ಲೈಫ್‌ಸ್ಟೈಲ್

ನಿಮ್ಮ ಮಕ್ಕಳಿಗೆ ಸಿಹಿ ತಿನಿಸುತ್ತೀರಾ! ಯಾವುದೇ ಕಾರಣಕ್ಕೂ ಕೃತಕ ಸಿಹಿ ಬೆರೆಸಿದ ಪಾನೀಯಗಳನ್ನು ಕೊಡಬೇಡಿ; Juice

Juice | ಸಿಹಿ ಎಂದರೆ ಹೆಚ್ಚಾಗಿ ಮಕ್ಕಳು ಇಷ್ಟ ಪಡುತ್ತಾರೆ. ಸಿಹಿಯಾದ ತಿಂಡಿ, ತಿನಿಸುಗಳು, ಐಸ್​ಕ್ರೀಂ, ಜ್ಯೂಸ್​, ಚಾಕೊಲೇಟ್​ ಹೀಗೆ ಮಕ್ಕಳು ಸಿಹಿಯಾದ ಪದಾರ್ಥಗಳನ್ನು ತಿನ್ನಲು ಹಠ ಮಾಡುತ್ತಾರೆ. ಆದರೆ ನೀವು ನಿಮ್ಮ ಮಕ್ಕಳ ಸಂತೋಷಕ್ಕಾಗಿ ಇಂತಹ ಸಿಹಿ ಪದಾರ್ಥಗಳನ್ನು ನೀಡುವ ಮುನ್ನ ಎಚ್ಚರದಿಂದಿರಬೇಕು. ಅದರಲ್ಲೂ ಮಕ್ಕಳಿಗೆ ಸಿಹಿ ಮಿಶ್ರಿತ ಪಾನೀಯಗಳನ್ನ ಕೊಡಲೇಬಾರದು ಎಂದು ವೈಜ್ಞಾನಿಕ ಸಮಿತಿ ತಿಳಿಸಿದೆ.

ಈ ಬಗ್ಗೆ ಪೌಷ್ಟಿಕಾಂಶದ ವೈಜ್ಞಾನಿಕ ಸಲಹಾ ಸಮಿತಿ (SACN) ಮಾಹಿತಿ ನೀಡಿದ್ದು, ಸಿಹಿಯಾದ ಪಾನೀಯಗಳಲ್ಲಿ ಕೃತಕ ಸಿಹಿಕಾರಕಗಳನ್ನು ಮಿಶ್ರಣ ಮಾಡಲಾಗಿರುತ್ತದೆ ಹಾಗೂ ಸಹಿಯಾದ ಪಾನೀಯಗಳು ಆಸ್ಪರ್ಟೇಮ್, ಸ್ಟೀವಿಯಾ, ಸ್ಯಾಕ್ರರಿನ್ ಮತ್ತು ಸುಕ್ರಲೋಸ್‌ನಂತಹ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಚಿಕ್ಕ ಮಕ್ಕಳು ಇಂತಹ ಸಿಹಿ ಪಾನೀಯಗಳ ಬದಲಿಗೆ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ಎಂದು ಶಿಫಾರಸು ಮಾಡಿದೆ.

ಕೃತಕ ಸಿಹಿಕಾರಕಗಳಿಂದಾಗುವ ಅಪಾಯ ಏನು?

5) ಹೆಚ್ಚಾಗಿ ಸಿಹಿಯನ್ನು ತಿನ್ನುವುದರಿಂದ ದೇಹದ ತೂಕ ಸ್ವಲ್ಪ ಮಟ್ಟಿಗೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

4)ಈ ಸಿಹಿಕಾರಕಗಳು ಮಕ್ಕಳಲ್ಲಿ ಸಿಹಿ ತಿಂಡಿಗಳ ಮೇಲಿನ ಆಸೆಯನ್ನು ಹೆಚ್ಚಿಸಬಹುದು ಮತ್ತು ಅವುಗಳಿಂದ ಬಿಡುಗಡೆ ಪಡೆಯುವುದು ಕಷ್ಟಕರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

3)ಪಾನೀಯಗಳಲ್ಲಿ ಸಕ್ಕರೆಯ ಬದಲಾಗಿ ಕೃತಕ ಸಿಹಿಕಾರಕಗಳನ್ನು ಅಳವಡಿಸಲಾಗಿರುತ್ತದೆ. ಇವು ಕಡಿಮೆ ಹಾಗೂ ಯಾವುದೇ ಕ್ಯಾಲೊರಿಗಳಿಲ್ಲದೆ ಸಿಹಿ ರುಚಿಯನ್ನು ನೀಡುತ್ತವೆ.

2) ಇದು ಟೈಪ್ 2 ಮಧುಮೇಹ, ಬೊಜ್ಜು ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗಬಹುದು.

1) ಕೃತಕ ಮಿಶ್ರಿತ ಸಿಹಿ ಸೇವಿಸುವುದರಿಂದ ಹಲ್ಲು ಹುಳುಕಾಗುವ ಅಪಾಯ ಹೆಚ್ಚಾಗಿರುತ್ತದೆ.

ಇನ್ನೂ ಈ ಬಗ್ಗೆ ಲೀಡ್ಸ್ ವಿಶ್ವವಿದ್ಯಾಲಯದ ಮನೋಜೀವಶಾಸ್ತ್ರದ ಚೇರ್ಮನ್ ಪ್ರೊಫೆಸರ್ ಗ್ರಹಾಂ ಫಿನ್ಲೇಸನ್ ಮಾತನಾಡಿದ್ದು, ವಿಶೇಷವಾಗಿ ಮಕ್ಕಳ ವಿಷಯದಲ್ಲಿ ಈ ಬಗ್ಗೆ ಜಾಗರೂಕರಾಗಿರುವುದು ಮುಖ್ಯವಾಗಿದೆ, ಆದಾಗ್ಯೂ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಸಕ್ಕರೆಯೇತರ ಸಿಹಿಕಾರಕಗಳನ್ನು ಪಾನೀಯಗಳಲ್ಲಿ ಬಳಸಲಾಗುತ್ತದೆ. ಇದನ್ನು ಸೇವಿಸುವುದು ಆರೋಗ್ಯಕ್ಕೆ ಒಳಿತಲ್ಲ ಎಂದಿದ್ದಾರೆ.

ಪೌಷ್ಟಿಕ ತಜ್ಞರು ಹೇಳೋದೇನು?

ನಿಮ್ಮ ಮಕ್ಕಳು ಸಕ್ಕರೆಯನ್ನು ಒಳಗೊಂಡಿರುವ ಸಿಹಿಯಾದ ಆಹಾರಗಳನ್ನು ಹೆಚ್ಚಾಗಿ ಸೇವಿಸಿದಾಗ ಅವರಿಗೆ ಈ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮತ್ತು ತೆಳ್ಳಗಿನ ಪ್ರೋಟೀನ್​ನಂತಹವುಗಳ ಜೊತೆಗೆ ಬೆಳೆಯುತ್ತಿರುವ ಮಗುವಿನ ದೇಹಕ್ಕೆ ಅಗತ್ಯವಿರುವ ಪೌಷ್ಟಿಕ ಆಹಾರಗಳನ್ನು ಸೇವಿಸಲು ಅವರ ಹೊಟ್ಟೆಯಲ್ಲಿ ಕಡಿಮೆ ಸ್ಥಳಾವಕಾಶವಿರಬಹುದು. ಎಲ್ಲದರಂತೆಯೇ ಬಾಲ್ಯದಲ್ಲಿ ಅತಿಯಾದ ಸಕ್ಕರೆಯನ್ನು ಸೇವಿಸುವುದರಿಂದ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಅನಾರೋಗ್ಯಕರ ಬಯಕೆಗಳಿಗೆ ಕಾರಣವಾಗಬಹುದು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ.