chanakya niti: ಆಚಾರ್ಯ ಚಾಣಕ್ಯ ಒಬ್ಬ ಮಹಾನ್ ರಾಜಕಾರಣಿ, ಅರ್ಥಶಾಸ್ತ್ರಜ್ಞ ಮತ್ತು ಚಿಂತಕ ಎಂದು ಪರಿಗಣಿಸಲಾಗಿದೆ. ಇವರ ತತ್ವಗಳು ಇನ್ನೂ ಜನರ ಜೀವನ ಮಾರ್ಗ ಹುಡುಕಲು ಪ್ರಸ್ತುತವಾಗಿರುವ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು. ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ್ತಿದ್ದೇವೆ.
ಚಾಣಕ್ಯ ನೀತಿಯಲ್ಲಿ ( chanakya niti ) ಹೆಚ್ಚು ಹಣ ಖರ್ಚು ಮಾಡುವುದರಿಂದ ವ್ಯಕ್ತಿ ಬಡತನಕ್ಕೆ ಕಾರಣವಾಗಬಹುದು ಎಂದು ಹೇಳುತ್ತಾನೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...
ಆದಾಯ ಏನೇ ಇರಲಿ, ಅದಕ್ಕೆ ತಕ್ಕಂತೆ ನೀವು ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಅಭ್ಯಾಸವು ವಿಪತ್ತಿಗೆ ಕಾರಣವಾಗುತ್ತದೆ.
ಹಣವನ್ನು ಕೇವಲ ಸಂಗ್ರಹಿಸುವ ಬದಲು, ಅದನ್ನು ಬೆಳೆಸುವ ಮಾರ್ಗಗಳನ್ನು ನೀವು ಹುಡುಕಬೇಕು. ಇದನ್ನು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಯೋಜನೆಗಳ ಮೂಲಕ ಮಾಡಬಹುದು.
ಹಣವನ್ನು ಅವಶ್ಯಕ ಇರುವ ವಸ್ತುಗಳ ಮೇಲೆ ಹೂಡಿಕೆ ಮಾಡಬೇಕು. ಅನಾವಶ್ಯಕವಾಗಿ ಹಣ ಖರ್ಚು ಮಾಡುವ ಬದಲು ಭೂಮಿ, ಆಸ್ತಿ ಖರೀದಿ, ಬಂಗಾರ, ಬೆಳ್ಳಿ ಖರೀದಿ ಮಾಡಲು ಹೂಡಿಕೆ ಮಾಡಬೇಕು. ಇದನ್ನೂ ಓದಿ: Chanakya Niti: ಚಾಣಕ್ಯ ಹೇಳುವಂತೆ ಇಂತಹ ವ್ಯಕ್ತಿಗಳ ಜೊತೆ ಎಂದಿಗೂ ಸಂಬಂಧ ಬೆಳೆಸಬಾರದು!
ಭವಿಷ್ಯಕ್ಕಾಗಿ ನೀವು ಯಾವಾಗಲೂ ನಿಮ್ಮ ಉಳಿತಾಯದ ಒಂದು ಭಾಗವನ್ನು ಉಳಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ.
ಹೆಚ್ಚು ಹಣವನ್ನು ಖರ್ಚು ಮಾಡುವುದರಿಂದ ವ್ಯಕ್ತಿ ಬಡತನಕ್ಕೆ ಕಾರಣವಾಗಬಹುದು. ಜೀವನದಲ್ಲಿ ಆರ್ಥಿಕ ಶಿಸ್ತು ಅತ್ಯಗತ್ಯ. ತಪ್ಪು ಮಾರ್ಗಗಳಿಂದ ಗಳಿಸಿದ ಸಂಪತ್ತು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕ ಹಣವನ್ನು ಗಳಿಸಬೇಕು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.