಯಕ್ತಪಡಿಸಿತು.
ಕಾಸಿಯಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಸಿಯಾ ಅಧ್ಯಕ್ಷ ಬಿ.ಆರ್, ಗಣೇಶ್ ರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಮಾಹಿತಿ ನೀಡಿದರು.
ರಾಜ್ಯದಿಂದ ಅಮೆರಿಕಕ್ಕೆ ಪ್ರಮುಖವಾಗಿ ಅಂತರಿಕ್ಷಯಾನ ಮತ್ತು ರಕ್ಷಣಾ ಕ್ಷೇತ್ರದ ಶೇ.50ರಷ್ಟು ಉತ್ಪನ್ನಗಳು ರ‌್ತಾಗುತ್ತಿವೆ. ಜವಳಿ ಮತ್ತು ಆಟೋಮೊಬೈಲ್ಸ್ ವಹಿವಾಟಿನಲ್ಲಿ ರಾಜ್ಯಕ್ಕೆ ಹೋಲಿಸಿದರೆ ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ರ‌್ತಾಗುತ್ತಿದೆ. ಅಮೆರಿಕದ ಶೇ.50 ಸುಂಕದಿಂದ ರ್ತು ವಹಿವಾಟಿಗೆ ಹೊಡೆತ ಬಿದ್ದಿದೆ. ಅದು ಎಷ್ಟರ ಮಟ್ಟಿಗೆ ಎಂಬುದು ಇನ್ನಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ ಎಂದರು.
ಮಾಹಿತಿ ನೀಡದ ಜಿಎಸ್‌ಟಿ ಮಂಡಳಿ:
ಪ್ರತಿ ವರ್ಷ ಒಪ್ಪಂದದಂತೆ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತಿದೆ. ಆದರೆ, ನಿಖರವಾಗಿ ಎಷ್ಟು ಸಾವಿರ ಮೊತ್ತದ ವಹಿವಾಟು ನಡೆಯುತ್ತಿದೆ ಎಂದು ಜಿಎಸ್‌ಟಿ ಮಂಡಳಿಗೆ ಮಾಹಿತಿ ಕೇಳಿದ್ದೇವೆ. ಇನ್ನೂ ನಿಖರ ಮಾಹಿತಿ ನೀಡಿಲ್ಲ ಎಂದು ಹುಸೇನ್ ಉತ್ತರಿಸಿದರು.
ವಹಿವಾಟಿಗೆ ಪರ್ಯಾಯ ಮಾರ್ಗ:
ರಷ್ಯಾದಿಂದ ಶೇ.60ರಿಂದ 65ರಷ್ಟು ಪ್ರಮಾಣದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಅಮೆರಿಕ ಈ ರೀತಿ ವರ್ತಿಸುತ್ತಿದೆ. ಅದರಂತೆ ನಾವು ಅಮೆರಿಕಕ್ಕೆ ರ‌್ತಾಗಬೇಕಿರುವ ಭಾರತೀಯ ಉತ್ಪನ್ನಗಳ ಮಾರಾಟಕ್ಕೆ ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ. ಕಾಂಬೋಡಿಯಾ, ಫಿಲಿಪೈನ್ಸ್ ಸೇರಿ ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿವೆ ಎಂದರು.